Uttara Kannada: ಕಾರವಾರ ನಗರಸಭೆಯಿಂದ ಬಡವರಿಗಾಗಿ ನೈಟ್ ಶೆಲ್ಟರ್ ಸೌಲಭ್ಯ!

By Govindaraj S  |  First Published May 31, 2022, 12:40 AM IST

ಒಂದೂರಿನಿಂದ ಮತ್ತೊಂದು ಊರಿಗೆ ತೆರಳುವವರಿಗೆ ಕೆಲವೊಮ್ಮೆ ವಾಹನ ಸೌಲಭ್ಯ ದೊರಕದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಹೋಟೆಲ್ ಅಥವಾ ಲಾಡ್ಜ್‌ಗಳಲ್ಲಿ ತಂಗುವಾ ಅಂದ್ಕಡ್ರೆ ಅವುಗಳು ತುಂಬಾ ಕಾಸ್ಟ್ಲಿ.


ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಮೇ.31): ಒಂದೂರಿನಿಂದ ಮತ್ತೊಂದು ಊರಿಗೆ ತೆರಳುವವರಿಗೆ ಕೆಲವೊಮ್ಮೆ ವಾಹನ ಸೌಲಭ್ಯ ದೊರಕದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಹೋಟೆಲ್ ಅಥವಾ ಲಾಡ್ಜ್‌ಗಳಲ್ಲಿ ತಂಗುವಾ ಅಂದ್ಕಡ್ರೆ ಅವುಗಳು ತುಂಬಾ ಕಾಸ್ಟ್ಲಿ. ಇದರಿಂದಾಗಿ ಬಡವರಂತೂ ಕೆಲವೊಮ್ಮೆ ಬಸ್ ನಿಲ್ದಾಣದಲ್ಲೇ ತಂಗಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾರಣದಿಂದ ಕಾರವಾರ ನಗರಸಭೆ ನೈಟ್ ಶೆಲ್ಟರ್ ವ್ಯವಸ್ಥೆಯ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಡಲು ಮುಂದಾಗಿದೆ. ಅತ್ಯುತ್ತಮ ವ್ಯವಸ್ಥೆಯೊಂದಿಗೆ ಈ ಯೋಜನೆಯನ್ನು ಅನುಷ್ಠಾನ ಕೂಡಾ ಗೊಳಿಸಲಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.. 

Tap to resize

Latest Videos

ಹೌದು! 2014ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ನೈಟ್ ಶೆಲ್ಟರ್ ಯೋಜನೆಯನ್ನು ಕಾರವಾರ ನಗರ ಸಭೆಯು ಇದೀಗ ಅನುಷ್ಠಾನಗೊಳಿಸಿದೆ.‌ ಈ ಮೂಲಕ ದೂರದ ಊರುಗಳಿಂದ ಬರುವ ಜನರು ಪ್ರಯಾಣದ ವ್ಯವಸ್ಥೆಯಿಲ್ಲದೇ, ಬಸ್ ಸ್ಟಾಪ್ ‌ನಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಮಲಗಿ ವಿಶ್ರಾಂತಿ ಪಡೆಯುವ ಬದಲು ಉತ್ತಮ ವ್ಯವಸ್ಥೆಗಳೊಂದಿಗೆ ನೈಟ್ ಶೆಲ್ಟರ್‌ನಲ್ಲಿ ಮಲಗಬಹುದಾಗಿದೆ. ಬಡವರಿಗಂತೂ ಕೆಲವೊಮ್ಮೆ ಹೋಟೆಲ್ ಅಥವಾ ಲಾಡ್ಜ್‌ಗಳಿಗೆ ನೀಡಲು ಕೂಡಾ ಹಣವಿರದ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು ಕೆಲವೊಮ್ಮೆ ಎಲ್ಲೂ ತಂಗಲು ರೂಂ ದೊರೆಯದಂತಹ ಪರಿಸ್ಥಿತಿ ಕಾಣಸಿಗುತ್ತದೆ. 

ಜ್ವರ ಎಂದು ಆಸ್ಪತ್ರೆಗೆ ದಾಖಲಾದವಳು ವಾಪಸ್ ಶವವಾಗಿ ಬಂದಳು, ನವ ವಿವಾಹಿತೆಯ ದುರಂತ ಸಾವು

ಇಂತಹ‌ ಸಂದರ್ಭಗಳಲ್ಲಿ ಬಡವರು  ಬೀದಿಗಳಲ್ಲಿ, ಗ್ರೌಂಡಗಳಲ್ಲಿ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಮಲಗಿ ರಾತ್ರಿ ಕಳಿದು ಪಡಬಾರದ ಕಷ್ಟ ಪಟ್ಟು ಊರಿಗೆ ತೆರಳುತ್ತಾರೆ. ಇದನ್ನು ಗಮನಿಸಿದ ಕಾರವಾರ ನಗರ ಸಭೆಯು ತಮ್ಮ ಕಟ್ಟಡದಲ್ಲಿ ಒಂದು ನೂತನ ಕೊಠಡಿ ಮೀಸಲಿಟ್ಟು ಅದರಲ್ಲಿ 20 ಬೆಡ್‌ಗಳನ್ನು ಅಳವಡಿಸಿ ನಿರಾಶ್ರಿತರಿಗೆ ತಂಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಅದು ಕೂಡಾ ಕೇವಲ ಒಂದು ಬೆಡ್‌ಗೆ 100 ರೂ.ನಂತೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಲಾಗಿದ್ದು  ಜತೆಗೆ ಎಲ್ಲಾ ತರಹದ ಸುರಕ್ಷಿತ ಕ್ರಮಗಳನ್ನೂ ಕೈಗೊಳ್ಳಲಾಗಿದೆ. 

ಅಂದಹಾಗೆ, ನೈಟ್ ಶೆಲ್ಟರ್ ಯೋಜನೆಯು ರಾಜ್ಯದಲ್ಲಿ ಅದು ಕೂಡಾ ಮೊದಲ ಬಾರಿಗೆ ಕಾರವಾರದಲ್ಲೇ ಪ್ರಯೋಗವಾಗಿದೆ. ಈ ಮೊದಲು ಕೇಂದ್ರ ಸರ್ಕಾರ ದೇಶದ ಎಲ್ಲಾ ನಗರ ಸಭೆಗಳಲ್ಲಿಯೂ ನೈಟ್ ಶೆಲ್ಟರ್ ತೆರೆಯಲು ಅನುದಾನ ಬಿಡುಗಡೆ ಮಾಡಿತ್ತು‌. ಈ ಯೋಜನೆ ಕರ್ನಾಟಕದಲ್ಲಿ ಅಷ್ಟೊಂದು ಯಶಸ್ಸು ಕಾಣದ ಕಾರಣ ಹಲವು ನಗರಸಭೆಗಳು ತಮಗೆ ಬಂದ‌ ಅನುದಾನವನ್ನು ವಾಪಾಸ್ ಕಳುಹಿಸಿದ್ದವು.‌ ಇದಕ್ಕೆ ಕಾರಣ ನೈಟ್ ಶೆಲ್ಟರ್ ಅನ್ನು ನಿಭಾಯಿಸೋದು ಸುಲಭದ ಕೆಲಸವಲ್ಲ. ಪ್ರತಿಯೊಂದನ್ನೂ ಕೂಡಾ ಸುಸಜ್ಜಿತವಾಗಿ ಇರಿಸಬೇಕು ಮತ್ತು ತಂಗಿದವರಿಗೆ ಅಷ್ಟೇ ಸುರಕ್ಷತೆ ನೀಡಬೇಕು‌. 

Karwar: ಹೊಲಗಳಿಗಾಯ್ತು, ಇದೀಗ ಗ್ರಾಮಗಳಿಗೆ ಹುಳದ ಕಾಟ: ಆತಂಕದಲ್ಲಿರುವ ಗ್ರಾಮಸ್ಥರು!

ಅಲ್ಲದೇ, ಊಟದ ವ್ಯವಸ್ಥೆ ಕೂಡಾ ಕೊಡಬೇಕು, ಅದು ಕೂಡಾ ಕಡಿಮೆ ವೆಚ್ಚದಲ್ಲಿ. ಹೀಗಾಗಿ ಇದರ ಸಹವಾಸಕ್ಕೆ ರಾಜ್ಯದ ಬೇರೆ ಬೇರೆ ನಗರ ಸಭೆಗಳು ಹೋಗಿಲ್ಲ. ಆದರೆ, ಕಾರವಾರ ನಗರ ಸಭೆ ಮಾತ್ರ ಈ ಸಾಹಸಕ್ಕೆ ಕೈ ಹಾಕಿರೋದ್ರಿಂದ ಜನರಿಂದ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಕನಸಿನ ನೈಟ್ ಶೆಲ್ಟರ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕಾರವಾರ ನಗರಸಭೆ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಇದರ ಉಪಯೋಗವನ್ನು ಸಾರ್ವಜನಿಕರು ಉತ್ತಮವಾಗಿ  ಪಡೆದುಕೊಳ್ಳುವಂತಾಗಬೇಕು. 

click me!