International Yoga Dayಗೆ ಮೋದಿ ಆಗಮನ, ಮೈಸೂರಿನಲ್ಲಿ ಭರ್ಜರಿ ಸಿದ್ಧತೆ

By Suvarna NewsFirst Published May 23, 2022, 8:45 PM IST
Highlights

ಮೈಸೂರಿನಲ್ಲಿ ನಡೆಯಲಿರುವ  ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ  ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.

ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಮೈಸೂರು (ಮೇ) : 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ (International Yoga Day) ಮೈಸೂರು (Mysuru) ಸಜ್ಜಾಗುತ್ತಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi ) ಮೈಸೂರಿಗೆ ಆಗಮಿಸುತ್ತಿರುವುದು ಸ್ಥಳೀಯ ನಾಯಕರಲ್ಲಿ ಹುರುಪು ತಂದಿದೆ. ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆಗಳನ್ನು  ಕೈಗೊಂಡಿದ್ದು ಯೋಗ ನಡೆಯೋದು ಅರಮನೆ ಆವರಣವೋ ಅಥವಾ ರೇಸ್ ಕೋರ್ಸ್ ನಲ್ಲಿಯೋ ಇನ್ನಷ್ಟೇ ತೀರ್ಮಾನ ಆಗಬೇಕಿದೆ.

ಮೈಸೂರಿನಲ್ಲಿ 2017 ರಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 54 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಒಂದೇ ಸ್ಥಳದಲ್ಲಿ ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಬಾಬಾ ರಾಮ್ ದೇವ್ ಉತ್ತರ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸುವ ಮೂಲಕ ಗಿನ್ನಿಸ್ ಪುಟ ಸೇರಿದ್ದರು. ಈ ಬಾರಿ ಯೋಗ ನಗರಿಯೂ ಆಗಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಪ್ರದರ್ಶನ ಮೆರುಗು ಪಡೆದುಕೊಳ್ಳುತ್ತಿದೆ. ಅದಕ್ಕೆ ಕಾರಣ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮೈಸೂರಿನಲ್ಲಿ ಭಾಗವಹಿಸುತ್ತಿರುವುದು.

TEXTBOOK CONTROVERSY ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷ

ಈ ಭಾರಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ಮೈಸೂರಿನಲ್ಲಿ ಎರಡು ಸ್ಥಳ ಗುರುತಿಸಲಾಗಿದೆ. ಖುದ್ಧು ಪ್ರಧಾನಮಂತ್ರಿಗಳು ಆಗಮಿಸುತ್ತಿರುವ ಕಾರಣ ಭದ್ರತೆಯ ದೃಷ್ಟಿಯಿಂದ ಯಾವ ಸ್ಥಳದಲ್ಲಿ ಯೋಗವನ್ನ ಮಾಡಬೇಕೆಂಬುದು ಜಿಲ್ಲಾಡಳಿಯ ಚಿಂತನೆ ನಡೆಸುತ್ತಿದೆ. ಅರಮನೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ರೆ ಕೇವಲ 15 ಸಾವಿರ ಜನರಿಗೆ ಮಾತ್ರ ಅವಕಾಶ ಮಾಡಿಕೊಡಬಹುದಾಗಿದೆ. ಮೋದಿ ಅವರು ಆಗಮಿಸುತ್ತಿರುವ ಕಾರಣ ದೊಡ್ಡ ಮಟ್ಟದಲ್ಲಿ ಯೋಗ ಪಟುಗಳನ್ನ ಸೇರಿಸಬೇಕೆಂಬುದು ಮೈಸೂರು ಜಿಲ್ಲಾಡಳಿತದ ಪ್ಲಾನ್ ಆಗಿದೆ. 

ರೇಸ್ ಕೋರ್ಸ್ ನಲ್ಲಿ ಕಾರ್ಯಕ್ರಮ ನಡೆಸಿದರೆ ಅಂದಾಜು ಒಂದುವರೆ ಲಕ್ಷ ಜನರನ್ನ ಒಂದೇ ಕಡೆ ಸೇರಿಸಿ ಯೋಗ ಮಾಡಿಸುವ ಅವಕಾಶವಿದ್ದು, ಚಾಮುಂಡಿ ಬೆಟ್ಟದ ರಮಣಿಯ ದೃಶ್ಯದ ಸಮೇತವಾಗಿ ತೋರಿಸುವ ಅವಕಾಶ ಸಹ ಇದೆ. ಈಗಾಗಿ ಎಲ್ಲವನ್ನೂ ನೋಡಿಕೊಂಡು ಸ್ಥಳ ನಿಗದಿ ಮಾಡಲಾಗುತ್ತೆ ಎಂದಿದ್ದಾರೆ ಸಂಸದ ಪ್ರತಾಪ್ ಸಿಂಹ. ಇದರ ಜೊತೆಗೆ ಮೈಸೂರಿಗೆ ಕೇಂದ್ರ ಸರ್ಕಾರ ಕೊಟ್ಟಿರುವ ಅಭಿವೃದ್ಧಿಯ ಬಗ್ಗೆ ಜ‌ನರಿಗೆ ತಿಳಿಸುವುದು ಬಿಜೆಪಿ ಪಕ್ಷದ ಪ್ಲಾನ್ ಸಹ ಆಗಿದೆ. 

Karnataka Textbook controversy ಕುವೆಂಪುಗೆ ಅವಮಾನ ಆರೋಪಕ್ಕೆ ಸಚಿವ ನಾಗೇಶ್ ಗರಂ
 
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಮೈಸೂರಿಗೆ ಕರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಸದ ಪ್ರತಾಪ್ ಸಹಜವಾಗಿಯೇ ಖುಷಿಯಾಗಿದ್ದಾರೆ. ಸಿಎಂ ಸಭೆಯ ಬಳಿಕೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಂಪ್ಲೀಟ್ ಬ್ಲೂ ಪ್ರಿಂಟ್ ಸಿದ್ಧವಾಗಲಿದೆ.

ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ಇನ್ನು ಸಿಇಟಿ ಪರೀಕ್ಷೆ

click me!