ಜನಸಾಮಾನ್ಯರಿಗೆ ಉತ್ತೇಜನಕಾರಿ ಕೊಡುಗೆ: ಸಂಸದ ರಾಘವೇಂದ್ರ ಅಭಿನಂದನೆ| ಆರ್ಥಿಕ ಹಿಂಜರಿತ ತಡೆಯಲು ಉತ್ಪಾದನಾ ವಲಯಕ್ಕೆ ಹೊಸ ಸುಧಾರಣೆಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಸಂಸದ ರಾಘವೇಂದ್ರ ಅಭಿನಂದನೆ| ಹಲವು ಸುಧಾರಣಾ ಕ್ರಮಗಳಿಗೆ ಉದ್ಯಮ ವಲಯದಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ| ಇಂತಹ ಪರಿಣಾಮಕಾರಿ ಮತ್ತು ದೃಢವಾದ ನಿರ್ಧಾರ ಪ್ರಕಟಿಸಿರುವುದು ಶ್ಲಾಘನೀಯ|
ಶಿವಮೊಗ್ಗ(ಸೆ. 27) ಆರ್ಥಿಕ ಹಿಂಜರಿತ ತಡೆಯಲು ಉತ್ಪಾದನಾ ವಲಯಕ್ಕೆ ಹೊಸ ಸುಧಾರಣೆಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ವಾರ ಕೇಂದ್ರ ಹಣಕಾಸು ಸಚಿವರು ಉತ್ಪಾದನಾ ವಲಯಗಳ ತೆರಿಗೆ ದರದಲ್ಲಿ ಹೊಸ ಸುಧಾರಣೆಗಳನ್ನು ಘೋಷಿಸುವ ಮೂಲಕ ಜನಸಾಮಾನ್ಯರಿಗೆ ಹಾಗೂ ಉತ್ಪಾದನಾ ವಲಯಕ್ಕೆ ಉತ್ತೇಜನಕಾರಿ ಕೊಡುಗೆಗಳನ್ನು ನೀಡಿದ್ದಾರೆ. 1991ರ ನಂತರ ದೇಶದಲ್ಲಿ ಉತ್ಪಾದನಾ ವಲಯದಲ್ಲಿ ಇನ್ನೂ ಹೆಚ್ಚಿನ ಆರ್ಥಿಕತೆಯ ಭದ್ರತೆಯ ವಿಶ್ವಾಸ ಮೂಡಿಸುವಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಈ ರೀತಿಯ ಹಲವು ಸುಧಾರಣಾ ಕ್ರಮಗಳಿಗೆ ಉದ್ಯಮ ವಲಯದಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಇಂತಹ ಪರಿಣಾಮಕಾರಿ ಮತ್ತು ದೃಢವಾದ ನಿರ್ಧಾರ ಪ್ರಕಟಿಸಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.
2019 ರ ಆ.23 ರಿಂದ 2020 ರ ಮಾ.31 ರವರೆಗೆ ಮೋಟರ್ ವಾಹನ ಖರೀದಿಸುವ ಮೋಟರ್ ವೆಹಿಕಲ್ ಮೇಲೆ ಶೇ. 15 ವಿಶೇಷ ಹೆಚ್ಚುವರಿ ಸವಕಳಿ ಪ್ರಕಟಿಸಲಾಗಿದೆ. ಅಂದರೆ ಮೋಟಾರ್ ಕಾರುಗಳಿಗೆ ಶೇ. 30 ಹಾಗೂ ಮೋಟಾರ್ ಬಸ್ಸು, ಲಾರಿ ಮತ್ತು ಟ್ಯಾಕ್ಸಿಗಳಿಗೆ ಶೇ. 45 ವಿಶೇಷ ಹೆಚ್ಚುವರಿ ಸವಕಳಿ ಘೋಷಿಸಿದೆ. ಆದ್ಯತಾ ವಲಯದಲ್ಲಿ ಬರುವ ಎಕ್ಸ್‌ಪೋರ್ಟ್ ಕ್ರೆಡಿಟ್ ಮಾರ್ಗದರ್ಶಿ ಸೂತ್ರಗಳನ್ನು ಆರ್‌ಬಿಐ ರೂಪಿಸಿದೆ. ಇದರ ಪ್ರಕಾರ ಆದ್ಯತಾ ವಲಯಲದಲ್ಲಿ 36 ಸಾವಿರ ಕೋಟಿಯಿಂದ 68 ಸಾವಿರ ಕೋಟಿಯವರೆಗೆ ಎಕ್ಸ್‌ಪೋರ್ಟ್ ಕ್ರೆಡಿಟ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
1 ಲಕ್ಷ ರು.ಗಳಿಗಿಂತ ಹೆಚ್ಚು ನಗದು ವ್ಯವಹಾರಕ್ಕೆ ಅಗ್ರಿಕಲ್ಟರ್ ಪ್ರಾಡಕ್ಟ್ ಮಾರ್ಕೆಟಿಂಗ್ ಕಮಿಟಿ ಮುಖಾಂತರ ಪಾವತಿ ಮಾಡುವವರಿಗೆ ಶೇ. 2 ರಷ್ಟುಟಿಡಿಎಸ್ ವಿನಾಯಿತಿ ಪ್ರಕಟಿಸಲಾಗಿದೆ. ರೈತರಿಗೆ ಹಾಗೂ ಕೃಷಿ ವಲಯದಲ್ಲಿ ನಿರತವಾಗಿರುವ ಇತರ ಪಾಲುದಾರರಿಗೆ ಹಾಗೂ ಅಗ್ರಿಕಲ್ಟರ್ ಪ್ರಾಡಕ್ಟ್ ಮಾರ್ಕೆಟಿಂಗ್ ಕಮಿಟಿ ಮುಖಾಂತರ ವಹಿವಾಟು ನಡೆಸುವವರಿಗೆ ಆಗುವ ತೊಂದರೆಯನ್ನು ಈ ಯೋಜನೆಯ ಮುಖಾಂತರ ನಿವಾರಿಸುವ ಉದ್ದೇಶ ಹೊಂದಲಾಗಿದೆ.
ಸಾಮಾಜಿಕ ಹೊಣೆಗಾರಿಕೆಯ ವ್ಯಾಪ್ತಿಗಾಗಿ ಶೇ. 2 ಸಾಮಾಜಿಕ ಹೊಣೆಗಾರಿಕೆ ನಿಧಿ ಸ್ಥಾಪನೆ ಮಾಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಕಂಪನಿಗಳು ಈ ಅನುದಾನದಡಿ ಸಂಶೋಧನೆ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗು ಮೆಡಿಸಿನ್ ವಲಯಗಳಲ್ಲಿ ಉಪಯೋಗಿಸಲು ಅವಕಾಶ ಕಲ್ಪಿಸಿದೆ.
ಬಂಡವಾಳ ಮಾರುಕಟ್ಟೆಗೆ ಹಣಕಾಸು ಒದಗಿಸಲು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಕಂಪನಿಯ ಈಕ್ವಿಟಿ ಷೇರು, ಈಕ್ವಿಟಿ ಓರಿಯಂಟೆಡ್ ಫಂಡ್ಸ್ ಯುನಿಟ್ಸ್, ಹಿಂದು ಅವಿಭಕ್ತ ಕುಟುಂಬ, ವ್ಯಕ್ತಿಗತ ಅಸೋಷಿಯೇಷನ್, ಇತ್ಯಾದಿ ಹಾಗೂ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿದೇಶಿ ಸಂಸ್ಥೆಗಳಿಗೆ ಪರಿಷ್ಕತಗೊಂಡಂತಹ ಸರಚಾರ್ಜ್ ಅನ್ವಯಿಸುವುದಿಲ್ಲ ಎಂಬಂತಹ ಮಹತ್ವದ ನಿರ್ಧಾರ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.
ಮಿನಿಮಮ್ ಆಲ್ಟರ್‌ನೇಟ್ ಟ್ಯಾಕ್ಸ್ ದರವು ಶೇ.18.5 ರಿಂದ ಶೇ. 15 ಗೆ ಇಳಿಕೆಯಾಗಿದೆ. ಇದರಿಂದ ಹೊಸ ಕಂಪನಿಗಳಿಗೆ ಉತ್ತೇಜನ ಸಿಗಲಿದೆ. ಮಾ.2023 ಕ್ಕಿಂತ ಮುಂಚೆ ಉತ್ಪಾದನೆಯನ್ನು ಪ್ರಾರಂಭ ಮಾಡುವ ಹೊಸ ಕಂಪನಿಗಳಿಗೆ ಸಂಸ್ಥೆಗಳಿಗೆ ಹೆಚ್ಚುವರಿ ಶುಲ್ಕ ಹಾಗೂ ಸ್ವಚ್ಛ ಭಾರತ ಸೆಸ್ ಸೇರಿ ತೆರಿಗೆ ಶೇ. 17.01ಗೆ ಇಳಿಕೆಯಾಗಲಿದ್ದು, ಮುಂದಿನ 5 ವರ್ಷಗಳವರೆಗೆ ಪ್ರಾರಂಭವಾಗುವ ಕಂಪನಿಗಳಿಗೆ ಇದು ಅನುಕೂಲವಾಗಲಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಮನೆ ಕಟ್ಟಿಸುವವರಿಗೆ ಎಕ್ಸಟ್ರನಲ್ ಕಮರ್ಷಿಯಲ್ ಬಾರೊಯಿಂಗ್ಸ್ ನಿಯಮಾವಳಿಗಳನ್ನು ಆರ್‌ಬಿಐ ಸಲಹೆ ಮೇರೆಗೆ ಸರಳಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.