PM Narendra Modi: ಜೂ. 21ರಂದು ಮೈಸೂರಿಗೆ ಪ್ರಧಾನಿ ಆಗಮನ: ಕಾರಣ ಏನು ಗೊತ್ತಾ?

By Govindaraj SFirst Published May 21, 2022, 10:14 PM IST
Highlights

ಮೈಸೂರು ಸಾಂಸ್ಕ್ರತಿಕ ರಾಜಧಾನಿ ಮಾತ್ರವಲ್ಲ ಯೋಗದ ರಾಜಧಾನಿಯೂ ಹೌದು. ಜಗತ್ತಿಗೆ ಯೋಗವನ್ನು ಪರಿಚಯಿಸಿದ ಮೈಸೂರು ಈಗ ಮತ್ತೊಮ್ಮೆ ವಿಶ್ವದ ಗಮನ ಸೆಳೆಯಲು ಮುಂದಾಗಿದೆ. 

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.

ಮೈಸೂರು (ಮೇ.21): ಮೈಸೂರು (Mysuru) ಸಾಂಸ್ಕ್ರತಿಕ ರಾಜಧಾನಿ ಮಾತ್ರವಲ್ಲ ಯೋಗದ (Yoga) ರಾಜಧಾನಿಯೂ ಹೌದು. ಜಗತ್ತಿಗೆ ಯೋಗವನ್ನು ಪರಿಚಯಿಸಿದ ಮೈಸೂರು ಈಗ ಮತ್ತೊಮ್ಮೆ ವಿಶ್ವದ ಗಮನ ಸೆಳೆಯಲು ಮುಂದಾಗಿದೆ. ಇದಕ್ಕೆ ಕಾರಣ ಈ ಬಾರಿ ಯೋಗಾ ಡೇಗೆ ಮೈಸೂರಿಗೆ ಆಗಮಿಸುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi). ಹೌದು! ಇದು 2019ರಲ್ಲಿ ಸಾಂಸ್ಕ್ರತಿಕ ನಗರಿ ಮೈಸೂರಿನ ರೇಸ್ ಕೋರ್ಸ್ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಒಂದು ಝಲಕ್. 

ಒಂದಲ್ಲ ಎರಡಲ್ಲ ಬರೋಬ್ಬರಿ 50 ಸಾವಿರ ಯೋಗಪಟುಗಳು ಏಕ ಕಾಲಕ್ಕೆ ಯೋಗ ಮಾಡಿದ್ರು. ಇದು ದಾಖಲೆಯ ಪುಟಗಳಲ್ಲಿ ದಾಖಲಾಗಿತ್ತು. ಇದೀಗ ಮತ್ತೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಂದಿದೆ. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ಯೋಗ ಮಾಡಿಸಲು ಸಾಂಸ್ಕ್ರತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಈ ಬಾರಿಯ ಯೋಗ ದಿನಾಚರಣೆ ಮೈಸೂರಿಗರಿಗೆ ವಿಶೇಷ ದಿನ. ಯಾಕಂದ್ರೆ ಈ ಬಾರಿ ಯೋಗ ದಿನಾಚರಣೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಶುಕ್ರವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುವ ಬಗ್ಗೆ ಪ್ರಧಾನಿ ಕಚೇರಿಯಿಂದ ಖಚಿತವಾಗಿದೆ. 

ಆಕೆ ಪುಣ್ಯವಂತೆ, ಮೊಮ್ಮಗಳ ಸಾವಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಜಿ.ಟಿ. ದೇವೇಗೌಡ

ಪ್ರಧಾನಿಯವರು ಯೋಗ ದಿನಾಚರಣೆಗೆ ಮೈಸೂರಿಗೆ ಆಗಮಿಸುತ್ತಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿದೆ. ಇನ್ನು ಪ್ರಧಾನಿ ಮೋದಿಯವರನ್ನು ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಯೋಗ ದಿನಾಚರಣೆಗೆ ಬರುವಂತೆ ಆಹ್ವಾನ ನೀಡಿದ್ದರು.  ತಮ್ಮ ಕುಟುಂಬ ಸಮೇತ ದೆಹಲಿಗೆ ತೆರಳಿದ್ದ ಪ್ರತಾಪಸಿಂಹ ಮೋದಿಯವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದರು. ಇದೀಗ ಮೋದಿ ಮೈಸೂರಿಗೆ ಬರುವುದು ಖಚಿತವಾಗಿದ್ದು ಅವರು ಬರುವ ವೇಳೆ ಮುಜುಗರ ಮಾಡಬೇಡಿ ಅಂತಾ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಒತ್ತಾಯಿಸಿದ್ದಾರೆ. 

2014ರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಮೋದಿ ಮೈಸೂರಿಗೆ ಬಂದಿದ್ದರು. ಈ ವೇಳೆ ಮೈಸೂರನ್ನು ಪ್ಯಾರಿಸ್ ಮಾದರಿಯಲ್ಲಿ ಅಭಿವೃದ್ದಿ ಮಾಡುವ ಭರವಸೆ ನೀಡಿದ್ದರು. ಅದನ್ನು ಮೋದಿ ಬಂದಾಗ ಪ್ರಶ್ನೆ ಮಾಡುವಂತೆಯೂ ವಿಶ್ವನಾಥ್ ಒತ್ತಾಯಿಸಿದ್ದಾರೆ. ಇದೆಲ್ಲಾ ಏನೇ ಇರಲಿ ದೇಶದ ಪ್ರಧಾನಿ ಸಾಂಸ್ಕತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವುದು ಎಲ್ಲರ ಖುಷಿಗೆ ಕಾರಣವಾಗಿದೆ. 

ಹಳೆಯ ಗಿನ್ನಿಸ್‌ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿ: ಈ ವರ್ಷದ ಜೂ. 21ರಂದು ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ  ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುತ್ತಿದ್ದು, ಹಳೆಯ ಗಿನ್ನಿಸ್‌ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಲಾಗುವುದು ಎಂದು ಸಂಸದ ಪ್ರತಾಪ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಸಹಯೋಗದಲ್ಲಿ ಮೈಸೂರು ಯೋಗ ಫೌಂಡೇಷನ್‌ ಹಾಗೂ ಆಯುಷ್‌ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

Karnataka Politics: ಗುಲಾ​ಮ​ನಾಗಿ ಇರಲ್ಲ, ಜೆಡಿಎಸ್‌ ಬಿಡು​ವೆ: ಮರಿತಿಬ್ಬೇಗೌಡ

ಕಳೆದ ಎರಡು ವರ್ಷದಿಂದ ಕೊರೋನಾ ಕಾರಣಕ್ಕೆ ಯೋಗ ದಿನಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮೈಸೂರಿಗೆ ಬರುವಂತೆ ಮನವಿ ಮಾಡಲಾಗಿದೆ.  ಲಡಾಖ್‌ ಅಥವಾ ಮೈಸೂರಿಗೆ ಬರಲು ಪ್ರಧಾನಿಗಳ ಪ್ರವಾಸ ಪಟ್ಟಿಮಾಡಲಾಗಿದೆ. ಅವರು ಮೈಸೂರಿಗೆ ಬರುತ್ತಾರೆ ಎಂಬ ಖಚಿತವಾದ ವಿಶ್ವಾಸವಿದೆ ಎಂದರು. ಯೋಗದ ವಿಷಯದಲ್ಲಿ ಈವರೆಗೆ ಯಾರೂ ರಾಜಕೀಯ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್‌ ಹಾಗೂ ಜಾ.ದಳ ಸರ್ಕಾರ ಇದ್ದಾಗಲೇ ಮೈಸೂರು ಯೋಗ ದಿನದಂದು ವಿಶ್ವ ದಾಖಲೆ ಮಾಡಿತ್ತು. ಈ ಬಾರಿ ಕೂಡ ಎಲ್ಲರೂ ಕೈಜೋಡಿಸುವ ಮೂಲಕ ಈಗ ಇರುವ ಒಂದು ಲಕ್ಷದ 2 ಸಾವಿರ ಜನರ ಯೋಗ ದಾಖಲೆಯನ್ನು ಮುರಿಯಬೇಕಾಗಿದೆ. 

click me!