• ವಿಜಯಪುರ ತಾಯಿ-ಮಗು ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಪ್ರಕರಣ..
• ಜಿಲ್ಲಾಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಸಿದ ತಂಡ..!
• ಜಿಲ್ಲಾಸ್ಪತ್ರೆಗೆ ಉಪಲೋಕಾಯುಕ್ತರ ಭೇಟಿ, ಪರಿಶೀಲನೆ..!
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಮೇ. 21): ಸಿಜಿರಿಯನ್ ಆದ ನಂತರ ಕೆಲ ಬಾಣಂತಿಯರು ಸೋಂಕಿಗೆ ಒಳಗಾಗಿ ಹೊಲಿಗೆ ಕಿತ್ತು ಬಂದಿದ್ದವು. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ತನಿಖೆಗೆ ಆದೇಶ ನೀಡಿದ್ದರು. ತನಿಖಾ ತಂಡ ಈಗ ತನಿಖೆ ಪೂರ್ಣಗೊಳಿಸಿ ವರದಿಯನ್ನ ಜಿಲ್ಲಾಧಿಕಾರಿಗೆ ನೀಡಿದೆ.
ಎಸಿ ನೇತೃತ್ವದ ತನಿಖಾ ತಂಡ ಸಲ್ಲಿಸಿದ ವರದಿ..!
ಕೆಲ ದಿನಗಳ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆಯ ತಾಯಿ ಮಗು ಹೆರಿಗೆ ಆಸ್ಪತ್ರೆಯಲ್ಲಿ 30ಕ್ಕು ಅಧಿಕ ಬಾಣಂತಿಯರು ನರಳಾಡಿದ್ದರು. ಸಿಜಿರಿಯನ್ ಬಳಿಕ ಬಾಣಂತಿಯರಿಗೆ ಹಾಕಿದ ಹೊಲಿಗೆ ಕಿತ್ತು ಹೋಗಿದ್ದವು. ಇದರಿಂದಾಗಿ ಬಾಣಂತಿಯರು ನರಳಾಟ ಅನುಭವಿಸಿದ್ರೆ, ಅವರ ಪೋಷಕರು ಆತಂಕಗೊಂಡಿದ್ದರು. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು.. ಪರಿಣಾಮ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಇಡೀ ಪ್ರಕರಣದ ತನಿಖೆಗಾಗಿ ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಈ ತಂಡ ಈಗ ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸಿದೆ. ಘಟನೆಯಲ್ಲಿ ಬಾಣಂತಿಯರು ಸೋಂಕಿಗೆ ಒಳಗಾಗಿದ್ದರ ಕುರಿತು ಮಾಹಿತಿಯನ್ನ ವರದಿಯಲ್ಲಿ ನೀಡಿದೆ.
undefined
Vijayapura: ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದ ಬಾಣಂತಿಯರ ನರಳಾಟ!
ತನಿಖಾ ವರದಿಯಲ್ಲಿ ಏನಿದೆ?
ಈ ತನಿಖಾ ವರದಿಯಲ್ಲಿ ಹಲವಾರು ಪ್ರಮುಖ ಅಂಶಗಳನ್ನು ಪರಿಗಣಿಸಿರುವ ತನಿಖಾ ತಂಡ, ಈ ಆಸ್ಪತ್ರೆಗೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ, ಅತಿ ಹೆಚ್ಚು ರೋಗಿಗಳು ಸಿಜಿರಿಯನ್ ಗೆ ಒಳಗಾಗುತ್ತಿದ್ದಾರೆ. ಇದರಿಂದ ಇಂತಹ ಘಟನೆ ನಡೆದಿದೆ ಎನ್ನುವ ಅಂಶವನ್ನು ವರದಿಯಲ್ಲಿ ತಿಳಿಸಲಾಗಿದೆ.
ತನಿಖಾ ವರದಿಯ ಪ್ರಮುಖ ಅಂಶಗಳು ಇಲ್ಲಿವೆ..!
• ತಾಯಿ ಮತ್ತು ಮಗು ಆಸ್ಪತ್ರೆಗೆ ಸಾಮರ್ಥ್ಯಕ್ಕಿಂತ ಅಧಿಕ ಒತ್ತಡ ಬಿದ್ದಿದೆ
• ಅತಿ ಹೆಚ್ಚಿ ಗರ್ಭಿಣಿಯರು ಸಿಜಿರಿಯನ್ ಗೆ ಒಳಗಾಗಿದ್ದರಿಂದ ಈ ಘಟನೆ
• ಕೇವಲ ಒಂದೇ ಆಪರೇಷನ್ ಥಿಯೇಟರ್
• ಇರುವ ಒಂದೇ ಆಪರೇಷನ್ ಥಿಯೇಟರ್ ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರೋದು..
• ಕೆಲ ತಜ್ಞವೈದ್ಯರ ಕೊರತೆ ಇದೆ
• ಹೆಚ್ಚಿನ ತಜ್ಞವೈದ್ಯರ ನೇಮಕಾತಿ ಮಾಡಿಕೊಳ್ಳಬೇಕು
• ಇನ್ನೊಂದು ಪ್ರತ್ಯೇಕ ಆಪರೇಶನ್ ಥಿಯೇಟರ್ ಅಗತ್ಯವಿದೆ
• ಅಗತ್ಯ ನರ್ಸ್‌ಗಳು ಬೇಕಾಗಿದ್ದಾರೆ
• ಮೂಲ ಸೌಕರ್ಯಗಳನ್ನ ಒದಗಿಸಬೇಕು
ಜೊತೆಗೆ ಇನ್ನು ಹೆಚ್ಚಿನ ತಜ್ಞ ವೈದ್ಯರ ನೇಮಕಾತಿ, ಇನ್ನೊಂದು ಆಪರೇಷನ್ ಕೊಠಡಿ, ಅಗತ್ಯ ನರ್ಸ್ ಗಳು, ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆಯೂ ವರದಿಯಲ್ಲಿ ಸಲಹೆ ನೀಡಿದೆ.
ಉಪಲೋಕಾಯುಕ್ತರ ಭೇಟಿ
ಆಸ್ಪತ್ರೆಯಲ್ಲಿ ಏಪ್ರೀಲ್ 30ರಿಂದ ಮೇ 13ರವರೆಗೆ 245 ಜನರಿಗೆ ಸಿಜರಿಯೆನ್ ಆಫರೇಷನ್ ಮಾಡಲಾದ ಬಳಿಕ ಹಾಕಿರುವ ಹೊಲಿಗೆಗೆ ಸಂಬಂಧಿಸಿದಂತೆ ಕೆಲವರು ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿತ್ತು. ಈ ಹಿನ್ನೆಲೆ ಇಂದು ಉಪಲೋಕಾಯುಕ್ತರು ಹಾಗೂ ತಂಡ ಜಿಲ್ಲಾಸ್ಪತ್ರೆಯ ತಾಯಿ ಮಗು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇನ್ನು ಚಿಕಿತ್ಸೆ ಪಡೆಯುತ್ತಿರುವ ಬಾಣಂತಿಯರು ಇರುವ ವಾರ್ಡ್ ಗಳಿಗು ಉಪಲೋಕಾಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 4 ವಾರ್ಡ್ ಗಳಿಗೆ ಭೇಟಿ ನೀಡಿ ಬಾಣಂತಿಯರನ್ನ ಮಾತನಾಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೇ ವೈದ್ಯರಿಂದಲು ಕೆಲ ಮಾಹಿತಿ ಪಡೆದುಕೊಂಡಿದ್ದಾರೆ..