ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಗೊತ್ತು-ಗುರಿಯಿಲ್ಲದೆ ಆಡಳಿತ ನಡೆಸುತ್ತಿದ್ದು, ದೇಶ ಭಾರೀ ಸಮಸ್ಯೆ ಎದುರಿಸುತ್ತಿದೆ ಎಂದು ಮಾಜಿ ಶಾಸಕ ಎಸ್. ಷಫಿ ಅಹಮದ್ ಆರೋಪಿಸಿದ್ದಾರೆ.
ತುಮಕೂರು(ನ.20): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಗೊತ್ತು-ಗುರಿಯಿಲ್ಲದೆ ಆಡಳಿತ ನಡೆಸುತ್ತಿದ್ದು, ದೇಶ ಭಾರೀ ಸಮಸ್ಯೆ ಎದುರಿಸುತ್ತಿದೆ ಎಂದು ಮಾಜಿ ಶಾಸಕ ಎಸ್. ಷಫಿ ಅಹಮದ್ ಆರೋಪಿಸಿದ್ದಾರೆ.
ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಇಂದಿರಾಗಾಂಧಿ 102 ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ್ದಾರೆ. ದೇಶ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಮಂಡ್ಯ: ಸೊಸೆಯನ್ನು ಕೊಂದ ಮಾವ ಜೈಲಿನಲ್ಲೇ ಆತ್ಮಹತ್ಯೆ
ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಹಲವು ದುಡುಕಿನ ನಿರ್ಧಾರಗಳಿಂದ ಜನರು ಉದ್ಯೋಗ ಕಳೆದುಕೊಂಡು ಪರಿಪಾಟಲು ಪಡುತ್ತಿದ್ದಾರೆ. ಇವುಗಳಿಗೆ ಮುಕ್ತಿ ಹಾಡಬೇಕೆಂದರೆ ಮತ್ತೊಮ್ಮೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡುವಂತೆ ತಿಳಿಸಿದ್ದಾರೆ.
ಚೆನ್ನಾಗಿ ಕಾಣ್ತೀಯಾ ಎಂದು ಕಿಸ್ ಕೊಡ್ತಾನೆ ಈ ಪ್ರಿನ್ಸಿಪಲ್, ವಿದ್ಯಾರ್ಥಿನಿಯರ ಕಣ್ಣೀರು
ಭಾರತ ದೇಶದ ಅಭಿವೃದ್ಧಿಗೆ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಕೊಡುಗೆ ಅಪಾರ. ರೈತರು, ಕೃಷಿ ಕಾರ್ಮಿಕರು, ಬಡವರು, ದೀನ ದಲಿತರು ಹಾಗೂ ಎಲ್ಲಾ ವರ್ಗದ ಜನರನ್ನು ಹಸಿವಿನಿಂದ ಮುಕ್ತಗೊಳಿಸಬೇಕೆಂಬ ದಿಟ್ಟನಿರ್ಧಾರ ಹೊಂದಿದ್ದ ಧೀಮಂತ ಮಹಿಳೆ. ಇಂದಿರಾಗಾಂಧಿ ಅವರು ಕೈಗೊಂಡ ಹಲವು ಕಾರ್ಯಕ್ರಮಗಳು ಇಂದಿಗೂ ಜನ ಮಾನಸದಲ್ಲಿವೆ ಎಂದರು.
20 ಅಂಶಗಳ ಕಾರ‍್ಯಕ್ರಮಗಳಿಂದ ಸ್ವಾಭಿಮಾನಿ ಬದುಕು:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮ ಮಾತನಾಡಿ, ದೇಶವನ್ನು ಕಾಡುತ್ತಿದ್ದ ಬಡತನ ನಿರ್ಮೂಲನೆಗೆ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ತಮ್ಮ ಕಾಲದಲ್ಲಿ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮಗಳಿಂದ ಗ್ರಾಮೀಣ ಭಾರತದ ಜನತೆ ಸ್ವಾಭಿಮಾನದಿಂದ ಬದುಕು ಅವಕಾಶ ಕಲ್ಪಿಸಿತು. ತ್ಯಂತ ಭೀಕರ ಬರಗಾಲದ ವೇಳೆ ವಿದೇಶದಿಂದ ಕೆಂಪು ಜೋಳವನ್ನು ಅಮದು ಮಾಡಿಕೊಂಡು ಗ್ರಾಮೀಣ ಭಾಗದ ಬಡಜನರಿಗೆ ಹಂಚುವ ಮೂಲಕ ಅವರ ಹಸಿವು ನೀಗಿಸುವ ಕೆಲಸವನ್ನು ಇಂದಿರಾಗಾಂಧಿ ಮಾಡಿದ್ದರು ಎಂದರು.
ಇಂದಿರಾಗಾಂಧಿ ಅವರ 17 ವರ್ಷದ ರಾಜಕೀಯ ಅಧಿಕಾರದಲ್ಲಿ ದೇಶದ ಉನ್ನತ್ತಿಗೆ ಹಲವಾರು ಕಾರ್ಯಕ್ರಮ ಜಾರಿಗೆ ತಂದರು. ಬ್ಯಾಂಕುಗಳ ರಾಷ್ಟ್ರೀಕರಣ, ಸಾರಿಗೆ ರಾಷ್ಟ್ರೀಕರಣದಂತಹ ದಿಟ್ಟನಿಲುವುಗಳಿಂದ ಬಡವರು ಸಹ ಬ್ಯಾಂಕುಗಳ ಪ್ರಯೋಜನ ಪಡೆದುಕೊಳ್ಳುವಂತಾಯಿತು. ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳನ್ನು, ಜನರ ಆರೋಗ್ಯ ಕಾಪಾಡಲು ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಇಂದಿರಾಗಾಂಧಿ ಜಾರಿಗೆ ತಂದಿದ್ದರು. ದಲಿತರ ಭೂಮಿಯನ್ನು ಬೇರೆಯವರು ವಶಪಡಿಸಿಕೊಳ್ಳದಂತೆ ಪಿಟಿಸಿಎಲ್ ಕಾಯ್ದೆ ಜಾರಿಗೆ ತಂದು ದಲಿತರು ಭೂಮಿಯ ಹಕ್ಕು ಹೊಂದುವಂತೆ ಮಾಡಿದ್ದರು. ಆರ್‌ಟಿಇ, ಆರ್‌ಟಿಐ, ಆಹಾರದ ಹಕ್ಕು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಪಕ್ಷ ಜನರಪರವಾಗಿದೆ ಎಂದು ಆರ್.ರಾಮಕೃಷ್ಣ ತಿಳಿಸಿದ್ದಾರೆ.
ಸತ್ತ ಕುರಿಗಾಗಿ ಪತಿ-ಪತ್ನಿಯ ಜಗಳ ಕೊಲೆಯಲ್ಲಿ ಅಂತ್ಯ
ಮಹಿಳಾ ಕಾಂಗ್ರೆಸ್‌ನ ನಾಗಮಣಿ, ಮಣಿ, ಮುಖಂಡ ನಟರಾಜಶೆಟ್ಟಿಮಾತನಾಡಿದರು. ಮುಖಂಡರಾದ ಮರಿಚನ್ನಮ್ಮ, ಸುಜಾತಾ, ಗೀತಮ್ಮ, ಮಂಗಳ, ರಂಗಲಕ್ಷ್ಮಿ, ಸತ್ಯಮ್ಮ, ಬಿ.ಖಾತೂನ್, ಯಶೋದಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಡಿ.ವಿಜಯಕುಮಾರ್, ನಗರ ಪಾಲಿಕೆ ಸದಸ್ಯರಾದ ನಯಾಜ್, ಸಂಜೀವ್ ಕುಮಾರ್, ಆಟೋ ರಾಜು, ಮೆಹಬೂಬ್ ಪಾಷ, ಮಂಜುನಾಥ, ತರುಣೇಶ್, ನ್ಯಾತೇಗೌಡ, ಜಾಜ್‌ರ್, ಮುಷ್ತಾಕ್ ಅಹಮದ್, ವೈ.ಎನ್.ನಾಗರಾಜು, ಪೀರ್, ಪ್ರಕಾಶ್, ನಟರಾಜು, ಶ್ರೀನಿವಾಸ್, ಸೋಮಶೇಖರ್, ಶಿವಾಜಿ ಸೇರಿದಂತೆ ಇತರರಿದ್ದರು.
ಉಪಚುನಾವಣೆಗೆ ಕಾರ್ಯಕರ್ತರು
ಡಿ.5ರಂದು ನಡೆಯಲಿರುವ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲೆಯ ಸಕ್ರಿಯ ಕಾರ್ಯಕರ್ತರನ್ನು ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಕಳುಹಿಸಲು ಮುಂದಾಗಿದೆ. ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಮುಂದೆ ಬಂದಲ್ಲಿ ಅವರಿಗೆ ವ್ಯವಸ್ಥೆ ಮಾಡಿಕೊಡಲಾಗುವುದು. ಕಾರ್ಯಕರ್ತರು ಮತದಾರರ ಬಳಿ ತೆರಳಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸುವ ಮೂಲಕ ಮತದಾರರ ಮನವೊಲಿಸುವಂತೆ ಜಿಲ್ಲಾಧ್ಯಕ್ಷ ರಾಮಕೃಷ್ಣ ಮನವಿ ಮಾಡಿದ್ದಾರೆ.
ತಮ್ಮ ಮಕ್ಕಳೊಂದಿಗೆ ರಸ್ತೆ ಗುಂಡಿ ಮುಚ್ಚಿದ ಶಿಕ್ಷಕ ದಂಪತಿ
ಕೋಟ್‌ಇಂದಿರಾಗಾಂಧಿ ನಂತರ ಡಾ.ಮನಮೋಹನ್ ಸಿಂಗ್ 10 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಅರ್ಥಿಕವಾಗಿ ಸುಭಿಕ್ಷಗೊಳಿಸಿದ್ದರು. ಆದರೆ ಗೊತ್ತು ಗುರಿಯಿಲ್ಲದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಅಧೋಗತಿಯತ್ತ ತಳ್ಳಿದೆ ಎಂದು ಮಾಜಿ ಶಾಸಕ ಷಫಿ ಅಹಮದ್ ಹೇಳಿದ್ದಾರೆ.