ಮೈಸೂರಿನಲ್ಲೇ ಕೆಟ್ಟುನಿಂತ ಪ್ರಧಾನಿ ಮೋದಿ ಬೆಂಗಾವಲು ಹೆಲಿಕಾಪ್ಟರ್; ಅಷ್ಟಕ್ಕೂ ಆಗಿದ್ದೇನು?

Published : Nov 13, 2026, 10:05 PM IST
PM Modi escort helicopter

ಸಾರಾಂಶ

ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮವಾಗಿ, ಒಂದು ಹೆಲಿಕಾಪ್ಟರ್ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿಯೇ ಉಳಿದುಕೊಂಡಿದೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಮೈಸೂರು (ನವೆಂಬರ್ 13): ಪ್ರಧಾನಿ ನರೇಂದ್ರ ಮೋದಿ ಇವತ್ತು ಮೈಸೂರಿಗೆ ಆಗಮಿಸಿದ್ದರು. ಲೇಟೆಸ್ಟ್ ಅಪ್‌ಡೇಟ್‌ ಏನೆಂದರೆ ಮೋದಿ ಅವರ ಬೆಂಗಾವಲು ಪಡೆಗೆ ಸೇರಿದ ಇಂಡಿಯನ್ ಏರ್ ಫೋರ್ಸ್‌ನ ಹೆಲಿಕಾಪ್ಟರ್ ಒಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಲು ಸಾಧ್ಯವಾಗದೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ನಲ್ಲೇ ಉಳಿದುಕೊಂಡಿದೆ.

ಹೆಲಿಕಾಪ್ಟರ್‍‌ಗೆ ಆಗಿದ್ದೇನು?

ಇದೀಗ ಬಂದ ಮಾಹಿತಿ ಪ್ರಕಾರ... ಹೆಲಿಕಾಪ್ಟರ್‌ನ ದುರಸ್ತಿ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಬೆಳಿಗ್ಗೆ ಮೈಸೂರಿನಿಂದ ಟೇಕ್‌ಆಫ್ ಆಗಲಿದೆ ಎಂದು ತಿಳಿದುಬಂದಿದೆ. ಮೋದಿ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ಮೋದಿ ಅವರು ಒಂದು ಹೆಲಿಕಾಪ್ಟರ್‍‌ನಲ್ಲಿ ಬಂದಿಳಿದಿದ್ದರೆ, ಅವರಿಗೆ ಭದ್ರತೆ ನೀಡಲು ಬೆಂಗಾವಲಾಗಿ ಇಂಡಿಯನ್ ಏರ್ ಫೋರ್ಸ್‌ಗೆ ಸೇರಿದ ಇನ್ನೆರಡು ಹೆಲಿಕಾಪ್ಟರ್‌ಗಳು ಆಗಮಿಸಿದ್ದವು. ಅಂತೆಯೇ ಒಟ್ಟು ಮೂರು ಮೂರು ಹೆಲಿಕಾಪ್ಟರ್‌ಗಳು ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗಿದ್ದವು.

ಮೋದಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆದ ಬಳಿಕ ನಿಗದಿತ ವೇಳಾಪಟ್ಟಿ ಹಾಗೂ ನಿಯಮದಂತೆ ಈ ಮೂರೂ ಹೆಲಿಕಾಪ್ಟರ್‌ಗಳು ಲಲಿತಮಹಲ್ ಹೆಲಿಪ್ಯಾಡ್‌ನಿಂದ ಟೇಕ್‌ಆಫ್ ಆಗಬೇಕಿತ್ತು. ಟೇಕ್‌ಆಫ್ ಆಗುವ ಸಮಯದಲ್ಲಿ ಮೂರರ ಪೈಕಿ ಎರಡು ಹೆಲಿಕಾಪ್ಟರ್‌ಗಳು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಹಾರಾಟ ನಡೆಸಿ ಅಲ್ಲಿಂದ ತೆರಳಿವೆ. ಆದರೆ ಒಂದು ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದು ಟೇಕ್‌ಆಫ್ ಆಗಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ಸುರಕ್ಷತಾ ದೃಷ್ಟಿಯಿಂದ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ತಾಂತ್ರಿಕ ಸಮಸ್ಯೆಗೆ ಒಳಗಾದ ಇಂಡಿಯನ್ ಏರ್ ಫೋರ್ಸ್‌ನ ಆ ಹೆಲಿಕಾಪ್ಟರ್ ಮೈಸೂರಿನಲ್ಲೇ ಉಳಿಯುವಂತಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅದನ್ನು ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ನಲ್ಲೇ ನಿಲ್ಲಿಸಲಾಗಿದೆ. ತಾಂತ್ರಿಕ ಅಡಚಣೆ ಎದುರಾದ ಕೂಡಲೇ ಸಂಬಂಧಪಟ್ಟ ತಾಂತ್ರಿಕ ಸಿಬ್ಬಂದಿ ಹಾಗೂ ವಾಯುಪಡೆ ತಜ್ಞರು ಹೆಲಿಕಾಪ್ಟರ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ದೋಷವನ್ನು ಪತ್ತೆಹಚ್ಚಿ ತುರ್ತಾಗಿ ರಿಪೇರಿ ಮಾಡಿದ್ದಾರೆ.

ತಾಂತ್ರಿಕ ಸಿಬ್ಬಂದಿಯ ಸತತ ಪರಿಶೀಲನೆ ಹಾಗೂ ಪ್ರಯತ್ನದ ಬಳಿಕ, ಹೆಲಿಕಾಪ್ಟರ್‌ನಲ್ಲಿ ಕಂಡುಬಂದಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ. ಹೆಲಿಕಾಪ್ಟರ್‌ನ ರಿಪೇರಿ ಕಾರ್ಯವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಹಾರಾಟಕ್ಕೆ ಸಜ್ಜುಗೊಂಡಿದೆ, ಆದರೆ ಇವತ್ತು ಟೇಕ್ ಆಫ್ ಆಗೋದಿಲ್ಲ. ನಾಳೆ ಬೆಳಗ್ಗೆ ಮೈಸೂರಿನಿಂದ ಹೊರಡಲಿದೆ.

PREV
Read more Articles on
click me!

Recommended Stories

ಕೊಡಗಿನ ಹಾರಂಗಿ ಹಿನ್ನೀರಿನಲ್ಲಿ ದುರಂತ, ವಾಟರ್ ಸ್ಪೋರ್ಟ್ಸ್ ಬೋಟ್ ಪಲ್ಟಿಯಾಗಿ ಗುಜರಾತ್ ಮೂಲದ ದಂಪತಿ ದುರ್ಮರಣ, ಮಕ್ಕಳು ಅನಾಥ
ಪಟ್ಟದಾನೆ ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ ಭಕ್ತರು: ಅಲಕನೂರ ಮಠದ 12.5 ಅಡಿ ಎತ್ತರದ 'ಧ್ರುವರಾಜ' ಇನ್ನಿಲ್ಲ!