TikTokನಿಂದ ಪಿಎಂ ಕೇರ್ ಪಡೆದ 30 ಕೋಟಿ ವಾಪಾಸ್ ಕೊಡ್ಲಿ: ಖಾದರ್

By Suvarna News  |  First Published Jul 3, 2020, 3:13 PM IST

ಚೀನಾ ಆ್ಯಪ್ ಬಂದ್ ಮಾಡಿದ್ದು ಯಾಕೆ? ಚೀನಾಗೆ ಆ್ಯಪ್ ನಿಂದ‌ ನಷ್ಟ ಇಲ್ಲ. ಭಾರತಕ್ಕೆ ಆ್ಯಪ್ ಬ್ಯಾನ್ ನಿಂದ ಲಾಭ ಇಲ್ಲ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.


ಮಂಗಳೂರು(ಜು.03): ಚೀನಾ ಆ್ಯಪ್ ಬಂದ್ ಮಾಡಿದ್ದು ಯಾಕೆ? ಚೀನಾಗೆ ಆ್ಯಪ್ ನಿಂದ‌ ನಷ್ಟ ಇಲ್ಲ. ಭಾರತಕ್ಕೆ ಆ್ಯಪ್ ಬ್ಯಾನ್ ನಿಂದ ಲಾಭ ಇಲ್ಲ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ‌ 59 ಚೀನಾ ಆ್ಯಪ್ ಬ್ಯಾನ್ ಮಾಡಿರುವ ವಿಚಾರವಾಗಿ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Latest Videos

undefined

ಕೊಟ್ಟೂರು: ಪರೀಕ್ಷೆಯನ್ನೇ ಮರೆತಿದ್ದ ವಿದ್ಯಾರ್ಥಿನಿ ಕರೆತಂದ ಉಪ ಪ್ರಾಚಾರ್ಯ!

PM ಕೇರ್ ಫಂಡ್ ಗೆ ಟಿಕ್ ಟಾಕ್ ನಿಂದ 30 ಕೋಟಿ ಬಂದಿದೆ. ಆ ಹಣವನ್ನು ಸರ್ಕಾರ ವಾಪಸ್ ಕೊಡಲಿ. ಸರ್ಕಾರ ಅವರ ಹಣವನ್ನು ತೆಗದುಕೊಳ್ಳೋಕೆ ನಾಚಿಕೆ ಆಗೋದಿಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ.

ಚೀನಾ ಆ್ಯಪ್ ಕಂಪೆನಿಯಲ್ಲಿ ಭಾರತೀಯರಯ ಉದ್ಯೋಗದಲ್ಲಿದ್ದರು. ಈಗ ಅವರು ಕೆಲಸ ಕಳೆದುಕೊಂಡಿದ್ದಾರೆ. ಆ್ಯಪ್ ಮೂಲಕ ಭಾರತೀಯರು ಆದಾಯ ಪಡೆಯುತ್ತಿದ್ದರು. ಪ್ರಚಾರಕ್ಕೋಸ್ಕರ ಸರ್ಕಾರ ಆ್ಯಪ್ ಬ್ಯಾನ್ ಮಾಡಿದೆ ಎಂದಿದ್ದಾರೆ.

ಬ್ಯಾನ್ ನಂತರ ಟಿಕ್ ಟಾಕ್ ಮೊದಲ ಪ್ರತಿಕ್ರಿಯೆ, ಅಯ್ಯಪ್ಪಾ!

ಕೇಂದ್ರ ಸರ್ಕಾರದ ನಿರ್ಧಾರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿದೆ. ಚೀನಾದವರು ಭಾರತದ ನಿರ್ಧಾರ ನೋಡಿ‌ ನಗುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಪ್ರೀಯಾಂಕ ಗಾಂಧಿ ಗೆ ಸರ್ಕಾರದ ಬಂಗಲೆ ವಾಪಾಸ್ ಹಿನ್ನಲೆ ಪ್ರತಿಕ್ರಿಯಿಸಿ, ಯುಪಿಯಲ್ಲಿ ಪ್ರಿಯಾಂಕ ಗಾಂಧಿ ಹವಾ ಇದೆ. ಇದರಿಂದ ಸರ್ಕಾರ ದ್ವೇಷ ದ ರಾಜಕಾರಣ ಮಾಡುತ್ತಿದೆ. ಪ್ರೀಯಾಂಕ ಗಾಂಧಿಯ ತಂದೆ, ಅಜ್ಜಿ ಯನ್ನು ಭಯೋತ್ಪಾದಕರು ಕೊಂದಿದ್ದಾರೆ. ಹಾಗಾಗಿ ಪ್ರೀಯಾಂಕ ಗಾಂಧಿಗೂ ರಕ್ಷಣೆ ನೀಡಲಾಗಿದೆ. ದೆಹಲಿಯಲ್ಲಿ ತುಂಬಾ ಮಂದಿ ಸರ್ಕಾರಿ ಬಂಗಲೆಯಲ್ಲಿ ಇದ್ದಾರೆ. ಅವರ ಹೆಸರನ್ನು ಸರ್ಕಾರ ಬಹಿರಂಗ ಪಡಿಸಲಿ. ದ್ವೇಷ ದ ರಾಜಕಾರಣವನ್ನು ಜನರು ಸಹಿಸೋದಿಲ್ಲ ಎಂದಿದ್ದಾರೆ.

click me!