ಕೊಟ್ಟೂರು: ಪರೀಕ್ಷೆಯನ್ನೇ ಮರೆತಿದ್ದ ವಿದ್ಯಾರ್ಥಿನಿ ಕರೆತಂದ ಉಪ ಪ್ರಾಚಾರ್ಯ!

By Kannadaprabha News  |  First Published Jul 3, 2020, 2:35 PM IST

ಕನ್ನಡ ಪರೀಕ್ಷೆ ಬರೆಯುವುದನ್ನೆ ಮರೆತಿದ್ದ ವಿದ್ಯಾರ್ಥಿನಿ| ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ನಡೆದ ಘಟನೆ| ವಿದ್ಯಾರ್ಥಿನಿ ಮನೆಗೆ ತೆರಳಿ ಬೈಕ್‌ನಲ್ಲಿ ಕರೆ ತಂದ ಜವಾನ| ನಿಗದಿತ ವೇಳೆಗೆ ಪರೀಕ್ಷೆ ಬರೆದ ವಿದ್ಯಾರ್ಥಿನಿ| 


ಕೊಟ್ಟೂರು(ಜು.03): ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗುರುವಾರ ಬಿಡುವು ಇದೆ ಎಂದು ಕನ್ನಡ ಪರೀಕ್ಷೆ ಬರೆಯುವುದನ್ನೆ ಮರೆತಿದ್ದ ಪಟ್ಟಣದ ವಿದ್ಯಾರ್ಥಿನಿಯನ್ನು ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಸಹಾಯಕನನ್ನು ವಿದ್ಯಾರ್ಥಿನಿ ಮನೆಗೆ ಕಳುಹಿಸಿ ಕರೆ ತಂದು ಪರೀಕ್ಷೆ ಬರೆಯಲು ನೆರವಾದ ಘಟನೆ ಪಟ್ಟಣದ ಬಾಲಕರ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿ ಶಾಹೀನಾ ಬಾನು, ಈ ಹಿಂದೆ ಒಂದು ವಿಷಯದ ಪರೀಕ್ಷೆ ಮುಗಿದ ಒಂದು ದಿನದ ಬಿಡುವು ನಂತರ 2ನೇ ದಿನಕ್ಕೆ ಮತ್ತೊಂದು ಪರೀಕ್ಷೆ ನಡೆದಿದೆ. ಹೀಗಾಗಿ ಈ ದಿನ ಬಿಡುವಿಗೆ ಎಂದು ಕನ್ನಡ ವಿಷಯ ಪರೀಕ್ಷೆ ಮರೆತು ಮನೆಯಲ್ಲಿಯೇ ಇದ್ದರು. 

Tap to resize

Latest Videos

ಹಾವೇರಿ: ತಂದೆಯ ಸಾವಿನ ದುಃಖದ ಮಧ್ಯೆಯೂ SSLC ಪರೀಕ್ಷೆ ಬರೆದ 

9.30 ಆದರೂ ಶಾಹೀನಾ ಪರೀಕ್ಷಾ ಕೇಂದ್ರಕ್ಕೆ ಬಾರದಿರುವುದನ್ನು ಮನಗಂಡ ಉಪ ಪ್ರಾಚಾರ್ಯ ಸಿ. ಬಸವರಾಜ, ಕೂಡಲೇ ತಮ್ಮ ಶಾಲೆಯ ಜವಾನನ್ನು ಬೈಕ್‌ ಮೂಲಕ ವಿದ್ಯಾರ್ಥಿನಿ ಮನೆಯಿರುವ ಪಟ್ಟಣದ ಬಳ್ಳಾರಿ ಕ್ಯಾಂಪ್‌ಗೆ ಆಕೆ ಕರೆ ತರಲು ಕಳುಹಿಸಿದರು. ಜವಾನ ವಿದ್ಯಾರ್ಥಿನಿ ಮನೆಗೆ ತೆರಳಿ ಬೈಕ್‌ನಲ್ಲಿ ಕರೆ ತಂದಿದ್ದು, ನಿಗದಿತ ವೇಳೆಗೆ ಪರೀಕ್ಷೆ ಬರೆದಿದ್ದಾಳೆ.
 

click me!