ಪಿಎಂ ಆವಾಸ್‌ ಯೋಜನೆಯಿಂದ ವಸತಿ ರಹಿತರಿಗೆ ಅನುಕೂಲ

By Kannadaprabha News  |  First Published Mar 13, 2023, 5:24 AM IST

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್‌ ಯೋಜನೆ ಮತ್ತು ರಾಜ್ಯ ಸರ್ಕಾರದ ರಾಜೀವ್‌ಗಾಂಧಿ ವಸತಿ ನಿಗಮ ಸಹಯೋಗದಲ್ಲಿ ಪಟ್ಟಣದಲ್ಲಿ 843 ಗುಂಪು ಮನೆಗಳನ್ನು ನಿರ್ಮಿಸುತ್ತಿದ್ದು, ಇದರಿಂದ ವಸತಿ ಮತ್ತು ನಿವೇಶನ ರಹಿತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.


  ಕೆ.ಆರ್‌. ನಗರ :  ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್‌ ಯೋಜನೆ ಮತ್ತು ರಾಜ್ಯ ಸರ್ಕಾರದ ರಾಜೀವ್‌ಗಾಂಧಿ ವಸತಿ ನಿಗಮ ಸಹಯೋಗದಲ್ಲಿ ಪಟ್ಟಣದಲ್ಲಿ 843 ಗುಂಪು ಮನೆಗಳನ್ನು ನಿರ್ಮಿಸುತ್ತಿದ್ದು, ಇದರಿಂದ ವಸತಿ ಮತ್ತು ನಿವೇಶನ ರಹಿತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಪಟ್ಟಣದ ಲಾಲನಹಳ್ಳಿ ರಸ್ತೆ ಬಳಿ ಗುಂಪು ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಿಗೆ ನಿವೇಶನ ನೀಡಿದರೆ ಹಣದ ಆಮಿಷಕ್ಕೆ ಮಾರಾಟ ಮಾಡಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಅವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ ಎಂದರು.

Latest Videos

undefined

843 ಮನೆ ನಿರ್ಮಿಸಲಾಗುತ್ತಿದ್ದು, ಇದರ ಯೋಜನಾ ವೆಚ್ಚ . 68.67 ಕೋಟಿಯಾಗಿದ್ದು, ಪಟ್ಟಣದ ಲಾಲನಹಳ್ಳಿ ಗ್ರಾಮದ ಬಳಿ ಸರ್ವೆ ನಂ. 337/2 ಮತ್ತು 337/3 ರಲ್ಲಿ 216 ಮನೆಗಳು, ದಿಡ್ಡೇದಮ್ಮ ದೇವಸ್ಥಾನದ ಹತ್ತಿರ ಸರ್ವೆ ನಂ.19/3 ಮತ್ತು 19/8 ರಲ್ಲಿ 327 ಮನೆಗಳು, ಹುಣಸೂರು ರಸ್ತೆಯ ರೇಷ್ಮೆ ಇಲಾಖೆ ಕಚೇರಿ ಹತ್ತಿರ ಸರ್ವೆ ನಂ.54/5 ಬಿ ಜಾಗದಲ್ಲಿ 132 ಮನೆಗಳು, ಮಧುವನಹಳ್ಳಿ ಇಟ್ಟಿಗೆ ಫ್ಯಾಕ್ಟರಿ ಬಳಿ ಸರ್ವೆ ನಂ.79/3ರಲ್ಲಿ 168 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಇಲ್ಲಿ ನಿರಂತರ ನೀರು ಸರಬರಾಜು, ಒಳ ಚರಂಡಿ ವ್ಯವಸ್ಥೆ, ರಸ್ತೆ, ವಿದ್ಯುತ್‌ ಸಂಪರ್ಕ, ಪಾರ್ಕ್ ವ್ಯವಸ್ಥೆ ಇರದಲಿದ್ದು ಮೈಸೂರಿನ ಆರ್ಯನ್‌ ಕನ್‌ಸ್ಟ್ರಕ್ಷನ್‌ ಕಂಪೆನಿ ಗುತ್ತಿಗೆ ಪಡೆದಿದ್ದು 24 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಮೈಸೂರು ಲಲಿತಾದ್ರಿಪುರ ಬಳಿ ನಗರ ಪಾಲಿಕೆ ವತಿಯಿಂದ 1,440 ಮನೆಗಳನ್ನು ನಿರ್ಮಿಸಿರುವುದನ್ನು ಹೊರತುಪಡಿಸಿ ಜಿಲ್ಲೆಯ ಕೆ.ಆರ್‌. ನಗರದಲ್ಲಿ ಸಳೀಯ ಗುಂಪು ಮನೆ ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ದಾಖಲೆಯಾಗಿದೆ ಎಂದರು.

ಕ್ಷೇತ್ರದಲ್ಲಿ ಜಾತಿ, ಮತ, ಪಕ್ಷವನ್ನು ಬದಿಗಿಟ್ಟು ಜಾತ್ಯಾತೀತವಾಗಿ ಕೆಲಸ ಮಾಡಲಾಗುತ್ತಿದ್ದು ಮುಂದೆಯೂ ಕೂಡ ಇದೇ ರೀತಿ ಜನತೆಯ ಸೇವೆಯನ್ನು ಪಕ್ಷಾತೀತವಾಗಿ ಮಾಡುವ ಮೂಲಕ ಅವರಿಗೆ ಸರ್ಕಾರದ ಸವಲತ್ತು ತಲುಪಿಸಲು ಶ್ರಮಿಸುವುದಾಗಿ ಅವರು ನುಡಿದರು.

ಗುಂಪುಮನೆ ಯೋಜನೆಯನ್ನು ಅನುಷ್ಠಾನಗೊಳಿಸುವತನಕ ವಿಳಂಬವಾಗಿದೆ ಎನ್ನುತ್ತಿದ್ದ ವಿರೋಧಿಗಳು ಈಗ ಚಾಲನೆ ನೀಡುವಾಗ ತರಾತುರಿ ಎಂದು ಹೇಳುತ್ತಿದ್ದು ಹೀಗಾದರೆ ಅಭಿವೃದ್ಧಿ ಕೆಲಸ ಮಾಡುವುದ ಹೇಗೆ ಎಂದು ಅವರು ಪ್ರಶ್ನಿಸಿದರು.

ಪುರಸಭಾ ಸದಸ್ಯರಾದ ತೋಂಟದಾರ್ಯ, ಉಮೇಶ್‌, ಕೆ.ಎಲ್‌. ಜಗದೀಶ್‌, ಸಂತೋಷ್‌ಗೌಡ, ನಂಜುಂಡ, ಮುಖ್ಯಾಧಿಕಾರಿ ಡಾ. ಜಯಣ್ಣ, ಸಮುದಾಯ ಸಂಘಟನಾಧಿಕಾರಿ ಡಾ.ಬಿ.ಎಸ್‌. ಶಂಕರ್‌, ಎಂಜಿನಿಯರ್‌ ಪುಟ್ಟಸ್ವಾಮಿ, ಚಂದ್ರಶೇಖರ್‌ ಮೊದಲಾದವರು ಇದ್ದರು.

click me!