ತುಮಕೂರು ನಗರ ಬಿಜೆಪಿ ಎಂಎಲ್‌ಎ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಸೊಗಡು ಶಿವಣ್ಣ ಭಾನುವಾರ ತುಮಕೂರಿನ ಎನ್.ಆರ್. ಕಾಲೋನಿಯ ದುರ್ಗಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಚುನಾವಣಾ ಪೂರ್ವ ಪ್ರಚಾರ ಕಾರ್ಯ ಆರಂಭಿಸಿದರು.
ತುಮಕೂರು : ತುಮಕೂರು ನಗರ ಬಿಜೆಪಿ ಎಂಎಲ್‌ಎ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಸೊಗಡು ಶಿವಣ್ಣ ಭಾನುವಾರ ತುಮಕೂರಿನ ಎನ್.ಆರ್. ಕಾಲೋನಿಯ ದುರ್ಗಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಚುನಾವಣಾ ಪೂರ್ವ ಪ್ರಚಾರ ಕಾರ್ಯ ಆರಂಭಿಸಿದರು.
ತಮ್ಮ 4 ಬಾರಿ ಶಾಸಕ ಅವಧಿಯ ಸಾಧನೆಯ ಕರಪತ್ರ ಹಂಚಿ, ಚುನಾವಣಾ ವೆಚ್ಚಕ್ಕೆ ಜೋಳಿಗೆ ಹಿಡಿದು, ತಮಟೆ ಸದ್ದಿನೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಸೊಗಡು ಶಿವಣ್ಣನವರಿಗೆ ಎನ್.ಆರ್. ಕಾಲೋನಿಯ ಜನತೆ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ, ಶುಭ ಕೋರಿದರು. ಕಾಲೋನಿಯ ಜನತೆ ತಮ್ಮ ಶಕ್ತಾನುಸಾರ ಚುನಾವಣಾ ವೆಚ್ಚಕ್ಕಾಗಿ ಹಾಗೂ ಟಿಕೆಟ್ ಠೇವಣಿಗಾಗಿ ಹಣವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಆರ್. ಕಾಲೋನಿಯ ದಲಿತ ಮುಖಂಡ ನರಸಿಂಹಯ್ಯ ಮಾತನಾಡಿ, ದುರ್ಗಮ್ಮ ದೇವಾಲಯದಲ್ಲಿ ಪೂಜೆ ಕೈಗೊಂಡು ಪ್ರಚಾರ ಕಾರ್ಯ ಆರಂಭಿಸುವುದಾಗಿ ತಿಳಿಸಿದ್ದ ಸೊಗಡು ಶಿವಣ್ಣನವರು, ಹೇಳಿದಂತೆ ಬಂದಿದ್ದು, ದುರ್ಗಮ್ಮ ದೇವಾಲಯದಲಲಿ ಪೂಜೆ ನೆರವೇರಿಸಿ, ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ತಾವುಗಳು ಚುನಾವಣಾ ವೆಚ್ಚ, ಠೇವಣಿ ಹಣಕ್ಕಾಗಿ ಕೈಲಾದಂತಹ ಹಣ ಸಹಾಯ ಮಾಡಿ, ಚುನಾವಣಾ ದಿನ ಮತವನ್ನು ನೀಡಿ ಸೊಗಡು ಶಿವಣ್ಣನವರ ಗೆಲುವಿಗೆ ಸಹಕರಿಸುವಂತೆ ಕೋರಿದರು.
ಪಾವಗಡದ ಆದಿ ಕಾಯಕಯೋಗಿ ಸ್ವಾಮಿಗಳು ಮಾತನಾಡಿ, ಸಮಾನತೆ, ಸಮಪಾಲು, ಸಮಬಾಳು ಆಶಯ ಹೊಂದಿರುವ ಮನುಷ್ಯ.ಹಲವಾರು ವರ್ಷಗಳ ಶಾಸಕನಾಗಿರುವ ಸೊಗಡು, ಬಂಗಾರದಂತಹ ಮನುಷ್ಯ. ಸಜ್ಜನ. ಇಂತಹ ವ್ಯಕ್ತಿ ನಿಮಗೆ ಸಿಗುವುದಿಲ್ಲ. ಶಿವಣ್ಣನವರಿಗೆ ಓಟು ಹಾಕಿ ಆಶೀರ್ವಾದ ಮಾಡುವಂತೆ ಬೇಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೊಗಡು ಶಿವಣ್ಣನವರು, ಕಳೆದ 2018ರಲ್ಲಿ ಹಿರಿಯರ ಮಾತಿಗೆ ಬೆಲೆ ಕೊಟ್ಟು ತುಮಕೂರು ನಗರ ವಿಧಾನಸಭಾ ಟಿಕೆಚ್ ಬಿಟ್ಟು ಕೊಟ್ಟಿದ್ದೆ. ಆದರೆ ಈ ಬಾರಿ ಬಿಜೆಪಿಯಿಂದ ತುಮಕೂರು ನಗರ ಅಭ್ಯರ್ಥಿ ನಾನೇ. ನನಗೆ ಟಿಕೆಟ್ ಕೊಡಲೇಬೇಕು ಎಂದು ತಿಳಿಸಿದ ಅವರು, ಬುದ್ದನ ಶಾಂತಿ, ಬಸವಣ್ಣನ ಕಾಯಕ ಮಂತ್ರ ನಾನು ಹಿಂದೂ, ನಾವೆಲ್ಲಾ ಒಂದು, ಭ್ರಷ್ಟಾಚಾರ ಮಾಡಬಾರದು, ಸ್ವಜನಪಕ್ಷಪಾತ ನಿಷಿದ್ಧ ಎಂಬ 3 ತತ್ವಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಂಕಲ್ಪ ಮಾಡಿದ್ದೆ. ಶಾಸಕನಾಗಿ 4 ಬಾರಿ ಆಯ್ಕೆಯಾದ ನಂತರ, ಸಂವಿಧಾನದ ನಿಯಮದಂತೆ ಬುದ್ಧನ ಶಾಂತಿ ಮಂತ್ರ, ಬಸವಣ್ಣನ ಕಾಯಕತತ್ವ ಅಳವಡಿಸಿಕೊಂಡು ಕಾರ್ಯತತ್ವರನಾದೆ. 20 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದೇನೆ.
ತುಮಕೂರು ನಗರದ ಶಾಂತಿ, ಆಡಳಿತ ಸುವ್ಯವಸ್ಥೆ, ಅಭಿವೃದ್ಧಿ ಕನಸು ಹೊಂದಿರುವ ನಗರದ ಹಿರಿಯರು, ನಾಗರಿಕರು, ಪಕ್ಷದ, ವೈಯಕ್ತಿಕ ಅಭಿಮಾನಿಗಳು, ಮಿತ್ರ ಸಮೂಹ, ಕ್ರೀಡಾಪಟುಗಳು, ಯುವ ಸಮೂಹ, ಬಡಜನತೆಯ ಆಶಯದಂತೆ ಪ್ರಚಾರ ಕಾರ್ಯ ಆರಂಭಿಸುತ್ತಿದ್ದೇನೆ. ಸರ್ಕಾರದ ಕೆಲಸ-ಕಾರ್ಯಗಳು ಸಕಾಲಕ್ಕೆ ದೊರೆಯದಿರುವುದು, ನೊಂದ ಹೃದಯಗಳ ಆಸೆ, ಜನತೆಯ ಪ್ರೀತಿ, ಯುವ ಮುಂದಾಳುಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಇತ್ಯಾದಿ ಕಾರಣಗಳಿಂದ ತಾವು 2023 ರ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನ ಮಾಡಿದ್ದೇನೆ ಎಂದು ಸೊಗಡು ಇದೇ ಸಂದರ್ಭದಲ್ಲಿ ತಿಳಿಸಿದರು.
ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಇಂದು ಎಪಿಎಂಸಿ ಯಾರ್ಡ್‌ನಲ್ಲಿ ಪ್ರಚಾರ
ತುಮಕೂರಿನ ಎಪಿಎಂಸಿ ಯಾರ್ಡ್‌ನ ಪಶುಪತಿನಾಥಸ್ವಾಮಿ ದೇವಸ್ಥಾನ (ಚೆಕ್‌ಪೋಸ್ಟ್ ಎದುರು) ಇಲ್ಲಿ ಮಾ. 13ರಂದು ಬೆಳಗ್ಗೆ 10 ಗಂಟೆಗೆ ಪೂಜೆ ಸಲ್ಲಿಸಿ, ಎಪಿಎಂಸಿ ಯಾರ್ಡ್‌ನಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಈ ಊರಿನ ನಾಗರಿಕ ಬಂಧುಗಳು ಸ್ಪರ್ಧಿಸುವಂತೆ ಒತ್ತಾಯಿಸಿದ್ದು, ಇದು ತಮ್ಮ ಕೊನೆಯ ಚುನಾವಣೆಯಾಗಿದೆ. ಅದರಂತೆ ಪ್ರತಿ ದಿನ ತುಮಕೂರು ನಗರದ ಒಂದೊಂದು ವಾರ್ಡ್‌ನಲ್ಲಿ ಪಾದಯಾತ್ರೆ ಮಾಡುತ್ತಾ ಪ್ರಚಾರ ನಡೆಸುತ್ತೇನೆ. ನಾನು ಮಾಡಿರುವ ಕಾಯಕವನ್ನು ಹೇಳಿಕೊಂಡು ಕಳೆದ 20 ವರ್ಷಗಳ ಸಾಧನೆಯ ಕರಪತ್ರವನ್ನು ಹಂಚಿ ಪ್ರಚಾರ ನಡೆಸುತ್ತೇನೆ.
ಸೊಗಡು ಶಿವಣ್ಣ ಮಾಜಿ ಸಚಿವ