ಉತ್ತಮ ಜೀವನ ಸಾಗಿಸಲು ಆರ್ಥಿಕ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಉತ್ತಮ ಆರೋಗ್ಯ ಜೀವನವನ್ನು ಹೊಂದಿ ಶ್ರದ್ಧೆಯಿಂದ ಕಾಯಕ ಮಾಡಿದರೆ ಯಶಸ್ಸು ಸಾಧ್ಯ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.
ತುಮಕೂರು ; ಉತ್ತಮ ಜೀವನ ಸಾಗಿಸಲು ಆರ್ಥಿಕ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಉತ್ತಮ ಆರೋಗ್ಯ ಜೀವನವನ್ನು ಹೊಂದಿ ಶ್ರದ್ಧೆಯಿಂದ ಕಾಯಕ ಮಾಡಿದರೆ ಯಶಸ್ಸು ಸಾಧ್ಯ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.
ಅವರು ಸಿದ್ಧಗಂಗಾ ಆಸ್ಪತ್ರೆ ಸೈಕಲ್… ವಲ್ರ್ಡ, ತುಮಕೂರು ಸೈಕ್ಲಿಸ್ಟ್ ಕ್ಲಬ್ ಸಹಯೋಗದಲ್ಲಿ ವಿಶ್ವಕಿಡ್ನಿ ದಿನದ ಅಂಗವಾಗಿ ನಡೆದ ಸೈಕ್ಲಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.
ದ ಬಗ್ಗೆ ನಿರ್ಲಕ್ಷ್ಯದಿಂದ ದೇಹ ಕಲುಷಿತವಾಗುತ್ತಿದ್ದರೆ, ಮನೋನಿಗ್ರಹದ ಕೊರತೆಯಿಂದ ಬೌದ್ಧಿಕ ಅಧಃಪತನವಾಗುತ್ತಿದೆ. ಮನಸ್ಸು ಹಾಗೂ ದೇಹದ ಸಮತೋಲಿತ ಜೀವನವೇ ಬದುಕಿನ ಆಧಾರ ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್. ಪರಮೇಶ್ ಮಾತನಾಡಿ, ಸದಾ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಸಾರ್ವಜನಿಕರಿಗೆ ಆರೋಗ್ಯ ಉಚಿತ ಶಿಬಿರಗಳ ಮೂಲಕ ಜನರನ್ನು ತಲುಪುತ್ತಿರುವ ಸಿದ್ಧಗಂಗಾ ಆಸ್ಪತ್ರೆ, ಕಿಡ್ನಿ ದಿನದ ಅಂಗವಾಗಿ ಜಾಗೃತಿಗಾಗಿ ವಾಕಥಾನ್ ನಡೆಸಿದ್ದು ಸಾರ್ವಜನಿಕರು ಕಿಡ್ನಿ ಆರೋಗ್ಯದ ಬಗ್ಗೆ ಕಾಳಜಿವಹಿಸಿದರೆ ನಮ್ಮ ಕಾರ್ಯಕ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದರು.
ಹೃದ್ರೋಗ ತಜ್ಞ ಹಾಗೂ ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಡಾ.ಭಾನುಪ್ರಕಾಶ್ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆಯ ಮೂತ್ರಪಿಂಡ ವಿಭಾಗದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದು ಈಗಾಗಲೇ ಎರಡು ಯಶಸ್ವಿ ಕಿಡ್ನಿ ಕಸಿ ನಡೆಸಲಾಗಿದೆ. ರಿಯಾಯಿತಿ ದರದ ಚಿಕಿತ್ಸೆಯ ಜೊತೆಗೆ ಆಧುನಿಕ ಸೌಲಭ್ಯ ನೀಡುವಲ್ಲಿ ಮೂತ್ರಪಿಂಡ ವಿಭಾಗ ಮನ್ನಣೆ ಗಳಿಸಿದೆ ಎಂದರು.
ಸುಮಾರು 250ಕ್ಕೂ ಹೆಚ್ಚು ಜನರು ಸೈಕ್ಲಥೋನ್‌ನಲ್ಲಿ ಭಾಗವಹಿಸಿದ್ದರು. 70 ವರ್ಷದ ಹಿರಿಯ ಸೈಕ್ಲಿಸ್ಟ್ ನಾಗರಾಜು ಹಾಗೂ ದುಬೈನಲ್ಲಿ ಗೂಗಲ…ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮೊಹಮ್ಮದ್ 23 ವರ್ಷಗಳ ನಂತರ ಭಾರತಕ್ಕೆ ಕುಟುಂಬದೊಂದಿಗೆ ಆಗಮಿಸಿ ಸೈಕ್ಲಥಾನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೆಡಿಕಲ… ಕಾಲೇಜು ಪ್ರಾಚಾರ್ಯ ಡಾ.ಶಾಲಿನಿ, ಸಿದ್ಧಗಂಗಾ ಆಸ್ಪತ್ರೆ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಹಿರಿಯ ಅರವಳಿಕೆ ತಜ್ಞ ಹಾಗೂ ಸೈಕ್ಲಿಸ್ಟ್ ಸಿ.ವಿ. ಸ್ವಾಮಿ, ಸೈಕ್ಲಿಸ್ಟ್ ಡಾ.ಅಶ್ವಿನ್, ಸೈಕಲ್ ವಲ್ಡ್‌ರ್ ಮಾಲೀಕರಾದ ಮಲ್ಲಿಕಾರ್ಜುನ್, ಡಾ.ಶರತ್ ಕುಮಾರ್ ಸೇರಿದಂತೆ ಅನೇಕ ವೈದ್ಯರು ಉಪಸ್ಥಿತರಿದ್ದರು.
ಕಿಡ್ನಿ ಜಾಗೃತಿಗಾಗಿ ಸೈಕ್ಲಥೋನ್ ಏರ್ಪಡಿಸಲಾಗಿದೆ. ಮಾನವನಿಗೆ ಕಿಡ್ನಿ ಅವಿಭಾಜ್ಯ ಅಂಗ, ನಮ್ಮ ಕಾಳಜಿಯ ಕೊರತೆಯಿಂದ ದೇಶದಲ್ಲಿ ಪ್ರತಿ ಮಿಲಿಯನ್ ಜನರಲ್ಲಿ ಶೇ.10 ರಷ್ಟುಜನರು ಕಿಡ್ನಿ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಸರಿಯಾದ ಆರೋಗ್ಯ ಕ್ರಮಗಳ ಮೂಲಕ ಕಿಡ್ನಿ ಸಮಸ್ಯೆಯಿಂದ ದೂರವಿರಬಹುದು. ಯಾವುದೇ ಕಿಡ್ನಿ ಸಮಸ್ಯೆಯ ಲಕ್ಷಣ ಕಂಡುಬಂದರೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು.
ಡಾ.ಕುಶಾಲ… ಮೂತ್ರಪಿಂಡ ತಜ್ಞ
ಇವನ್ನು ತೆಗೆದುಕೊಳ್ಳಬೇಡಿ
ದೇಹಕ್ಕೆ ಪೋಷಕಾಂಶದ ಅವಶ್ಯಕತೆಯಿರುತ್ತದೆ. ದೇಹದಲ್ಲಿ ಪೋಷಕಾಂಶ ಕಡಿಮೆ ಇದೆ ಎಂದಾಗ ಜನರು ಸಪ್ಲಿಮೆಂಟರಿ ತೆಗೆದುಕೊಳ್ತಾರೆ. ವೈದ್ಯರು ಕೂಡ ಸಪ್ಲಿಮೆಂಟರಿ ತೆಗೆದುಕೊಳ್ಳುವಂತೆ ಸಲಹೆ ನೀಡ್ತಾರೆ. ದೇಹದಲ್ಲಿ ಪೋಷಕಾಂಶ ಕಡಿಮೆಯಾಗಿರಲಿ ಬಿಡಲಿ ಕೆಲವರಿಗೆ ಸಪ್ಲಿಮೆಂಟರಿ ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ. ವೈದ್ಯರ ಸಲಹೆಯಿಲ್ಲದೆ ಅವರು ಸಪ್ಲಿಮೆಂಟರಿ ಮಾತ್ರೆಗಳನ್ನು ಸೇವನೆ ಮಾಡ್ತಾರೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದ್ರಲ್ಲೂ ಕೆಲವರು ಒಂದೇ ಬಾರಿ ಎರಡು, ಮೂರು ಸಪ್ಲಿಮೆಂಟರಿಯನ್ನು ತೆಗೆದುಕೊಳ್ತಾರೆ. ಇದು ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಹಾಗಾಗಿಯೇ ಕೆಲವು ಪೂರಕಗಳನ್ನು ಒಟ್ಟಿಗೆ ತೆಗೆದುಕೊಳ್ಳಬಾರದು. ನಾವಿಂದು ಯಾವೆಲ್ಲ ಸಪ್ಲಿಮೆಂಟರಿಯನ್ನು ತೆಗೆದುಕೊಳ್ಳಬಾರದು ಅಂತಾ ನಿಮಗೆ ಹೇಳ್ತೇವೆ.
ವಿಟಮಿನ್ ಬಿ 12 (Vitamin B12) ಮತ್ತು ವಿಟಮಿನ್ ಸಿ : ವಿಟಮಿನ್ ಬಿ 12 ದೇಹದ ನರ ಕೋಶಗಳು ಮತ್ತು ರಕ್ತ ಕಣಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಡಿಎನ್‌ಎ (DNA ) ತಯಾರಿಸಲು ಸಹ ಸಹಾಯ ಮಾಡುತ್ತದೆ. ದೇಹ ವಿಟಮಿನ್ ಬಿ 12 ಅನ್ನು ಉತ್ಪಾದಿಸುವುದಿಲ್ಲ. ಹಾಗಾಗಿ ನಾವು ಆಹಾರದಿಂದ ಅದನ್ನು ಪಡೆಯಬೇಕಾಗುತ್ತದೆ. ಇಲ್ಲವೆ ವಿಟಮಿನ್ ಬಿ 12 ಮಾತ್ರೆಗಳನ್ನು ಸೇವನೆ ಮಾಡಬೇಕಾಗುತ್ತದೆ. ಇನ್ನು ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ನಮ್ಮ ದೇಹಕ್ಕೆ ಬಹಳ ಅಗತ್ಯ. ವಿಟಮಿನ್ ಬಿ 12 ಹಾಗೂ ವಿಟಮಿನ್ ಸಿ ಎರಡೂ ನಮ್ಮ ದೇಹಕ್ಕೆ ಬಹಳ ಅವಶ್ಯಕವಾದ್ರೂ ಈ ಎರಡೂ ಸಪ್ಲಿಮೆಂಟರಿಯನ್ನು ಏಕಕಾಲದಲ್ಲಿ ತೆಗೆದುಕೊಳ್ಳಬಾರದು. ಇದು ನಮ್ಮ ದೇಹಕ್ಕೆ ಗಂಭೀರ ಹಾನಿಯುಂಟು ಮಾಡುತ್ತದೆ. ವಿಟಮಿನ್ ಸಿ ಜೊತೆ ವಿಟಮಿನ್ ಬಿ 12 ಸೇವನೆ ಮಾಡಿದ್ರೆ ಏನೂ ಪ್ರಯೋಜನವಿಲ್ಲ. ವಿಟಮಿನ್ ಬಿ 12 ಪರಿಣಾಮವನ್ನು ವಿಟಮಿನ್ ಸಿ ಕಡಿಮೆ ಮಾಡುತ್ತದೆ. ಒಂದ್ವೇಳೆ ಈವೆರಡನ್ನೂ ಒಂದೇ ದಿನ ತೆಗೆದುಕೊಳ್ಳಬೇಕೆಂದ್ರೆ ನೀವು ಎರಡು ಗಂಟೆ ಬಿಟ್ಟು ಸೇವನೆ ಮಾಡ್ಬೇಕು.
Heart Health : ವಯಸ್ಸಾದಂತೆ ಹೃದಯವೂ ಬದಲಾಗುತ್ತೆ, ಹೇಗಿರಬೇಕು ಲೈಫ್‌ಸ್ಟೈಲ್
ತಾಮ್ರ ಮತ್ತು ಸತು ಸಪ್ಲಿಮೆಂಟ್ : ತಾಮ್ರ ಹಾಗೂ ಸತು ಎರಡೂ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶವಾಗಿದೆ. ಆಹಾರದ ಮೂಲಕವೇ ಇದು ದೇಹ ಸೇರುವಂತೆ ಅನೇಕರು ನೋಡಿಕೊಳ್ತಾರೆ. ತಾಮ್ರದಿಂದ ಮೆದುಳಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ನರಮಂಡಲದ ಆರೋಗ್ಯ ಕಾಪಾಡಲು ತಾಮ್ರ ನೆರವಾಗುತ್ತದೆ. ಸತುವು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಸತುವಿನ ಕೊರತೆಯಿಂದಾಗಿ ರೋಗನಿರೋಧಕ ಶಕ್ತಿ, ಆಯಾಸ ಮತ್ತು ತೂಕ ನಷ್ಟ ಪ್ರಾರಂಭವಾಗುತ್ತದೆ. ಆದ್ರೆ ಈ ಎರಡೂ ಪೂರಕಗಳನ್ನು ಒಂದೇ ಸಮಯದಲ್ಲಿ ತೆಗೆದುಕೊಂಡರೆ, ಜೀರ್ಣಾಂಗ ವ್ಯವಸ್ಥೆಯು ಹಾನಿಗೊಳಗಾಗುತ್ತದೆ. ತಾಮ್ರವನ್ನು ನೀವು ಹೆಚ್ಚಾಗಿ ಸೇವನೆ ಮಾಡಿದ್ರೆ ಅದು ಸತುವಿನ ಕೊರತೆಗೆ ಕಾರಣವಾಗಬಹುದು.