ಹುಬ್ಬಳ್ಳಿ: ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಸಕ್ಸಕ್‌, ಕೊರೋನಾ ರೋಗಿ ಡಿಸ್ಚಾರ್ಜ್‌

By Kannadaprabha NewsFirst Published Jun 18, 2020, 7:22 AM IST
Highlights

ರಾಜ್ಯದ ಮೊದಲ ಪ್ಲಾಸ್ಮಾ ಚಿಕಿತ್ಸೆ ಪಡೆದ ಸೋಂಕಿತ ಡಿಸ್ಚಾರ್ಜ್‌| ಸೋಂಕಿತ ಸಂಪೂರ್ಣ ಗುಣಮುಖ| ಹೂಗುಚ್ಛ ನೀಡಿ ಆಸ್ಪತ್ರೆಯಿಂದ ಬೀಳ್ಕೊಟ್ಟ ಸಚಿವ ಜಗದೀಶ ಶೆಟ್ಟರ್‌| 65 ವರ್ಷದ ವೃದ್ಧ ಪಿ-363 ಅವರಿಂದ ರಕ್ತ ಪಡೆದು ಪ್ಲಾಸ್ಮಾ ಬೇರ್ಪಡಿಸಿ ಪಿ-2710ಗೆ ಮೇ 29 ಹಾಗೂ 30ರಂದು ತಲಾ 200 ಎಂಎಲ್‌ನಂತೆ ಎರಡು ಬಾರಿ ಪ್ಲಾಸ್ಮಾ ಚಿಕಿತ್ಸೆ ನಡೆಸಲಾಗಿತ್ತು|

ಹುಬ್ಬಳ್ಳಿ(ಜೂ.18): ಕೊರೋನಾ ಸೋಂಕಿತನನ್ನು ಪ್ಲಾಸ್ಮಾ ಥೆರಪಿ ಮೂಲಕ ಗುಣಪಡಿಸಿದ ರಾಜ್ಯದ ಮೊದಲ ಪ್ರಕರಣಕ್ಕೆ ಇದೀಗ ಕಿಮ್ಸ್‌ ಸಾಕ್ಷಿಯಾಗಿದೆ. ಇಲ್ಲಿ ಪ್ಲಾಸ್ಮಾ ಚಿಕಿತ್ಸೆ ಪ್ರಾರಂಭಿಸಿದ ಬಳಿಕ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡಿದ್ದ 64 ವರ್ಷದ ಕೊರೋನಾ ಸೋಂಕಿತ ವೃದ್ಧ(ಪಿ 2710) ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಯಿತು. ಈ ಸಂದರ್ಭ ಧಾರವಾಡ ಜಿಲ್ಲಾ ಉಸ್ತುವಾರಿರೂ ಆಗಿರುವ ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೂಗುಚ್ಛ ನೀಡಿ ಆಸ್ಪತ್ರೆಯಿಂದ ಬೀಳ್ಕೊಟ್ಟರು.

ಮಹಾರಾಷ್ಟ್ರದಿಂದ ಹಿಂದುರುಗಿದ್ದ ಸೋಂಕಿತ ವೃದ್ಧ ಮೇ 27ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಿತ್ತು. ಮಧ್ಯಮ ಸ್ಥಿತಿಯಲ್ಲಿದ್ದ ಇವರಿಗೆ ಕಿಮ್ಸ್‌ನ ಮೆಡಿಸಿನ್‌ ವಿಭಾಗದ ತಜ್ಞರ ತಂಡ ಐಸಿಎಂಆರ್‌ ಮಾರ್ಗಸೂಚಿ ಅನ್ವಯ ಪ್ಲಾಸ್ಮಾ ಥೆರಪಿ ನೀಡಲು ನಿರ್ಧರಿಸಿದರು. ಅದರಂತೆ 65 ವರ್ಷದ ವೃದ್ಧ ಪಿ-363 ಅವರಿಂದ ರಕ್ತ ಪಡೆದು ಪ್ಲಾಸ್ಮಾ ಬೇರ್ಪಡಿಸಿ ಪಿ-2710ಗೆ ಮೇ 29 ಹಾಗೂ 30ರಂದು ತಲಾ 200 ಎಂಎಲ್‌ನಂತೆ ಎರಡು ಬಾರಿ ಪ್ಲಾಸ್ಮಾ ಚಿಕಿತ್ಸೆ ನಡೆಸಲಾಗಿತ್ತು.

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ: ಕೊರೋನಾ ಸೋಂಕಿತ ಗುಣಮುಖ

ಬಳಿಕ ನಿಧಾನವಾಗಿ ಚೇತರಿಸಿಕೊಳ್ಳುತ್ತಾ ಬಂದ ಸೋಂಕಿತ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ. ಪ್ಲಾಸ್ಮಾ ಥೆರಪಿ ತಂಡದಲ್ಲಿ ಡಾ.ಈಶ್ವರ ಹಸಬಿ, ಡಾ.ರಾಮು ಕೌಲಗುಡ್ಡ, ಡಾ.ಪರಶುರಾಮ ರೆಡ್ಡಿ, ಡಾ.ಮಹೇಶಕುಮಾರ, ಡಾ.ಶೈಲೇಂದ್ರ, ಡಾ.ಗಿರೀಶ್‌ ರಾವತ್‌, ಡಾ. ಜೀವಪ್ರಿಯಾ ಇದ್ದರು.

click me!