ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಭಾರೀ ಪ್ರಮಾಣದ ಗೋಲ್‌ಮಾಲ್ ನಡೆದಿದ್ದು ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿ ಮೂವರ ಅಮಾನತು ಪಡಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.
ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ (ಜು.31) : ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಭಾರೀ ಪ್ರಮಾಣದ ಗೋಲ್‌ಮಾಲ್ ನಡೆದಿದ್ದು ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿ ಮೂವರ ಅಮಾನತು ಪಡಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.
undefined
ಕಾರ್ಯದರ್ಶಿ ಶ್ರೀಧರ ಬಿ.ಭಜಂತ್ರಿ, ಉಪ ಕಾರ್ಯದರ್ಶಿ ಎಚ್. ಕೃಷ್ಣನಾಯ್ಕ, ದ್ವಿತೀಯ ದರ್ಜೆ ಸಹಾಯಕ ಪಾಪಯ್ಯರನ್ನು ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಸರ್ಕಾರದ ಗಮನಕ್ಕೆ ಬಾರದಂತೆ ಸುಮಾರು .406 ಕೋಟಿ ಕಾಮಗಾರಿಗೆ ಈ ಮೂವರು ಕಾರ್ಯಾದೇಶ ನೀಡಿದ್ದರು. ಈ ಸಂಗತಿ ಅರಿತ ಸರ್ಕಾರ ಜು.20ರಂದು ಐವರು ತನಿಖಾಧಿಕಾರಿಗಳ ತಂಡ ಕಳಿಸಿ ಪರಿಶೀಲನೆ ನಡೆಸಿದಾಗ ಭಾರೀ ಪ್ರಮಾಣದ ಅಕ್ರಮ ಬಯಲಾಗಿದೆ.
ಮದ್ರಾಸ್ EYE ಗೆ ನಲುಗಿ ಹೋದ ವಿದ್ಯಾರ್ಥಿಗಳು, ಕೂಲಿಂಗ್ ಗ್ಲಾಸ್ ಧರಿಸಿ ಶಾಲೆಗೆ
2022-23ನೇ ಸಾಲಿನಲ್ಲಿ ಸರ್ಕಾರ ಅನುಮೋದಿಸಿ ಬಿಡುಗಡೆಗೊಳಿಸಿದ ಅನುದಾನಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ನಿಯಮ ಬಾಹಿರವಾಗಿ ಆಡಳಿತಾತ್ಮಕ ಅನುಮೋದನೆ ನೀಡಿರುವುದು, ಅನುದಾನ ಬಿಡುಗಡೆ ಮಾಡಿರುವುದು, ಮಂಡಳಿ ಅನುದಾನ ದುರುಪಯೋಗ ಪಡಿಸಿಕೊಂಡಿರುವುದು ಮತ್ತು ಕಡತಗಳಲ್ಲಿ ಅನಧಿಕೃತವಾಗಿ ತಿದ್ದುಪಡಿ ಮಾಡಿರುವುದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದು ಬಂದಿದೆ.
14 ಜಿಲ್ಲೆ ಹಾಗೂ 70 ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಒಳಗೊಂಡಿರುವ ಬಯಲು ಸೀಮೆ ಅಭಿವೃದ್ಧಿ ಮಂಡಳಿಗೆ ವಾರ್ಷಿಕ ಬಜೆಟ್‌ನಲ್ಲಿ .40 ರಿಂದ .50 ಕೋಟಿ ಅನುದಾನ ಕಾಯ್ದಿರಿಸಲಾಗುತ್ತದೆ. ಇಷ್ಟೇ ಅನುದಾನಕ್ಕೆ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸಿ ಮಂಡಳಿ ಸಭೆಯಲ್ಲಿಟ್ಟು ಅನುಮೋದನೆ ಪಡೆದು ನಂತರ ಸರ್ಕಾರದ ಗಮನಕ್ಕೆ ತಂದು ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕಳೆದ ವರ್ಷ ಸರ್ಕಾರ ತುಸು ಹೆಚ್ಚು ಅಂದರೆ .150 ಕೋಟಿ ಅನುದಾನ ನೀಡಿತ್ತು. ಈ ಬಾರಿ .38 ಕೋಟಿ ಅನುದಾನ ಕಲ್ಪಿಸಲಾಗಿದೆ. ಇಷ್ಟುಮೊತ್ತಕ್ಕೇ ಕ್ರಿಯಾ ಯೋಜನೆ ತಯಾರಿಸಬೇಕಿತ್ತು. ಅಚ್ಚರಿ ಎಂದರೆ ಈ ವರ್ಷದ ಅನುದಾನ ಕಾಯ್ದಿರಿಸುವ ಮುನ್ನವೇ ಮಂಡಳಿ ಕಾರ್ಯದರ್ಶಿ ಸುಮಾರು .406 ಕೋಟಿ ಕಾಮಗಾರಿಗೆ ಕಾರ್ಯಾದೇಶ ನೀಡಿದ್ದಾರೆ. ಅಂದರೆ ಬರೋಬ್ಬರಿ .368 ಕೋಟಿ ಕಾಮಗಾರಿ ಸ್ಪಿಲ್ ಓವರ್ ಆಗುತ್ತವೆ.
ಮೂವರು ವ್ಯಕ್ತಿಗಳ ನಿರ್ಧಾರ: ಮಂಡಳಿಯಿಂದ ಕಾರ್ಯಾದೇಶ ನೀಡಿರುವುದರಿಂದ ಬಹುತೇಕ ಕಡೆ ಕಾಮಗಾರಿಗಳು ಆರಂಭವಾಗಿವೆ. ಇವಕ್ಕೆಲ್ಲ ಆದ್ಯತೆ ಅನುಸಾರ ಬಿಲ್ ಪಾವತಿ ಮಾಡಬೇಕು. ಮಂಡಳಿಗೆ ಈ ಬಾರಿ ನೀಡಲಾದ ಅನುದಾನದಲ್ಲಿ ಬಿಲ್ ನೀಡಲು ಸಾಧ್ಯವಾಗದಿದ್ದರೆ ಇವೆಲ್ಲ ಮುಂದುವರಿದ (ಸ್ಪಿಲ್ ಓವರ್) ಕಾಮಗಾರಿಗಳಾಗುತ್ತವೆ. ಹಾಲಿ ಮಂಡಳಿಗೆ ನೀಡುತ್ತಿರುವ ಅನುದಾನಕ್ಕೆ ಲೆಕ್ಕಾಚಾರ ಹಾಕಿದರೆ ಮುಂದಿನ .10 ವರ್ಷ ಕಾಲ ಹೊಸ ಕಾಮಗಾರಿ ಕೈಗೆತ್ತಿಕೊಳ್ಳದೆ ಹಳೆಯದಕ್ಕೆ ಹಣ ಪಾವತಿ ಮಾಡಬೇಕಾಗುತ್ತದೆ.
ದುರ್ಗಾದಲ್ಲಿ ಶಾಸಕ ವೀರೇಂದ್ರ ಪಪ್ಪಿ ಕುಟುಂಬದ ದರ್ಬಾರ್!
ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಧರ ಭಜಂತ್ರಿ ಮೂಲತಃ ಉನ್ನತ ಶಿಕ್ಷಣ, ಉಪ ಕಾರ್ಯದರ್ಶಿ ಕೃಷ್ಣಾನಾಯ್ಕ ಮೂಲತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪಾಪಯ್ಯ ಮೂಲತಃ ಲೋಕೋಪಯೋಗಿ ಇಲಾಖೆಗೆ ಸೇರಿದವರು. ನಿಯೋಜನೆ ಮೇರೆಗೆ ಬಂದವರು. ಇವರನ್ನು ಜು.27ರಂದು ಅಮಾನತುಗೊಳಿಸಿ ಮಾತೃ ಇಲಾಖೆಗೆ ವಾಪಾಸ್ಸು ಕಳಿಸಲಾಗಿದೆ.