ತುಮುಲ್‌ ನೇಮಕದಲ್ಲಿ ಭಾರೀ ಅಕ್ರಮ: ತನಿಖೆಗೆ ಒತ್ತಾಯ

By Kannadaprabha News  |  First Published Jul 31, 2023, 6:09 AM IST

ಜಿಲ್ಲಾ ಹಾಲು ಒಕ್ಕೂಟದ (ತುಮುಲ್‌) ವತಿಯಿಂದ ಅಲ್ಲಿಯ ಆಡಳಿತ ನೇಮಕಾತಿ ಪ್ರಕ್ರಿಯೆಗಾಗಿ ನಡೆಸಿದ್ದ ಪರೀಕ್ಷೆಯಲ್ಲಿ ಭಾರಿ ಅಕ್ರಮವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಲವಾರು ಉದ್ಯೋಗಾಕಾಂಕ್ಷಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಹೈಕೋರ್ಚ್‌ ನೇಮಕಾತಿ ಪ್ರಕ್ರಿಯೆಗೆ ತಡೆಯೊಡ್ಡಿದೆ ಎಂದು ತಾಲೂಕು ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ತಾವರೇಕೆರೆ ಬೋರೇಗೌಡ ಮತ್ತು ಟಿಎಪಿಸಿಎಂಎಸ್‌ ನ ನಿರ್ದೇಶಕ ಡಿ.ಪಿ.ರಾಜು ತಿಳಿಸಿದ್ದಾರೆ.


  1. ತುರುವೇಕೆರೆ : ಜಿಲ್ಲಾ ಹಾಲು ಒಕ್ಕೂಟದ (ತುಮುಲ್‌) ವತಿಯಿಂದ ಅಲ್ಲಿಯ ಆಡಳಿತ ನೇಮಕಾತಿ ಪ್ರಕ್ರಿಯೆಗಾಗಿ ನಡೆಸಿದ್ದ ಪರೀಕ್ಷೆಯಲ್ಲಿ ಭಾರಿ ಅಕ್ರಮವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಲವಾರು ಉದ್ಯೋಗಾಕಾಂಕ್ಷಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಹೈಕೋರ್ಚ್‌ ನೇಮಕಾತಿ ಪ್ರಕ್ರಿಯೆಗೆ ತಡೆಯೊಡ್ಡಿದೆ ಎಂದು ತಾಲೂಕು ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ತಾವರೇಕೆರೆ ಬೋರೇಗೌಡ ಮತ್ತು ಟಿಎಪಿಸಿಎಂಎಸ್‌ ನ ನಿರ್ದೇಶಕ ಡಿ.ಪಿ.ರಾಜು ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲಾ ಹಾಲು ಒಕ್ಕೂಟವು ತಮ್ಮ ಕಚೇರಿಗೆ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆಗೆ ಮುಂದಾಗಿತ್ತು. ಈ ತಿಂಗಳ ಆರಂಭದಲ್ಲಿ ಹುದ್ದೆಗಾಗಿ ಪರೀಕ್ಷೆಯನ್ನೂ ಸಹ ಮಾಡಲಾಗಿತ್ತು. ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದರು. ಆ ಪರೀಕ್ಷೆ ವೇಳೆ ಈಗಾಗಲೇ ಹುದ್ದೆಯನ್ನು ಬಿಕರಿ ಮಾಡಿಕೊಂಡಿರುವ ಹಲವಾರು ಮಂದಿ ಖಾಲಿ ಉತ್ತರ ಪತ್ರಿಕೆಯ ಹಾಳೆಯನ್ನು ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಪರೀಕ್ಷೆ ಬರೆದಿದ್ದವರು ಹಲವಾರು ಮಂದಿ ಖಾಲಿ ಶೀಟ್‌ ನೀಡಿರುವ ಸಂಗತಿಯನ್ನು ನೋಡಿದ್ದರು. ಇದರಿಂದ ಅನುಮಾನಗೊಂಡ ಹಲವರು ಪರೀಕ್ಷೆ ಬರೆದಿದ್ದವರು ಪರೀಕ್ಷೆ ನಡೆಸಿದ ದಿನವೇ ಬಹಿರಂಗವಾಗಿ ಖಾಲಿ ಉತ್ತರ ಪತ್ರಿಕೆ ನೀಡಿದ್ದ ಸಂಗತಿಯನ್ನು ಬಯಲು ಮಾಡಿದ್ದರು.

ಇದನ್ನು ಆಕ್ಷೇಪಿಸಿ ಹಲವಾರು ಉದ್ಯೋಗಾಕಾಂಕ್ಷಿಗಳು ಜಿಲ್ಲಾ ನ್ಯಾಯಾಲಯ ಪ್ರಾಧಿಕಾರ, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೇ ಹೈಕೋರ್ಟಿನ ಮೆಟ್ಟಿಲನ್ನೂ ಏರಿದ್ದರು. ಪರೀಕ್ಷೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಚ್‌ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ ಎಂದು ತಾವರೇಕೆರೆ ಬೋರೇಗೌಡ ಮತ್ತು ಡಿ.ಪಿ.ರಾಜು ತಿಳಿಸಿದರು.

Tap to resize

Latest Videos

ತುಮುಲ್‌ನಲ್ಲಿ ನಡೆದಿರುವ ನೇಮಕಾತಿ ಹಗರಣ ಪಿಎಸ್‌ಐ ಹಗರಣದಷ್ಟೇ ದೊಡ್ಡ ಪ್ರಕರಣವಾಗಿದೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್‌, ಸಹಕಾರ ಸಚಿವರಾದ ಕೆ.ಎನ್‌.ರಾಜಣ್ಣ, ಮುಖ್ಯಮಂತ್ರಿಗಳು, ಸ್ಥಳೀಯ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವಾರು ಧುರೀಣರಿಗೆ ದೂರು ನೀಡಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದೂ ಸಹ ತಾವರೇಕೆರೆ ಬೋರೇಗೌಡ ಮತ್ತು ಡಿ.ಪಿ.ರಾಜು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆಂಪೇಗೌಡ, ಮಲ್ಲಾಘಟ್ಟಹುಚ್ಚೇಗೌಡ, ಕಾಳಂಜೀಹಳ್ಳಿ ನಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೋಟ್‌....

ಹೈಕೋರ್ಚ್‌ ತಡೆಯಾಜ್ಞೆ ನೀಡಿದ್ದರೂ ಸಹ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಾಮ ಮಾರ್ಗದ ಮೂಲಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಸಂಗತಿ ತಿಳಿದು ಬಂದಿದೆ. ಇಂತಹ ಕೃತ್ಯ ಮಾಡಿದಲ್ಲಿ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸುವುದಲ್ಲದೇ, ಜಿಲ್ಲಾ ಹಾಲು ಒಕ್ಕೂಟದ ಮುಂದೆ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳೊಂದಿಗೆ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು.

ಬೋರೇಗೌಡ ತಾಲೂಕು ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ

ಡಿ.ಪಿ.ರಾಜು ಟಿಎಪಿಸಿಎಂಎಸ್‌ ನಿರ್ದೇಶಕ

29 ಟಿವಿಕೆ 4 - ತುರುವೇಕೆರೆಯಲ್ಲಿ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ತಾವರೇಕೆರೆ ಬೋರೇಗೌಡ ಮತ್ತು ಟಿಎಪಿಸಿಎಂಎಸ್‌ ನಿರ್ದೇಶಕ ಡಿ.ಪಿ.ರಾಜು ಪತ್ರಿಕಾಗೋಷ್ಠಿ ನಡೆಸಿದರು.

click me!