Jesus Christ Photo printed on ration cards: ಪಡಿತರ ಚೀಟಿಯಲ್ಲಿ ಏಸು ಭಾವಚಿತ್ರವನ್ನು ಮುದ್ರಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಹಿಂದೂಪರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ
ರಾಮನಗರ (ಅ. 19): ರಾಜ್ಯದಲ್ಲಿ ಧರ್ಮ ದಂಗಲ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತವರಿನಲ್ಲಿ ಮತ್ತೊಮ್ಮೆ ಏಸು ವಿವಾದ ಭುಗಿಲೆದಿದ್ದೆ. ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ಧರ್ಮದ ವಿಚಾರ ಸಾಕಷ್ಟು ಸದ್ದು ಮಾಡಿ ಚರ್ಚೆಗೆ ಗ್ರಾಸವಾಗಿದೆ. ಹಾರೋಬೆಲೆಯ ಮುನೇಶ್ವರಿ ಸ್ವಾಮಿ ಬೆಟ್ಟದಲ್ಲಿ ಏಸು ಪ್ರತಿಮೆ ವಿವಾದ ಬಹುತೇಕ ತಣ್ಣಗಾದ ಬೆನ್ನಲ್ಲೇ ಪಡಿತರ ಚೀಟಿಯಲ್ಲಿ ಏಸು ಭಾವಚಿತ್ರವನ್ನು ಮುದ್ರಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಇದು
ಹಿಂದೂಪರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ರೇಷನ್ ಕಾರ್ಡ್‌ನ ಹಿಂಬದಿಯ ಪುಟದಲ್ಲಿ ಏಸು ಕ್ರಿಸ್ತನ ಭಾವಚಿತ್ರವಿದ್ದು, ಬಹುತೇಕ ಈ ಭಾಗದ ಎಲ್ಲಾ ಪಡಿತರ ಚೀಟಿದಾರರಿಗೆ ಇದೇ ಮಾದರಿಯ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ರೇಷನ್ ಕಾರ್ಡಿನ ಹಿಂಭಾಗದಲ್ಲಿ ಯೇಸುವಿನ ಫೋಟೊ ಇದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹಾ ಆಗುತ್ತಿದೆ. ಇದು ಹಿಂದೂ ಪರ ಸಂಘಟನೆಗಳ ಕೆಂಗೆಣ್ಣಿಗೂ ಗುರಿಯಾಗಿದೆ. ಈ ಸಂಬಂಧ ಶ್ರೀರಾಮಸೇನೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಕೆ ಉಪನಿರ್ದೇಶಕರಿಗೆ ದೂರು ನೀಡಿದ್ದು, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಮಾಡಿದ್ದಾರೆ.
ಇಸ್ಲಾಂಗೆ ಮತಾಂತರ, ಹಿಂದೂ ಧರ್ಮದ ವಿರುದ್ಧ ಬ್ರೈನ್ ವಾಶ್: ಮಾಜಿ ಕಾರ್ಪೊರೇಟರ್ ಸೆರೆ
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರ ಸ್ವಗ್ರಾಮ. ಕನಕಪುರ ತಾಲೂಕಿನ ಉಯ್ಯಂಬಳ್ಳಿಯಲ್ಲಿ ಪತ್ತೆಯಾಗಿರುವ ಏಸು ಭಾವ ಚಿತ್ರವಿರುವ ಪಡಿತರ ಕಾರ್ಡ್‌ಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ತವರು ಗ್ರಾಮ ದೊಡ್ಡಾಲಹಳ್ಳಿಯಲ್ಲಿ ಎನ್ನುವುದು ವಿಶೇಷ.
ನಕಲಿಯೋ ಅಥವಾ ಅಸಲಿಯೋ? ತನಿಖೆ: ರೇಷನ್ ಕಾರ್ಡ್‌ನ ಹಿಂಬದಿಯಲ್ಲಿ ಎಲ್ಲಿ ಮುದ್ರಣವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದರಲ್ಲಿ ನ್ಯೂ ಪುಷ್ಪ ಸ್ಟುಡಿಯೋ ದೊಡ್ಡಾಲಹಳ್ಳಿ ಎಂದು ನಮೂದಿಸಲಾಗಿದೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಿಟ್ಟಿನಲ್ಲಿ ಕನಕಪುರ ತಹಶೀಲ್ದರ್, ಪೊಲೀಸರ ಜೊತೆಗೂಡಿ ಇದು ನಕಲಿಯೋ ಅಥವಾ ಅಸಲಿಯೋ ಎಂದು ತನಿಖೆಗೂ ಸಹ ಮುಂದಾಗಿದ್ದಾರೆ. ಇನ್ನೂ ಕಳೆದ ಎರಡು ವರ್ಷದಿಂದ ರೇಷನ್ ಕಾರ್ಡಿನ ಪಾಸ್ ಬುಕ್ ರದ್ದಾಗಿದ್ದು, ಇದೀಗ ಥಂಬ್ ಕೊಟ್ಟು ಪಡಿತರ ಪಡಿಯಬೇಕಿದೆ. ಅಂತಹದರಲ್ಲಿ ಇದೀಗ ಪತ್ತೆಯಾಗಿರೋ ಕಾರ್ಡ್‌ಗಳು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಇದಕ್ಕೂ ಇಲಾಖೆಗೂ ಸಂಬಂಧವಿಲ್ಲ: ಇನ್ನೂ ಈ ಬಗ್ಗ ಪ್ರತಿಕ್ರಿಯೆ ನೀಡಿರುವ ಫುಡ್ ಡಿಡಿ, ನಮ್ಮ ಇಲಾಖೆಯಿಂದ ಈ ರೀತಿಯ ಯಾವುದೇ ಕಾರ್ಡ್‌ಗಳನ್ನು ವಿತರಣೆ ಮಾಡಿಲ್ಲ. ಕಾರ್ಡ್ ಲ್ಯಾಮಿನೇಷನ್ ಮತ್ತು ಕವರ್ ಹಾಕಿಸಿಕೊಳ್ಳುವ ವೇಳೆ ಈ ರೀತಿ ಆಗಿರಬಹುದು. ಇದಕ್ಕೂ ಇಲಾಖೆಗೂ ಸಂಬಂಧವಿಲ್ಲ. ಆದರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಿದ್ದಾರೆ. ಒಟ್ಟಾರೆ ಇದೀಗ ಪತ್ತೆಯಾಗಿರೋ ಪಡಿತರ ಹಿಂಭಾಗದ ಯೇಸು ಫೋಟೊ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ತನಿಖೆ ನಂತರ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.