ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಜಾತ್ರೆಗಳು!

Published : Apr 02, 2022, 05:19 PM IST
 ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಜಾತ್ರೆಗಳು!

ಸಾರಾಂಶ

 ಅಲ್ಲಿನ ಜಾತ್ರೆಗಳಲ್ಲಿ ವ್ಯಾಪಾರ ಧರ್ಮ, ಇಲ್ಲಿನ ಜಾತ್ರೆಗಳಲ್ಲಿ ಅಡಗಿದೆ ಸೌಹಾರ್ದತೆಯ ಮರ್ಮ..! ಅತ್ತ ಮುಸ್ಲಿಂ ಮಹಿಳೆಯರಿಂದ ದೇವರಿಗೆ ದೀಡ್‌ ನಮಸ್ಕಾರ ಇತ್ತ ಕತ್ನಳ್ಳಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌  

ವಿಜಯಪುರ (ಏ.2): ರಾಜ್ಯದ ಬಹುತೇಕ ಜಾತ್ರೆಗಳಲ್ಲಿ  ವ್ಯಾಪಾರ ಧರ್ಮ ನಡೆಯುತ್ತಿದೆ. ಹಿಂದೂ ಜಾತ್ರೆಗಳು ನಡೆಯೋ ಜಾಗಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಭಂದ ಹೇರುವ ಕಾರ್ಯ ಕೂಡ ಕೆಲವೆಡೆ ನಡೆಯುತ್ತಿದೆ. ಆದ್ರೆ ಗುಮ್ಮಟನಗರಿ ವಿಜಯಪುರದ ಜಾತ್ರೆಗಳಲ್ಲಿ ಸೌಹಾರ್ದತೆಯ ಮರ್ಮ ಅಡಗಿದೆ. ವಿಜಯಪುರ (Vijyapura) ಜಿಲ್ಲೆಯಲ್ಲಿ (Vijayapur district) ನಡೆದ ಎರೆಡು ಜಾತ್ರೆಗಳು ಹಿಂದೂ-ಮುಸ್ಲಿಂ (Hindu Muslim) ಸೌಹಾರ್ದತೆಗೆ ಸಾಕ್ಷಿಯಾಗಿವೆ.

ಬಸವನ ಬಾಗೇವಾಡಿ (Basavana Bagewadi) ತಾಲೂಕಿನ ಜಾಯವಾಡಗಿ ಗ್ರಾಮದೇವರ ಜಾತ್ರೆಯಲ್ಲಿ ಮುಸ್ಲಿಂ ಮಹಿಳೆಯರು (Women) ದೀಡ್‌ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ. ಇತ್ತ ಕತ್ನಳ್ಳಿ ಸದಾಶಿವ ಅಜ್ಜನ ಯುಗಾದಿ (Yugadi) ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೂ ಅಂಗಡಿ ಹಾಕಲಿಕ್ಕೆ ಅವಕಾಶ ಕಲ್ಪಿಸಿದ್ದು, ಸೌಹಾರ್ದತೆಗೆ ಮೆರೆದಿದ್ದಾರೆ.

ಸಾಲು ಸಾಲು ರಜೆ, ಶಾಲೆಗಳಲ್ಲಿ COVID ಲಸಿಕೆ ಅಭಿಯಾನಕ್ಕೆ ಹಿನ್ನಡೆ

ಮುಸ್ಲಿಂ ವ್ಯಾಪಾರಸ್ಥರಿಗೆ ಜಾತ್ರೆಯಲ್ಲಿ ಅವಕಾಶ: ವಿಜಯಪುರ ಜಿಲ್ಲೆಯ ಕತ್ನಳ್ಳಿ ಗ್ರಾಮದಲ್ಲಿ (Katakanahalli Village) ನಡೆಯುವ ಯುಗಾದಿ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ವರ್ಷವು ಮುಸ್ಲಿಂ ವ್ಯಾಪಾರಸ್ಥರರಿಗೆ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ವ್ಯಾಪಾರ ಧರ್ಮ ಹೆಸ್ರಲ್ಲಿ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನ ದೂರಿಡುತ್ತಿರುವ ಸಮಯದಲ್ಲಿ ಕತ್ನಳ್ಳಿ ಸದಾಶಿವ ಅಜ್ಜನ ಯುಗಾದಿ ಜಾತ್ರೆ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಜಾತ್ರೆಯಲ್ಲಿ ತೆಂಗಿನಕಾಯಿ, ಕರ್ಪೂರ, ಪ್ಲಾಸ್ಟಿಕ್‌ ಆಟಿಕೆ ಸೇರಿದಂತೆ ಇತರೆ ವಸ್ತುಗಳನ್ನ ಮುಸ್ಲಿಂ ಸಮುದಾಯವರು ಮಾರಾಟ ಮಾಡ್ತಿದ್ದಾರೆ. ಹಿಂದೂಗಳು ಯಾವುದೇ ಭೇದ-ಭಾವಗಳಿಲ್ಲದೆ ಮುಸ್ಲಿಂ ವ್ಯಾಪಾರಸ್ಥರ ಬಳಿಯಲ್ಲೆ ತೆಂಗಿನಕಾಯಿ, ಆಟಿಕೆ, ಕರ್ಪೂರಗಳನ್ನ ಖರೀದಿಸುತ್ತಿದ್ದಾರೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ (Asianet Suvarna News) ಜೊತೆಗೆ ಮಾತನಾಡಿದ ಮುಸ್ಲಿಂ ವ್ಯಾಪಾರಿ ಮಹಮ್ಮದ್‌ ರಫಿ ಇಲ್ಲಿ ಯಾವುದೇ ಧಾರ್ಮಿಕ ಭೇದವಿಲ್ಲ. ಪ್ರತಿವರ್ಷದಂತೆ ಈ ವರ್ಷವು ನಮಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದಾರೆ. ಕೊರೊನಾದಿಂದ ಕೊಂಚ ಕಷ್ಟದಲ್ಲಿದ್ದ ನಮಗೆ ಈ ಬಾರಿ ಜಾತ್ರೆಯಲ್ಲಿ ಒಳ್ಳೆಯ ವ್ಯಾಪಾರವೇ ನಡೆಯುತ್ತಿದೆ ಎಂದಿದ್ದಾರೆ. ಇನ್ನು ಸ್ವತಃ ಕತ್ನಳ್ಳಿ ಸದಾಶಿವ ಅಜ್ಜನ ಮಠದ ಕಮೀಟಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅನುವು ಮಾಡಿ ಕೊಡುವ ಮೂಲಕ ಸೌಹಾರ್ದತೆ ಮೆರೆದಿದೆ.

ಥಾಯ್ಲೆಂಡ್ ಜತೆ ಶಿಕ್ಷಣ , ಐಟಿ , ಬಿಟಿ ಸಹಕಾರಕ್ಕೆ ರಾಜ್ಯದ ಒಲವು

ಧಾರ್ಮಿಕ ಸೌಹಾರ್ದಕ್ಕೆ ಸಾಕ್ಷಿ ಕತ್ನಳ್ಳಿ ಜಾತ್ರೆ: ಭಕ್ತರ ಜಾತ್ರೆ ಅಂತಲೇ ಕರೆಯಿಸಿಕೊಳ್ಳುವ ಕತ್ನಳ್ಳಿ ಸದಾಶಿವ ಅಜ್ಜನ ಯುಗಾದಿ ಜಾತ್ರೆ ಹಲವಾರು ವರ್ಷಗಳಿಂದ ಭಾವೈಕ್ಯತೆ ಸಾಕ್ಷಿಯಾಗುತ್ತ ಬಂದಿದೆ. ತಲಾಂತರದಿಂದಲೂ ಹಿಂದೂ ಮುಸ್ಲಿಂರು ಸೇರಿ ಭಾವೈಕ್ಯತೆಯಿಂದ ಜಾತ್ರೆ ಮಾಡ್ತಾರೆ.. ಯುಗಾದಿ ಅಮಾವಾಸ್ಯೆಯಿಂದ ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಮುಸ್ಲಿಂ ಸಮುದಾಯದವರು ಕಾಣಿಕೆ ನೀಡುವ ಮೂಲಕ ಅಜ್ಜನ ಸೇವೆ ಮಾಡ್ತಾರೆ. ಹಿಂದೂ-ಮುಸ್ಲಿಂ ಭೇದ_ಭಾವವಿಲ್ಲದೆಯೇ ಈ ಜಾತ್ರೆಯಲ್ಲಿ ಪಾಲ್ಗೊಳ್ತಾರೆ..!

ಮುಸ್ಲಿಂ ಮಹಿಳೆಯರ ದೀಡ್‌ ನಮಸ್ಕಾರ: ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಜಾಯವಾಡಗಿ (Jayawadagi Village) ಗ್ರಾಮದ ಸೋಮನಾಥ ಶಿವಪ್ಪ ಮುತ್ಯಾ ಜಾತ್ರೆಯಲ್ಲಿ ಮುಸ್ಲಿಂ ಮಹಿಳೆ ದೀರ್ಘದಂದ ನಮಸ್ಕಾರ ಹಾಕಿದ್ದಾಳೆ. ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ಊರ ದೇವರಿಗೆ ದೀಡ್‌ ನಮಸ್ಕಾರ ಹಾಕಿ ಭಕ್ತಿ ಸಮರ್ಪಿಸುವ ವಾಡಿಕೆ. ಹಾಗೇ ಜಾಯವಾಡಗಿ ಗ್ರಾಮದ ರಿಯಾನ್‌ ಮುಲ್ಲಾ, ಸಾಬವ್ವ ಮುಲ್ಲಾ ದೀಡ್‌ ನಮಸ್ಕಾರ ಹಾಕಿದ್ದಾರೆ. ಜೊತೆಗೆ ಇದೆ ಗ್ರಾಮ ಇನ್ನು ಕೆಲವು ಮುಸ್ಲಿಂ ಭಕ್ತರು ದೇವರಿಗೆ ದೀರ್ಘ ದಂಡ ನಮಸ್ಕಾರ ಹಾಕಿ ಹರಕೆಯನ್ನು ತೀರಿಸಿದ್ದಾರೆ. ಈ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಾತ್ರೆಯಲ್ಲೂ ವ್ಯಾಪಾರ ಧರ್ಮಯುದ್ಧ ನಡೆಯುತ್ತಿರೋದು ಮಾತ್ರ ವಿಪರ್ಯಾಸ. ವಿಜಯಪುರದ ಅಜ್ಜನ ಜಾತ್ರೆಯಲ್ಲಿ ಹಿಂದೂ ಮುಸ್ಲಿಂರು ಸೌಹಾರ್ದತೆ ಮೆರೆಯುವ ಮೂಲಕ ವ್ಯಾಪಾರ ಧರ್ಮಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಇತ್ತ ಬಸವನ ಬಾಗೇವಾಡಿಯ ಜಾಯವಾಡಗಿ ಗ್ರಾಮದೇವರ ಜಾತ್ರೆಯಲ್ಲಿ ಮುಸ್ಲಿಂ ಮಹಿಳೆಯರು ದೀರ್ಘದಂಡ ನಮಸ್ಕಾರ ಹಾಕಿ ಸೌಹಾರ್ತೆಗೆ ಸಾಕ್ಷಿಯಾಗಿದ್ದಾರೆ..

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ