ಲಾಕ್‌ಡೌನ್‌: SSLC ಮಕ್ಕಳಿಗೆ ಮನೋಸ್ಥೈರ್ಯ ತುಂಬಲು ಫೋನ್‌ ಇನ್‌ ಕಾರ್ಯಕ್ರಮ

By Kannadaprabha News  |  First Published May 3, 2020, 8:39 AM IST

2019-20ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಮುಂದೂಡಿಕೆ| ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಮನೋಸ್ಥೈರ್ಯ ತುಂಬುವ ದೃಷ್ಟಿಯಿಂದ ಫೋನ್‌ ಇನ್‌ ಕಾರ್ಯಕ್ರಮ| ಮೇ 4ರಿಂದ 9ರ ವರೆಗೆ ಫೋನ್‌ಇನ್‌ ನೇರ ಕಾರ್ಯಕ್ರಮ|


ಹಾವೇರಿ(ಮೇ.03): ಕೊರೋನಾ ವೈರಸ್‌ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ 2019-20ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಮುಂದೂಡಲಾಗಿದೆ. 

ಈ ವೇಳೆ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಮನೋಸ್ಥೈರ್ಯ ತುಂಬುವ ದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನುರಿತ ವಿಷಯವಾರು ಸಂಪನ್ಮೂಲ ಶಿಕ್ಷಕರಿಂದ ನೇರವಾಗಿ ಮಕ್ಕಳು ತಮ್ಮ ಶೈಕ್ಷಣಿಕ ಸಮಸ್ಯೆಗಳನ್ನು ದೂರವಾಣಿ ಮೂಲಕ ಕರೆ ಮಾಡಿ ಪರಿಹಾರ ಕಂಡುಕೊಳ್ಳಲು ಮೇ 4ರಿಂದ 9ರ ವರೆಗೆ ಫೋನ್‌ಇನ್‌ ನೇರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಇಒ ಎಂ.ಎಚ್‌. ಪಾಟೀಲ ತಿಳಿಸಿದ್ದಾರೆ.

Tap to resize

Latest Videos

ಪ್ರತಿ ದಿನ ಬೆಳಗ್ಗೆ 10.30ರಿಂದ 1ರ ವರೆಗೆ ಮಕ್ಕಳು ನೇರವಾಗಿ ಸಂಪನ್ಮೂಲ ಶಿಕ್ಷಕರಿಗೆ ಕರೆ ಮಾಡಿ ಕ್ಲಿಷ್ಟವಿಷಯಗಳನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳುವಂತೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಪಾಲಕರು ಮತ್ತು ಆಯಾ ಶಾಲೆಯ ಶಿಕ್ಷಕರು ಫೋನ್‌ಇನ್‌ ನೇರ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಭಾಗವಹಿಸುವಂತೆ ಮಾಡಿ ಪರೀಕ್ಷಾ ತಯಾರಿಯಲ್ಲಿ ಯಾವುದೇ ಭಯವಿಲ್ಲದೇ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಈ ಮೂಲಕ ಕೋರಲಾಗಿದೆ.

ಮತ್ತಷ್ಟು ವಿನಾಯಿತಿ: ವಾಣಿಜ್ಯ ಚಟುವಟಿಕೆ ಆರಂಭ

ಪ್ರಥಮ ಭಾಷೆ:

ಕನ್ನಡ ಮಾಧ್ಯಮಕ್ಕೆ ಚಿದಾನಂದ ಜಡಿಮಠ-9535567938, ಎಸ್‌.ಕೆ. ಜವಾಯಿ- 9008731001, ಮಲ್ಯನಾಯಕ್‌- 9731712102, ಆಂಗ್ಲ ಮಾಧ್ಯಮಕ್ಕೆ ವಾಸುದೇವ ಹತ್ತಿಮತ್ತೂರ- 9845766108, ಜ್ಯೋತಿ ರಾಶಿಂಕರ- 8095697811, ಉರ್ದು ಮಾಧ್ಯಮಕ್ಕೆ ಎಂ.ಎ. ಡಾಂಗೆ- 9964173787, ಫಾತೀಮಾ ಬಾಗಬಾನ- 8073450606 ಸಂಪರ್ಕಿಸಬಹುದು.

ದ್ವಿತೀಯ ಭಾಷೆ:

ಕನ್ನಡ ವಿಷಯಕ್ಕೆ ಕುಮಾರ ಕಾಳೆ-9900778587, ಎಫ್‌.ಬಿ. ಮರಡೂರ- 9964192647, ಹನುಮಂತಪ್ಪ ಜಿ- 9611135225, ಆಂಗ್ಲ ವಿಷಯಕ್ಕೆ ಅಶ್ವಿನಿ- 9986959528, ಶಿವಾನಂದ ಹಂಜಿ-9901036946, ಉರ್ದು ವಿಷಯಕ್ಕೆ ಎಂ.ಕೆ. ಮಕರಿ- 9611770945, ಬಿ.ಎಫ್‌. ಕಟ್ಟಿಮನಿ- 9916061664 ಸಂಪರ್ಕಿಸಬಹುದು.

ತೃತೀಯ ಭಾಷೆ:

ಕನ್ನಡ ಮಾಧ್ಯಮಕ್ಕೆ ಬಿ.ಟಿ. ಕೊರಗರ- 9353146721, ಗೀತಾ ಕಡಕೋಳ- 9480370600, ಜಿ.ಕೆ. ಜವಳಿ- 9986182696, ಆಂಗ್ಲ ವಿಷಯಕ್ಕೆ ಪರಮೇಶ- 7338360900, ವೀಣಾ- 8951204822, ಉರ್ದು ವಿಷಯಕ್ಕೆ ನಡವಿನಮಠ- 9449120420 ಹಾಗೂ ಎ.ಸಿ. ಸಂಕಣ್ಣನವರ- 9449831965 ಸಂಪರ್ಕಿಸಬಹುದು.

ಗಣಿತ:

ಕನ್ನಡ ಮಾಧ್ಯಮಕ್ಕೆ ಓಂಪ್ರಕಾಶ ಯತ್ತಿನಹಳ್ಳಿ-9449513641, ಜಿ.ಎಸ್‌. ಹತ್ತಿಮತ್ತೂರ- 8884040725, ದಳವಾಯಿ- 9481861806, ಆಂಗ್ಲ ಮಾಧ್ಯಮಕ್ಕೆ ಸುಜಾತಾ-7975742757, ವಿಜಯ ಪಾಟೀಲ್‌- 8123841708, ಉರ್ದು ಮಾಧ್ಯಮಕ್ಕೆ ಆರ್‌.ಎ. ಖಾನ್‌- 8884567121 ಹಾಗೂ ಆಸ್ಮಾ ಬಡೆಬಡೆ-8970806217 ಸಂಪರ್ಕಿಸಬಹುದು.

ವಿಜ್ಞಾನ:

ಕನ್ನಡ ಮಾಧ್ಯಮಕ್ಕೆ ವಿ.ಗಡ್ಡದೇವರಮಠ-9901118966, ಬಿ.ಎಂ. ಮಮದಾಪೂರ-8310263210, ಎಸ್‌.ಜಿ. ಅಡವಿ-9741762600, ಆಂಗ್ಲ ಮಾಧ್ಯಮಕ್ಕೆ ಪ್ರಕಾಶ ಕುಲಕರ್ಣಿ-8904371002, ದೇಶಪಾಂಡೆ- 9945113823, ಉರ್ದು ಮಾಧ್ಯಮಕ್ಕೆ ಹಂಚಿನಮನಿ-9901130412 ಸಂಪರ್ಕಿಸಬಹುದು.

ಸಮಾಜ ವಿಜ್ಞಾನ:

ಕನ್ನಡ ಮಾಧ್ಯಮಕ್ಕೆ ಚಿಕಮಠ-9980115606, ಎಸ್‌.ಸಿ. ಮರಳಹಳ್ಳಿ-9886525791, ಎಸ್‌.ಐ. ಬಾಗೋಡಿ-9742284909, ಆಂಗ್ಲ ಮಾಧ್ಯಮಕ್ಕೆ ಗೋವಿಂದ ಕಡಕೋಳ-9164917820, ರಾಘು ಮುಂಗೋಡ-9916693033, ಉರ್ದು ಮಾಧ್ಯಮಕ್ಕೆ ಇಲಿಯಾಸಖಾನ್‌- 8884940003 ಹಾಗೂ ಇಸ್ಮಾಯಿಲ್‌ ತರಫದಾರ-9844154660 ಅವರನ್ನು ಸಂಪರ್ಕಿಸಬಹುದು.
 

click me!