ಆರೋಗ್ಯಸೇತು ಆ್ಯಪ್‌ ತಪ್ಪು ಮಾಹಿತಿ: ಕೊರೋನಾ ಪಾಸಿಟಿವ್‌ ಆತಂಕ!

Kannadaprabha News   | Asianet News
Published : May 03, 2020, 08:38 AM ISTUpdated : May 03, 2020, 08:48 AM IST
ಆರೋಗ್ಯಸೇತು ಆ್ಯಪ್‌ ತಪ್ಪು ಮಾಹಿತಿ: ಕೊರೋನಾ ಪಾಸಿಟಿವ್‌ ಆತಂಕ!

ಸಾರಾಂಶ

ಬೆಳಗಾವಿಯಿಂದ ಇಲ್ಲಿಗೆ ಬಂದ ವ್ಯಕ್ತಿಯೊಬ್ಬನಿಗೆ ಸರ್ಕಾರದ ಆರೋಗ್ಯಸೇತು ಆ್ಯಪ್‌ಲ್ಲಿ ಕೊವಿಡ್‌ ಪಾಸಿಟಿವ್‌ ಎಂಬ ಸುಳ್ಳು ಸಂದೇಶ ಬಂದು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.  

ಬೈಂದೂರು(ಮೇ.03): ಬೆಳಗಾವಿಯಿಂದ ಇಲ್ಲಿಗೆ ಬಂದ ವ್ಯಕ್ತಿಯೊಬ್ಬನಿಗೆ ಸರ್ಕಾರದ ಆರೋಗ್ಯಸೇತು ಆ್ಯಪ್‌ಲ್ಲಿ ಕೊವಿಡ್‌ ಪಾಸಿಟಿವ್‌ ಎಂಬ ಸುಳ್ಳು ಸಂದೇಶ ಬಂದು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

ಅವರು ಬೆಳಗಾವಿಯಲ್ಲಿ ಗಂಟಲದ್ರವದ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್‌ ಬಂದಿತ್ತು. ನಂತರ ತನ್ನ ಊರಾದ ಬೈಂದೂರಿಗೆ ಬಂದಿದ್ದರು. ಆಗ ಅವರ ಆರೋಗ್ಯ ಸೇತು ಆ್ಯಪಲ್ಲಿ ಅವರಿಗೆ ಪಾಸಿಟಿವ್‌ ಎಂಬ ಸಂದೇಶ ಬಂತು. ಇದರಿಂದ ಅವರು ಮಾತ್ರವಲ್ಲದೇ ಬೈಂದೂರಿನ ಜನರೂ ಆತಂಕಕ್ಕೆ ಒಳಗಾದರು.

ಫುಡ್ ಡೆಲಿವರಿ ಎಂದು ಗ್ಯಾರೇಜ್ ಕೆಲಸ: ಕುವೈಟ್‌ನಲ್ಲಿ ಕೆಲಸವಿಲ್ಲದೆ ಕರಾವಳಿ ಯುವಕರ ಗೋಳು

ತಕ್ಷಣ ಬೈಂದೂರು ತಾಲೂಕು ಆಸ್ಪತ್ರೆಗೆ ಹೋಗಿ ಮಾಹಿತಿ ನೀಡಿದಾಗÜ, ಅಲ್ಲಿನ ಅಧಿಕಾರಿಗಳು ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ವಿಚಾರಿಸಿದ್ದು, ವರದಿ ನೆಗೆಟಿವ್‌ ಬಂದಿದೆ ಎಂದು ಖಚಿತಪಡಿಸಿದರು. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಅವರ ಗಂಟಲ ದ್ರವವನ್ನು ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ.

PREV
click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ: ಇಂದು ಕಲಾಪ ಮುಂದೂಡುವ ಸಾಧ್ಯತೆ
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!