ವಿಜಯಪುರಕ್ಕೂ ಪೇಜಾವರ ಶ್ರೀಗಳಿಗೂ ಅವಿನಾಭಾವ ಸಂಬಂಧ

By Suvarna NewsFirst Published Dec 29, 2019, 10:31 AM IST
Highlights

ಉಡುಪಿ ಪೇಜಾವರ ಶ್ರೀಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ| ಶ್ರೀಗಳ ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದ ವಿಜಯಪುರದ ಭಕ್ತವೃಂದ| ಆಗಾಗ ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದ ಸ್ವಾಮೀಜಿಗಳು| 2018 ಡಿಸೆಂಬರ್‌ನಲ್ಲಿ ಕಗ್ಗೊಡದಲ್ಲಿ ನಡೆದಿದ್ದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ್ದ ಶ್ರೀಗಳು|

ವಿಜಯಪುರ (ಡಿ.29): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿ ಪೇಜಾವರ ಶ್ರೀಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಇಂದು(ಭಾನುವಾರ) ಅಸ್ತಂಗತರಾಗಿದ್ದಾರೆ. ಶ್ರೀಗಳ ಅಗಲಿಕೆಯಿಂದ ವಿಜಯಪುರದ ಭಕ್ತರೂ ಕೂಡ ಶೋಕಸಾಗರದಲ್ಲಿ ಮುಳುಗಿದ್ದಾರೆ.

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ

ವಿಜಯಪುರಕ್ಕೂ ಪೇಜಾವರ ಶ್ರೀಗಳಿಗೂ ಅವಿನಾಭಾವ ಸಂಬಂಧ

ಉಡುಪಿ ಪೇಜಾವರ ಶ್ರೀಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಆಗಾಗ ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದರು. ಜಿಲ್ಲೆಯಾದ್ಯಂತ ಶ್ರೀಗಳಿಗೆ ಅಪಾರ ಭಕ್ತಗಣವನ್ನು ಹೊಂದಿದ್ದಾರೆ. 2018 ಡಿಸೆಂಬರ್ ಕೊನೆಯ ವಾರದಲ್ಲಿ ವಿಜಯಪುರ ತಾಲೂಕಿನ ಕಗ್ಗೊಡದಲ್ಲಿ ನಡೆದಿದ್ದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಶ್ರೀಗಳು ಭಾಗವಹಿಸಿದ್ದರು. 

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

ಕಳೆದ‌ ಎರಡು ತಿಂಗಳ ಹಿಂದೆ ಶ್ರೀಗಳು ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಆಗಮಿಸಿ ಬಳಿಕ ಬಾಗಲಕೋಟೆ ಜಿಲ್ಲೆಗೆ ತೆರಳಿದ್ದರು. 

ಪೇಜಾವರ ಶ್ರೀಗಳಿಗೂ ಹಾಗೂ ವಿಜಯಪುರಕ್ಕೂ ಇದ್ದ ಅವಿನಾಭಾವ ಸಂಬಂಧವನ್ನು ಹಿರಿಯ ಪತ್ರಕರ್ತ ಗೋಪಾಲ ನಾಯಕ್ ಅವರು ಬಿಚ್ಚಿಟ್ಟಿದ್ದಾರೆ. 1964ರಲ್ಲಿ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಶ್ರೀಗಳು ಆಗಮಿಸಿದ್ದರು. ಈ ವೇಳೆ ಅಂದಿನ ಹಿರಿಯ ಪತ್ರಕರ್ತ ಪಿ ಬಿ ನಾಯಕ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಬಳಿಕ 1972ರಲ್ಲಿ ವಿಜಯಪುರದಲ್ಲಿ ಭೀಕರ ಬರಗಾಲ ಆವರಿಸಿತ್ತು. ಆ ಸಮಯದಲ್ಲಿ ಪೇಜಾವರ ಶ್ರೀಗಳು ಸಿಂದಗಿಯಲ್ಲಿ ಗಂಜಿಕೇಂದ್ರ ಆರಂಭಿಸಿದ್ದರು. 
ಬಳಿಕ 1974ರಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಿಜಯಪುರದಲ್ಲಿ ವಿದ್ಯಾರ್ಥಿ ನಿಲಯವೊಂದನ್ನು ಆರಂಭಿಸಿದ್ದರು. ಇಂದಿಗೂ ಕೂಡ ಆ ವಿದ್ಯಾರ್ಥಿ ನಿಲಯ 50 ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. 1994ರಲ್ಲಿ ಭೂಕಂಪ ಸಂಭವಿಸಿದ್ದ ವೇಳೆ ಇಂಡಿ ತಾಲೂಕಿನ ಗೋವಿಂದಪುರದಲ್ಲಿ ನೆಲಸಮವಾಗಿದ್ದ 35 ಮನೆಗಳನ್ನು ಶ್ರೀಗಳು ನಿರ್ಮಾಣ ಮಾಡಿಸಿದ್ದರು.  2008ರಲ್ಲಿ ವಿಜಯಪುರದಲ್ಲಿ ಕೃಷ್ಣಮಠವನ್ನು ಶ್ರೀಗಳು ನಿರ್ಮಿಸಿದ್ದರು. ಪೇಜಾವರ ಶ್ರೀಗಳು 75ನೇ ಚಾತುರ್ಮಾಸವನ್ನು ವಿಜಯಪುರದಲ್ಲೇ ಕಳೆದಿದ್ದರು. 

ಶ್ರೀಗಳ ಅಗಲಿಕೆಗೆ ಹಿರಿಯ ಪತ್ರಕರ್ತ ಗೋಪಾಲ‌ ನಾಯಕ್ ಹಾಗೂ ಸಮಾಜದ ಗಣ್ಯರಿಂದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

click me!