ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬಾಂಬ್ ದಾಳಿ

By Web Desk  |  First Published Feb 17, 2019, 3:53 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ.


ಚಿಕ್ಕಮಗಳೂರು, (ಫೆ.17): ಜಿಲ್ಲೆಯ ಕುದುರೆಮುಖದ ಬಸರೀಕಲ್ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದ ಘಟನೆ ನಡೆದಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬಸರೀಕಲ್ ಚೆಕ್​​ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿ ಕುಳಿತುಕೊಳ್ಳುತ್ತಿದ್ದರು.  ಈ ವೇಳೆ ಖಾಲಿ ಬಾಟಲಿಗೆ ಮರಳು ಮತ್ತು ಸೀಮೆ ಎಣ್ಣೆ ತುಂಬಿ ಬೆಂಕಿ ಹಚ್ಚಿ ಚೆಕ್​ಪೋಸ್ಟ್​ ಬಳಿ ಎಸೆದಿದ್ದಾರೆ. 

Tap to resize

Latest Videos

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಆದ್ರೆ ಅಲ್ಲೇ ಇದ್ದ ರಿಜಿಸ್ಟರ್​ ಪುಸ್ತಕಗಳು ಭಸ್ಮವಾಗಿವೆ.  ಇದು ನಕ್ಸಲರ ಕೃತ್ಯ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

click me!