ಸಿದ್ಧಗಂಗಾ ಶ್ರೀ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ

Published : Jan 22, 2019, 12:28 PM IST
ಸಿದ್ಧಗಂಗಾ ಶ್ರೀ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ

ಸಾರಾಂಶ

ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ಅವರ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರು :  ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದು, ಅವರ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ ಸಂಭವಿಸಿದೋರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ. 

ತುಮಕೂರಿನಿಂದ ತೆರಳುತ್ತಿದ್ದ ವೇಳೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿಯಲ್ಲಿ ಮರಕ್ಕೆ ಬೊಲೆರೋ ಕಾರು ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಈ ವೇಳೆ ಪರಮೇಶ್ವರಪ್ಪ (40) ಎಂಬ ವ್ಯಕ್ತಿ ಸಾವಿಗೀಡಾಗಿದ್ದಾರೆ. 

ಗಾಯಾಳುಗಳನ್ನು ಕಡೂರು ಆಸ್ಪತ್ರೆಗೆ‌ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.  ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.

PREV
click me!

Recommended Stories

ಸಾಧನಾ ಸಮಾವೇಶಕ್ಕೂ‌ ಮೊದಲು ಕಾಂಗ್ರೆಸ್ ಸರ್ಕಾರದ ಸಾಧನೆ ಸ್ಪಷ್ಟಪಡಿಸಲಿ: ಸಿ.ಟಿ.ರವಿ ಪ್ರಶ್ನೆ
ಜಾತಿ ವ್ಯವಸ್ಥೆ ನಿರ್ಮೂಲನೆಯಾದರೆ ದೇಶ ಸುಭದ್ರ: ಛಲವಾದಿ ನಾರಾಯಣಸ್ವಾಮಿ