ನಟ ಕಿಚ್ಚ ಸುದೀಪ್‌ಗೆ ಕೋರ್ಟ್ ಸಮನ್ಸ್ , ಯಾವ ಪ್ರಕರಣ?

ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ವಿರುದ್ಧ ಚಿಕ್ಕಮಗಳೂರಿನ 2ನೇ ಜೆಎಂಎಫ್​ಸಿ ಕೋರ್ಟ್​ ಸಮನ್ಸ್ ಜಾರಿ ಮಾಡಿದೆ. ಯಾವ ಕಾರಣಕ್ಕೆ ಸಮನ್ಸ್ ನೀಡಲಾಗಿದೆ?


ಚಿಕ್ಕಮಗಳೂರು[ಫೆ.05] ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗಿದ್ದ ಕಾಫಿ ತೋಟದ ಬಾಡಿಗೆಯನ್ನು ಪಾವತಿಸಿಲ್ಲ ಹಾಗೂ ತೋಟವನ್ನು ಹಾಳು ಮಾಡಿದ್ದಾರೆ ಎಂಬ ಆರೋಪದ ಆಧಾರದಲ್ಲಿ  ನಟ, ನಿರ್ಮಾಪಕ ಕಿಚ್ಚ ಸುದೀಪ್​ ಅವರಿಗೆ ಚಿಕ್ಕಮಗಳೂರಿನ 2ನೇ ಜೆಎಂಎಫ್​ಸಿ ಕೋರ್ಟ್​ ಸಮನ್ಸ್ ಜಾರಿ ಮಾಡಿದೆ.

ವಾರಸ್ದಾರ ಧಾರಾವಾಹಿಯ ನಿರ್ಮಾಪಕ ಸುದೀಪ್ ಹಾಗೂ ಕಾರ್ಯಕಾರಿ ನಿರ್ಮಾಪಕ ಮಹೇಶ್​ಗೆ ಸಮನ್ಸ್ ನೀಡಲಾಗಿದೆ. ಮಾ.26ರಂದು ಕೋರ್ಟ್​ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ನಟ ಸುದೀಪ್ ವಿರುದ್ಧ ದೀಪಕ್ ಮಯೂರ್ ಎಂಬುವರು ದೂರು ದಾಖಲಿಸಿದ್ದರು.  95 ಲಕ್ಷ ಬೆಲೆ ಬಾಳುವ ಕಾಫಿ ತೋಟ ಹಾಳು ಮಾಡಿರುವುದಾಗಿ ಆರೋಪ ಹೊರಿಸಲಾಗಿದೆ. 

Latest Videos

ನವೆಂಬರ್ 2016 ರಂದು ಬೈಗೂರಿನಲ್ಲಿ ನಡೆದಿದ್ದ ಚಿತ್ರೀಕರಣ ನಡೆದಿತ್ತು. ಸಮನ್ಸ್ ಜಾರಿ ಆಗಿರುವ ಬಗ್ಗೆ ದೂರುದಾರರ ಪರ ವಕೀಲ ಸುರೇಶ್ ಮಾಹಿತಿ ನೀಡಿದ್ದಾರೆ.

click me!