ಮದ್ಯದಾಸರಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್, ಕುಟುಂಬಸ್ಥರೇ ಎಚ್ಚರ!

By Suvarna NewsFirst Published Mar 11, 2020, 8:48 PM IST
Highlights

ಮದ್ಯಪಾನದ ದಾಸರನ್ನು ಹೇಗೆ ಬೇಕೋ ಹಾಗೆ ಡಿ ಅಡಿಕ್ಷನ್ ಸೆಂಟರ್ ನಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ/ ಹೈಕೋರ್ಟ್ ನಿಂದ ಮಹತ್ವದ ತೀರ್ಮಾನ/ ವ್ಯಕ್ತಿಯೊಬ್ಬರ ಕುರಿತ ಪ್ರಕರಣ ವಿಚಾರಣೆ ವೇಳೆ ಅಭಿಪ್ರಾಯ

ಬೆಂಗಳೂರು(ಮಾ. 11)  ಒತ್ತಾಯ ಪೂರ್ವಕವಾಗಿ ಡಿಅಡಿಕ್ಷನ್ ಸೆಂಟರ್ ನಲ್ಲಿದ್ದ ವ್ಯಕ್ತಿ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದೆ.  ಮದ್ಯಪಾನ ಚಟ ಬಿಡಿಸಲು ಡಿ ಅಡಿಕ್ಷನ್ ಸೆಂಟರ್ ಗೆ ಕುಟುಂಬಸ್ಥರು ಸೇರಿಸಿದ್ದರು.

ಕಳೆದ ಐದು ತಿಂಗಳಿಂದ ಡಿಅಡಿಕ್ಷನ್ ಸೆಂಟರ್ ನಲ್ಲಿದ್ದ ವ್ಯಕ್ತಿ ಇದ್ದರು. ಒತ್ತಾಯಪೂರ್ವಕವಾಗಿ ಸೇರಿಸಿದ್ದು ಬಿಡುಗಡೆಗೆ ಆದೇಶಿವಂತೆ ಸಂಬಂಧಿಯೊಬ್ಬರು ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ರವಿ ಎಂಬುವರನ್ನು ಡಿ ಅಡಿಕ್ಷನ್ ಸೆಂಟರ್ ನಲ್ಲಿ ಇಟ್ಟುಕೊಳ್ಳಲಾಗಿತ್ತು. ರವಿಯ ತಾಯಿ ಸಂಬಂಧಿ ಸಚಿನ್ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು.

ಇದು ಸಿನಿಮಾ ದೃಶ್ಯ ಅಲ್ಲ... ಮಚ್ ಹಿಡಿದು ಬಂದ ಮಾದೇಶ

ಮದ್ಯಪಾನ ಚಟ ಬಿಡಿಸಲು ಡಿಅಡಿಕ್ಷನ್ ಸೆಂಟರ್ ಗೆ ರವಿಯನ್ನು ಆತನ ಅಕ್ಕ ಸೇರಿಸಿದ್ದರು. ಕಳೆದ 235 ದಿನಗಳಿಂದ ನಗರದ 4S ಡಿಅಡಿಕ್ಷನ್ ಸೆಂಟರ್ ನಲ್ಲಿದ್ದ ರವಿ ಈಗ ಬಿಡುಗಡೆ ಹೊಂದಿದ್ದಾರೆ.

ಈ ಪ್ರಕರವನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿತು. ಒತ್ತಾಯಪೂರ್ವಕವಾಗಿ ವ್ಯಕ್ತಿಯನ್ನು ಕೂಡಿಹಾಕುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕೂಡಲೇ ವ್ಯಕ್ತಿ ಬಿಡುಗಡೆ ಮಾಡುವಂತೆ ಡಿಅಡಿಕ್ಷನ್ ಸೆಂಟರ್ ಸೂಚನೆ ನೀಡಿತು. 

ಪ್ರಕರಣದ ವಿಚಾರಣೆ ವೇಳೆ  ವ್ಯಕ್ತಿ ಕೋರ್ಟ್ ನಲ್ಲಿ ಹಾಜರಿದ್ದರು. ಮತ್ತೆ ಡಿ ಅಡಿಕ್ಷನ್ ಸೆಂಟರ್ ಹೋಗಲು ಒಪ್ಪದ ಹಿನ್ನಲೆ ಬಿಡುಗಡೆಗೆ ಆದೇಶ ನೀಡಲಾಯಿತು. ನ್ಯಾಯಮೂರ್ತಿ ಸತ್ಯನಾರಾಯಣ ಆದೇಶ ನೀಡಿದರು.

 ಡಿ ಅಡಿಕ್ಷನ್ ಸೆಂಟರ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ನಗರದಲ್ಲಿ ಎಷ್ಟು ಡಿ ಅಡಿಕ್ಷನ್ ಸೆಂಟರ್ ಇವೆ?  ಡಿಅಡಿಕ್ಷನ್ ಸೆಂಟರ್ ಗಳಲ್ಲಿ ಎಷ್ಟು ಜನ ಇದ್ದಾರೆ?  ಯಾವ್ಯಾವ ಚಟುವಟಿಕೆಗಳನ್ನು ಆ ಸೆಂಟರ್ ಗಳು ನಡೆಸುತ್ತಿವೆ?  ಎಂದು ಪ್ರಶ್ನೆ ಮಾಡಿದ ನ್ಯಾಯಾಲಯ ನಗರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತು.

click me!