ಗುಡಿಸಲು ಕಟ್ಟುವ ವಿವಾದಕ್ಕೆ ಓರ್ವನ ಕೊಲೆ| ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಖಾದ್ಯಾಪೂರ ಗ್ರಾಮದಲ್ಲಿ ನಡೆದ ಘಟನೆ| ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ| ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಜೇವರ್ಗಿ(ಮೇ.18): ತಾಲೂಕಿನ ಖಾದ್ಯಾಪೂರ ಗ್ರಾಮದ ಸೀಮಾಂತರದಲ್ಲಿ ಕುರಿಗಾಹಿಗಳ ನಡುವೆ ಗುಡಿಸಲು ಕಟ್ಟುವ ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರಿಬ್ಬರ ನಡುವೆ ಜಗಳ ತಾರಕಕ್ಕೇರಿ ಕುರಿಗಾಹಿಯೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಮೈಲಾರಪ್ಪ ತಂದೆ ಮರೆಪ್ಪ ಜಾನಕರ್ (40) ಎಂದು ಗುರುತಿಸಲಾಗಿದೆ. ಮೃತ ಮೈಲಾರಪ್ಪ ಮೂಲತಃ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದವರು. ಕುರಿ ಮೇಯಿಸಲು ಖಾದ್ಯಾಪುರ ಗ್ರಾಮದ ಸೀಮಾಂತರದಲ್ಲಿ ಬೀಡು ಬಿಟ್ಟಿದ್ದರು. ಕೊಲೆಗೈದ ಆರೋಪಿ ಮೃತ ವ್ಯಕ್ತಿ ಮೈಲಾರಪ್ಪನ ಸಂಬಂಧಿಯಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಶಿವಮೊಗ್ಗ: ದೇವಾಲಯದ ಹಿಂದೆ ಚೆಲ್ಲಿದ ರಕ್ತ, ಕೊಲೆಯಾಗಿಹೋದ ಸುರೇಶ
ಮೃತ ಕುರಿಗಾಹಿ ಮೈಲಾರಪ್ಪನ ಪತ್ನಿ ಭಾಗಮ್ಮ ನೀಡಿದ ದೂರಿನನ್ವಯ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಜೇವರ್ಗಿ ಪೊಲೀಸ್ ಮೂಲಗಳು ತಿಳಿಸಿವೆ.