ಸತತ ಗ್ರೀನ್‌ಝೋನ್‌ ಹಣೆಪಟ್ಟಿ ಕಾಯ್ದುಕೊಳ್ಳುತ್ತಾ ಜಿಲ್ಲೆ?

By Kannadaprabha News  |  First Published May 18, 2020, 10:54 AM IST

ಗ್ರೀನ್‌ ಝೋನ್‌ನಲ್ಲಿರುವ ಚಿಕ್ಕಮಗಳೂರಿಗೆ ಮತ್ತೊಂದು ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದ್ದು 1147 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿಯ ನೆಗೆಟಿವ್ ಬಂದಿದೆ. ಈ ಮೂಲಕ ಗ್ರೀನ್ ಝೋನ್ ಪಟ್ಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಫಿನಾಡು ದಿಟ್ಟ ಹೆಜ್ಜೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಚಿಕ್ಕಮಗಳೂರು(ಮೇ.18): ಕೊರೋನಾ ವೈರಸ್‌ ನಿಯಂತ್ರಣದ ಹಿನ್ನೆಲೆಯಲ್ಲಿ ಮಾರ್ಚ್ 25ರಿಂದ ಈವರೆಗೆ ಜಿಲ್ಲೆಯಲ್ಲಿ 1513 ಮಂದಿಗಳ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 1147 ಮಂದಿಗಳ ವರದಿ ನೆಗೆಟಿವ್‌ ಬಂದಿದೆ. ಇನ್ನುಳಿದ 366 ಮಂದಿಗಳ ಗಂಟಲ ದ್ರವ ಪರೀಕ್ಷೆಯ ವರದಿ ಬರಬೇಕಾಗಿದೆ. ಎಲ್ಲವೂ ಕೂಡಾ ನೆಗೆಟಿವ್‌ ವರದಿ ಬರುವ ಆಶಾಭಾವನೆಯನ್ನು ಜಿಲ್ಲಾಡಳಿತ ಹೊಂದಿದೆ. ಜಿಲ್ಲೆಯ ಜನರು ಇದೇ ನಿಟ್ಟಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಪ್ರಥಮದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ 270 ಮಂದಿಗಳ ಮೇಲೆ ನಿಗಾ ಇಡಲಾಗಿತ್ತು. ಅವರೆಲ್ಲರೂ 28 ದಿನಗಳನ್ನು ಪೂರೈಸಿ ಸಾಮಾನ್ಯ ಜನರಂತೆ ಇದ್ದಾರೆ. 260 ಮಂದಿ ಹೋಂ ಕ್ವಾರೆಂಟೈನ್‌ ಪೂರೈಸಿದ್ದಾರೆ.

Tap to resize

Latest Videos

51 ಮಂದಿಯ ಮಾದರಿ ಸಂಗ್ರಹ:

ಜ್ವರ, ಗಂಟಲು ನೋವು, ಶೀತ, ತಲೆ ನೋವಿಗೆ ಚಿಕಿತ್ಸೆ ಪಡೆಯಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಬರುವವರ ಮಾಹಿತಿಯನ್ನು ಪೂರ್ಣ ವಿವರದೊಂದಿಗೆ ಎಲ್ಲ ಆಸ್ಪತ್ರೆಯಲ್ಲಿ ಸಂಗ್ರಹ ಮಾಡುತ್ತಿದೆ. ಶಂಕಿತ ವ್ಯಕ್ತಿಗಳ ಗಂಟಲ ಮಾದರಿ ದ್ರವ ಸಂಗ್ರಹ ಮಾಡಲಾಗುತ್ತಿದೆ. ಇದರ ಜತೆಗೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವವರನ್ನು ಕ್ವಾರೆಂಟೈನ್‌ ಕೇಂದ್ರದಲ್ಲಿ ಇರಿಸಿ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ. ಇವರುಗಳ ವರದಿ ನೆಗೆಟಿವ್‌ ಬಂದರೂ ಕೂಡ ಹೊರಗೆ ಬಿಡುವಂತ್ತಿಲ್ಲ, 14 ದಿನ ಕಡ್ಡಾಯವಾಗಿ ಕ್ವಾರೆಂಟೈನ್‌ನಲ್ಲಿ ಇರಲೇಬೇಕಾಗಿದೆ. ಭಾನುವಾರದಂದು 51 ಮಂದಿಯ ಗಂಟಲ ದ್ರವ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಇದೇ ದಿನ 122 ಜನರ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್‌ ಆಗಿದೆ. ಅಂದರೆ ಈವರೆಗೆ ಬಂದಿರುವ 1147 ವರದಿಯಲ್ಲಿ ಎಲ್ಲವೂ ನೆಗೆಟಿವ್‌ ಇರುವುದು ಸಮಧಾನಕರ.

ವರದಿಯಲ್ಲಿ ತಡ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಂಟಲ ದ್ರವ ಮಾದರಿ ಪರೀಕ್ಷಾ ಕೇಂದ್ರ ಇಲ್ಲ. ಇದಕ್ಕಾಗಿ ನೆರೆಯ ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಅವಲಂಬಿಸಲಾಗಿದೆ. ಸದ್ಯ ಹಾಸನದ ಪ್ರಾಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಆ ಜಿಲ್ಲೆಯಲ್ಲೂ ಪಾಜಿಟಿವ್‌ ಪ್ರಕರಣಗಳು ಕಂಡು ಬಂದಿದ್ದರಿಂದ ಸೋಂಕಿನ ಲಕ್ಷಣದ ಒಂದು ಅಂಶ ಕಂಡು ಬಂದ ಕೂಡಲೇ ಗಂಟಲ ದ್ರವ ಮಾದರಿ ಸಂಗ್ರಹ ಮಾಡಲಾಗುತ್ತಿದೆ. ಇದರಿಂದಾಗಿ ಪರೀಕ್ಷಾ ಸಂಖ್ಯೆ ಹೆಚ್ಚ ಳವಾಗುತ್ತಿದೆ.

ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಟ: ಸಂಬಳವಿಲ್ಲದೆ ನರ್ಸ್‌ಗಳ ಪರದಾಟ..!

ಗಂಟಲ ದ್ರವ ಮಾದರಿ ಪರೀಕ್ಷಾ ಕೇಂದ್ರ ತಮ್ಮ ಜಿಲ್ಲೆಯಲ್ಲಿದೆ. ಪಾಜಿಟಿವ್‌ ಪ್ರಕರಣಗಳು ಅಲ್ಲೇ ಜಾಸ್ತಿ ಇದ್ದರಿಂದ ಹಾಸನ ತನಗೆ ಮೊದಲ ಪ್ರಾಸಶ್ತ್ಯ ನೀಡುತ್ತಿದೆ. ಹಸಿರು ವಲಯದಲ್ಲಿರುವ ಚಿಕ್ಕಮಗಳೂರು ಜಿಲ್ಲೆಗೆ ಎರಡನೇ ಆದ್ಯತೆ ನೀಡಿದೆ. ಅದುದರಿಂದ ಇನ್ನು 366 ವರದಿಗಳು ಬರಬೇಕಾಗಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಪರೀಕ್ಷೆ ಮಾಡಲಾಗಿರುವ 1147 ಮಂದಿಗಳ ವರದಿ ನೆಗೆಟಿವ್‌ ಬಂದಿರುವುದು ಗಾಡ್‌ ಗಿಫ್ಟ್‌ ಎನ್ನುತ್ತಿದ್ದಾರೆ ಮಲೆನಾಡಿನ ಮಂದಿ.
 

click me!