ಹೆತ್ತ ತಾಯಿಯನ್ನು ಮೂರು ಕಿಮೀ ದೂರದಿಂದ ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ ಮಗ| ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದ ಘಟನೆ| ಚುಂಜಲಕೊಪ್ಪದ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ| ಬಹುತೇಕರು ಮೂರು ಕಿಮೀ ದೂರ ಇರುವ ಚಳಗೇರಾ ಆಸ್ಪತ್ರೆಗೆ ಕಾಲ್ನಡಿಯೇ ಬರಬೇಕಿದೆ|
ಕುಷ್ಟಗಿ(ಸೆ.04): ಚುಂಜಲಕೊಪ್ಪದ ಹನುಮಂತಪ್ಪ ದಾಸರ ಗುರುವಾರ ಹೆತ್ತ ತಾಯಿಯನ್ನು ಮೂರು ಕಿಮೀ ದೂರದಿಂದ ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಬಸ್, ಖಾಸಗಿ ವಾಹನ ಸೌಕರ್ಯವಿಲ್ಲದ ಕಾರಣ ತಳ್ಳು ಗಾಡಿಯಲ್ಲಿ ತಾಯಿಯನ್ನು ಕರೆ ತಂದು ಚಿಕಿತ್ಸೆ ಕೊಡಿಸಿ ಗಮನ ಸೆಳೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿ ಹನಮವ್ವ ಅವರನ್ನು ಸುಮಾರು ಮೂರು ಕಿಮೀ ದೂರದ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ತರುವ ತಳ್ಳುಗಾಡಿಯಲ್ಲಿ ಕರೆತರಬೇಕಾದ ಅನಿವಾರ್ಯತೆ ಉಂಟಾಗಿದೆ. ಯುವಕ ಹನಮಂತಪ್ಪ ದಾಸರ ಕುರಿ ಕಾಯುವ ಕಾಯಕ ಮಾಡುತ್ತಾರೆ.
undefined
ಕೋವಿಡ್ಗೆ ಪೊಲೀಸ್ ಬಲಿ, ವೈದ್ಯರ ಮೇಲೆ ಹಲ್ಲೆ, ಗಲಾಟೆ
ಈ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ. ಖಾಸಗಿ ವಾಹನಗಳ ಓಡಾಟವೂ ಅಷ್ಟಕ್ಕಷ್ಟೇ. ಹೀಗಾಗಿ, ಬಹುತೇಕರು ಮೂರು ಕಿಮೀ ದೂರ ಇರುವ ಚಳಗೇರಾ ಆಸ್ಪತ್ರೆಗೆ ಕಾಲ್ನಡಿಯೇ ಬರಬೇಕಿದೆ. ನಿತ್ಯ ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತ ಇಲ್ಲಿನ ಜನ ಕಾಲ ಕಳೆಯುವ ಪರಿಸ್ಥಿತಿ ಮಾತ್ರ ನಿಂತಿಲ್ಲ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.