ಕೂಡ್ಲಿಗಿ: ಮದುವೆ ಆಸೆ ತೋರಿಸಿ ಯುವತಿ ಮೇಲೆ ಒಂದು ವರ್ಷದಿಂದ ರೇಪ್‌

By Kannadaprabha News  |  First Published Sep 4, 2020, 12:52 PM IST

ಯುವತಿ ಅತ್ಯಾಚಾರವೆಸಗಿದ ಯುವಕ| ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಂಡಾವೊಂದರಲ್ಲಿ ನಡೆದ ಘಟನೆ| ಆರೋಪಿಯನ್ನ ಬಂಧಿಸಿದ ಪೊಲೀಸರು| 


ಕೂಡ್ಲಿಗಿ(ಸೆ.04): ಮದುವೆಯಾಗುವುದಾಗಿ ನಂಬಿಸಿ ಯುವತಿ ಅತ್ಯಾಚಾರವೆಸಗಿರುವ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಂಡಾವೊಂದರಲ್ಲಿ ಜರುಗಿದೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 

ಸಂತ್ರಸ್ತೆಯ ಯುವತಿಯ ತಂದೆ ತಾಯಿ ಇಬ್ಬರು ತೀರಿಕೊಂಡಿದ್ದು, ಸಂಬಂಧಿಕರ ಮನೆಯಲ್ಲಿ ಯುವತಿ ವಾಸವಾಗಿದ್ದಳು. ಅದೇ ತಾಂಡಾದ ಯುವಕ ರಾಜ ನಾಯ್ಕ(26) ಎಂಬ ಅರೋಪಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದೊಂದು ವರ್ಷದಿಂದ ನಿರಂತರವಾಗಿ ಅತ್ಯಚಾರವೆಸಗಿದ್ದಾನೆ. 

Tap to resize

Latest Videos

ಸರಿ​ಯಾದ ಚಿಕಿತ್ಸೆ ಸಿಗು​ತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಸೋಂಕಿತ ಸಾವು

ನೊಂದ ಯುವತಿ ತಾಲೂಕಿನ ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪಿಎಸ್‌ಐ ನಾಗರಾಜ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 

click me!