ಹಗ್ಗದಿಂದ ಎಳೆದು ತಂದು ಸೋಂಕಿತನ ಅಂತ್ಯಕ್ರಿಯೆ!

By Kannadaprabha News  |  First Published Aug 1, 2020, 9:54 AM IST

ಕೊರೋನಾದಿಂದ ಮೃತಪಟ್ಟ92 ವರ್ಷದ ವೃದ್ಧನ ಶವವನ್ನು ಗೌರವ ನೀಡದೆ ಹಗ್ಗದಿಂದ ಎಳೆದು ತಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿರುವ ಅಮಾನವೀಯತೆ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಗೋಕಾಕ(ಆ.01): ಕೊರೋನಾದಿಂದ ಮೃತಪಟ್ಟ92 ವರ್ಷದ ವೃದ್ಧನ ಶವವನ್ನು ಗೌರವ ನೀಡದೆ ಹಗ್ಗದಿಂದ ಎಳೆದು ತಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿರುವ ಅಮಾನವೀಯತೆ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ಮೃತ ದೇಹವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಹಗ್ಗದಿಂದ ಎಳೆದು ತಂದು ಅಂತ್ಯಕ್ರಿಯೆ ನಡೆಸಲಾಗಿದೆ. ಈ ಕಾರ್ಯದಲ್ಲಿ ಪಾಲ್ಗೊಂಡ ಗೋಕಾಕ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ತನೆ ಈಗ ಟೀಕೆಗೆ ಗುರಿಯಾಗಿದೆ.

Latest Videos

undefined

ಭ್ರಷ್ಟಾಚಾರ ಸುಳ್ಳಾದರೆ ನೇಣಿಗೇರಿಸಿ: ಡಿಕೆಶಿ

ಕೊರೋನಾ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ ಗೋಕಾಕ ಮೂಲದ 92 ವರ್ಷದ ವೃದ್ಧ ಬೆಳಗಾವಿ ಬಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವೃದ್ಧನ ಶವವನ್ನು ಬಿಮ್ಸ್‌ ಆಡಳಿತದವರು ಗೋಕಾಕ ನಗರಸಭೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸುಪರ್ದಿಗೆ ಒಪ್ಪಿಸಿದ್ದರು. ಗೋಕಾಕಗೆ ತಂದ ಅಧಿಕಾರಿಗಳು, ಅಂತ್ಯಕ್ರಿಯೆ ಸ್ಥಳಕ್ಕೆ ಮೃತದೇಹವನ್ನು ಹಗ್ಗದಿಂದ ಎಳೆದು ತಂದು ಅಂತ್ಯಕ್ರಿಯೆ ಮಾಡಿ ಎಡವಟ್ಟು ಮಾಡಿದ್ದಾರೆ.

click me!