ಬಂಗಾರ ಪ್ರಿಯರೇ ಎಚ್ಚರ: ಇವನು ಬಂದ್ರೆ ನಿಮಗೂ ಬೀಳುತ್ತೆ ಪಂಗನಾಮ!

By Kannadaprabha News  |  First Published Feb 8, 2020, 1:07 PM IST

ನಕಲಿ ಬಂಗಾರ ಮಾರಾಟ: ಆರೋಪಿ ಬಂಧನ|ಬಾಗಲಕೋಟೆ ಜಿಲ್ಲೆಯ ಮುಗಳಖೋಡ ಗ್ರಾಮದಲ್ಲಿ ನಡೆದ ಘಟನೆ|2 ಲಕ್ಷ 50 ಸಾವಿರ ಪಡೆದು ಬಂಗಾರ ಲೇಪನದ 205 ಖೊಟ್ಟಿ ನಾಣ್ಯದ ಚೀಲ ಕೊಟ್ಟಿದ್ದ ಆರೋಪಿ|


ಬಾಗಲಕೋಟೆ[ಫೆ.08]:  ನಕಲಿ ಬಂಗಾರ ತೋರಿಸಿ ಜನರಿಗೆ ಮೋಸ ಮಾಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಪೊಲೀಸರು ಶುಕ್ರವಾರ ಬಂಧನ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಗಳಖೋಡ ಗ್ರಾಮದಲ್ಲಿ ನಡೆದಿದೆ.

ಮುಧೋಳದ ಕೆ.ಪರಶುರಾಮ ಬಂಧಿತ ವ್ಯಕ್ತಿ. ತನಗೆ 17 ಲಕ್ಷ ಮೌಲ್ಯದ ಬಂಗಾರದ ನಿಧಿ ಸಿಕ್ಕಿದ್ದು, ಅರ್ಧ ರೇಟ್ ಗೆ ನೀಡೋದಾಗಿ ಹೇಳಿ ಮಾರಾಟ ಮಾಡುತ್ತಿದ್ದ. ಇದೇ ರೀತಿ ಮುಧೋಳ ನಾಯಿ ಮರಿ ಮಾರಾಟ ಮಾಡುತ್ತಿದ್ದ ಮಹಾಂತೇಶ ಎಂಬುವವರಿಗೆ 2 ಲಕ್ಷ 50 ಸಾವಿರ ಪಡೆದು ಬಂಗಾರ ಲೇಪನದ 205 ಖೊಟ್ಟಿ ನಾಣ್ಯದ ಚೀಲ ನೀಡಿ ಪರಾರಿಯಾಗಿದ್ದ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಾಂತೇಶ ಅವರು ಈ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗೆ ಬಲೆ ಬೀಸಿ ಶುಕ್ರವಾರ ಬಂಧನ ಮಾಡಿದ್ದಾರೆ. ಮುಧೋಳ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
 

click me!