ರೈತರಿಗೆ ಸಾಲದ ಬದಲಿಗೆ ಕ್ರೆಡಿಟ್‌ ಕಾರ್ಡ್‌ ವಿತರಣೆ

By Kannadaprabha NewsFirst Published Feb 8, 2020, 12:59 PM IST
Highlights

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ಒಂದು ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು (ಬೆಳೆಸಾಲ) ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.

ಮೈಸೂರು(ಫೆ.08): ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ಒಂದು ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು (ಬೆಳೆಸಾಲ) ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.

ಘೋರಕ್‌ ಪುರದಲ್ಲಿ ಫೆ. 24 ರಂದು ದೇಶದ ರೈತರಿಗೆ ಪ್ರಧಾ​ನಿ ಅರ್ಪಿಸಿದರು. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಒಂದು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಫೆ. 24 ರೊಳಗೆ ಒಂದು ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು (ಬೆಳೆಸಾಲ) ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.

ಅನಂತಕುಮಾರ್ ಹೆಗಡೆ ಪುಸ್ತಕ ಓದಲಿ: ಸಂಸದರಿಗೆ ನೂತನ ಮೇಯರ್ ಟಾಂಗ್

ಪಿಎಂ ಕಿಸಾನ್‌ ಯೋಜನೆಯಲ್ಲಿ ದೇಶಾದ್ಯಂತ 9.22 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 6.76 ಕೋಟಿ ಫಲಾನುಭವಿಗಳು ಕಿಸಾನ್‌ ಕ್ರಿಡಿಟ್‌ ಕಾರ್ಡ್‌ ಪಡೆದಿದ್ದು 2.47 ಕೋಟಿ ಫಲಾನುಭವಿಗಳು ಇದರ ಲಾಭ ಪಡೆಯಲು ಬಾಕಿ ಇದೆ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ವೆಂಕಟಾಚಲಪತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಮ್ಮ ಜಿಲ್ಲೆಯಲ್ಲಿ 2,04,099 ರೈತರು ಪಿಎಂ ಕಿಸಾನ ಯೋಜನೆಯಡಿ ನೋಂದಣಿ ಮಾಡಿದ್ದಾರೆ. ಇದರಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ (ಕೆಸಿಸಿ) ಪಡೆಯದ ರೈತರು ತಮ್ಮ ಸೇವಾ ವಲಯದ ಬ್ಯಾಂಕ್‌ ಶಾಖೆಯನ್ನು ಸಂಪರ್ಕಿಸಿ ಬೆಳೆಸಾಲ ಪಡೆಯಬಹುದು. ಜಿಲ್ಲೆಯ ಎಲ್ಲಾ ಬ್ಯಾಂಕ್‌ ಶಾಖಾ ವ್ಯವಸ್ಥಾಪಕರು ಪಿಎಂ ಕಿಸಾನ್‌ ಫಲಾನುಭವಿಗಳಿಗೆ ನಿಯಮಾನುಸಾರ ಆದ್ಯತೆ ಮೇರೆಗೆ ಬೆಳೆಸಾಲ (ಕೆಸಿಸಿ) ವಿತರಿಸಿ ಕೇಂದ್ರ ಸರ್ಕಾರ ಫೆ. 24 ರವರೆಗೆ ನಿಗದಿಪಡಿಸಿ ಗುರಿ ಸಾಧನೆಗೆ ಜಿಲ್ಲೆಯಿಂದ ಅತಿ ಹೆಚ್ಚು ಕೊಡುಗೆ ನೀಡಲು ನಿರ್ದೇಶಿಸಿದೆ ಎಂದರು.

ಭಯಂಕರ ಪೆಡಂಭೂತ ಬಾಲಕಿಯ ಬ್ಲಡ್‌ ಕ್ಯಾನ್ಸರ್ ಚಿಕಿತ್ಸೆಗೆ ಕೊಟ್ಟಿದ್ದು 3 ಲಕ್ಷ..!

ಸಾಮಾನ್ಯವಾಗಿ ರೈತರು ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಬಳಸುತ್ತಿದ್ದಾರೆ. ರೈತರು ಮುಂಚಿನಂತೆ ಬೆಳೆಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕಿಲ್ಲ. ಒಮ್ಮೆ ತಮ್ಮ ಜಮೀನಿನ ವಿಸ್ತೀರ್ಣ ಮತ್ತು ಬೆಳೆಯುವ ಬೆಳೆಯ ಆಧಾರದ ಮೇಲೆ ಕ್ರೆಡಿಟ್‌ ಕಾರ್ಡ್‌ ಪಡೆದರೆ, ಅದರ ಮಿತಿ ಅನುಸಾರ ಎಷ್ಟುಬೇಕೋ ಅಷ್ಟುಸಾಲ ಪಡೆದು, ಅಷ್ಟಕ್ಕೆ ಮಾತ್ರ ಬಡ್ಡಿ ಕಟ್ಟಬಹುದು. ಈ ಹಿಂದೆ ತೆಗೆದುಕೊಂಡು ಸಾಲಕ್ಕೆ ಪೂರ್ತಿ ಬಡ್ಡಿ ಕಟ್ಟಲಾಗುತ್ತಿತ್ತು. ಆದರೆ ಈಗ ತಮ್ಮ ಮಿತಿಗೆ ಅನುಗುಣವಾಗಿ ಸಾಲ ಪಡೆದು ಮರು ಪಾವತಿ ಮಾಡಬಹುದು ಎಂದು ಅವರು ವಿವರಿಸಿದರು.

ಇದರಿಂದಾಗಿ ರೈತರು ಸಾಲಕ್ಕಾಗಿ ಬ್ಯಾಂಕ್‌ನ ಮುಂದೆ ಸಾಲುಗಟ್ಟಿನಿಲ್ಲಬೇಕಿಲ್ಲ. ಒಮ್ಮೆ ಈ ಕಾರ್ಡ್‌ ಮೂಲಕ ಸಾಲ ಪಡೆದರೆ, ಪಡೆದ ಸಾಲಕಷ್ಟೆಬಡ್ಡಿ ಮತ್ತು ಅಸಲು ಪಾವತಿಸಿದರೆ ಸಾಕು ಎಂದರು.

ಕಾರವಾರಕ್ಕೂ ಕೊರೋನಾ ಆತಂಕ : ಮಗನ ರಕ್ಷಣೆಗೆ ಮೊರೆ ಇಡುತ್ತಿರುವ ಪೋಷಕರು

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಂತೇಶಪ್ಪ ಮಾತನಾಡಿ, ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಮೊದಲ ಕಂತಿನಲ್ಲಿ ಜಿಲ್ಲೆಯ 1,94,550 ರೈತರಿಗೆ 2 ಸಾವಿರ, ಎರಡನೇ ಕಂತಿನಲ್ಲಿ 1,85,881 ಮಂದಿಗೆ ದೊರಕಿದೆ. ಮೂರನೇ ಕಂತಿನಲ್ಲಿ 46 ಮಂದಿಗೆ ಬಂದಿದೆ. ಅಂತೆಯೇ ರಾಜ್ಯ ಸರ್ಕಾರದಿಂದ ಮೊದಲ ಕಂತಿನಲ್ಲಿ 1,23,566 ಮಂದಿ ರೈತರಿಗೆ ತಲಾ 2 ಸಾವಿರ ದೊರಕಿದೆ ಎಂದು ಅವ​ರು ವಿವರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ, ಕೆನರಾ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಎಚ್‌.ಪಿ. ಗಿರಿಧರ್‌ ಇದ್ದರು.

click me!