ವಿಜಯದಶಮಿ ದಿನವಾದ ಮಂಗಳವಾರ ದೇವಿಯ ವಿಸರ್ಜನೆ ಮಾಡಿ, ಮೂರ್ತಿಯನ್ನು ಕೋಣೆಯಲ್ಲಿ ಇಡಲಾಗಿತ್ತು. ಮಂಗಳವಾರ ರಾತ್ರಿ ಆರೋಪಿ, ಮೂರ್ತಿ ಇರಿಸಿದ ಕೋಣೆಯ ಬಾಗಿಲು ಒಡೆದು, ಮೂರ್ತಿಗೆ ಧರಿಸಿದ ವಸ್ತ್ರ(ಸೀರೆ) ಕಳಚಿ ವಿಕೃತಿ ಮೆರೆದು, ಅದೇ ಸ್ಥಳದಲ್ಲಿ ಮಲಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಕೃತ್ಯ ನೋಡಿದ ಗ್ರಾಮಸ್ಥರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಂಡಿ(ಅ.26): ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಅನ್ಯಕೋಮಿನ ಯುವಕನೊಬ್ಬ ನವರಾತ್ರಿ ಅಂಗವಾಗಿ ಪ್ರತಿಷ್ಠಾಪಿಸಿದ್ದ ದೇವಿಮೂರ್ತಿಯ ವಸ್ತ್ರಗಳನ್ನು ವಿವಸ್ತ್ರಗೊಳಿಸಿ, ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಸ್ಥಳದಲ್ಲಿ ಮಲಮೂತ್ರ ವಿಸರ್ಜನೆ ಮಾಡಿದ್ದಾನೆ. ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಜಯದಶಮಿ ದಿನವಾದ ಮಂಗಳವಾರ ದೇವಿಯ ವಿಸರ್ಜನೆ ಮಾಡಿ, ಮೂರ್ತಿಯನ್ನು ಕೋಣೆಯಲ್ಲಿ ಇಡಲಾಗಿತ್ತು. ಮಂಗಳವಾರ ರಾತ್ರಿ ಆರೋಪಿ, ಮೂರ್ತಿ ಇರಿಸಿದ ಕೋಣೆಯ ಬಾಗಿಲು ಒಡೆದು, ಮೂರ್ತಿಗೆ ಧರಿಸಿದ ವಸ್ತ್ರ(ಸೀರೆ) ಕಳಚಿ ವಿಕೃತಿ ಮೆರೆದು, ಅದೇ ಸ್ಥಳದಲ್ಲಿ ಮಲಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಕೃತ್ಯ ನೋಡಿದ ಗ್ರಾಮಸ್ಥರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಜಯಪುರ ಆಗಲಿದ್ಯಾ ಬಸವೇಶ್ವರ ಜಿಲ್ಲೆ? ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಜಿಲ್ಲಾಡಳಿತ..!
ಈ ಮಧ್ಯೆ, ಆರೋಪಿಯನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಇಂಡಿ-ಮಣೂರು ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಸಿಪಿಐ ಡಪ್ಪಿನ, ತಹಸೀಲ್ದಾರ್ ಕಡಕಬಾವಿ ಭೇಟಿ ನೀಡಿ, ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.