ಜನರ ಆಶೀರ್ವಾದ ಗೆಲುವಿಗೆ ಕಾರಣ: ಪರಮೇಶ್ವರ್‌

Published : May 14, 2023, 05:58 AM IST
 ಜನರ ಆಶೀರ್ವಾದ ಗೆಲುವಿಗೆ ಕಾರಣ: ಪರಮೇಶ್ವರ್‌

ಸಾರಾಂಶ

  ನನ್ನ ಗೆಲುವಿಗೆ ಕೊರಟಗೆರೆ ಮತದಾರರ ಆಶೀರ್ವಾದ ಕಾರಣವಾಗಿದ್ದು, ವಿಶೇಷವಾಗಿ ತಾಯಂದಿರು ನನಗೆ ಹೆಚ್ಚಿನ ಮತ ನೀಡಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರ ಶ್ರಮ ನನ್ನ ಗೆಲುವಿಗೆ ಮುಖ್ಯ ಕಾರಣ ಎಂದು ನೂತನ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

 ಕೊರಟಗೆರೆ :  ನನ್ನ ಗೆಲುವಿಗೆ ಕೊರಟಗೆರೆ ಮತದಾರರ ಆಶೀರ್ವಾದ ಕಾರಣವಾಗಿದ್ದು, ವಿಶೇಷವಾಗಿ ತಾಯಂದಿರು ನನಗೆ ಹೆಚ್ಚಿನ ಮತ ನೀಡಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರ ಶ್ರಮ ನನ್ನ ಗೆಲುವಿಗೆ ಮುಖ್ಯ ಕಾರಣ ಎಂದು ನೂತನ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಪಟ್ಟಣದ ರಾಜೀವ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ. ಕೊರಟಗೆರೆ ಕ್ಷೇತ್ರದ ಪ್ರತೀ ಹಳ್ಳಿಗಳಲ್ಲೂ ರಾಜ್ಯದ ಬದಲಾವಣೆಗೆ ಕೊರಟಗೆರೆ ಕ್ಷೇತ್ರದಲ್ಲೂ ಸಹ ನನಗೆ ಮತ ನೀಡುವಂತೆ ಕೇಳಿಕೊಂಡಿದ್ದೆ ಅದಕ್ಕೆ ನಮ್ಮ ಮತದಾರರು ಸ್ಪಂದಿಸಿ ಮತ ನೀಡಿದ್ದಾರೆ. ಇದೇ ವಾತಾವರಣ ತುಮಕೂರು ಜಿಲ್ಲೆ ಮತ್ತು ರಾಜ್ಯದಲ್ಲೂ ಹರಡಿ ಕಾಂಗ್ರೆಸ್‌ ಪಕ್ಷವು ಸ್ಪಷ್ಟಬಹುಮತದಲ್ಲಿ ಬಹುದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬಂದಿದೆ. ನಾವು ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ ಈ ಬಾರಿಯ ಕಾಂಗ್ರೆಸ್‌ ಪಕ್ಷದ ಭರವಸೆಗಳು ದೊಡ್ಡಮಟ್ಟದಲ್ಲಿದ್ದು ಅವುಗಳನ್ನು ಜನರಿಗೆ ತಲುಪಿಸಲು ಒಂದು ಅಯವ್ಯಯವನ್ನು ಮಾಡಲಾಗುವುದು, ಕೊಟ್ಟಭರವಸೆಯನ್ನು ಈಡೇರಿಸಲಾಗುವುದು. ಕಾಂಗ್ರೆಸ್‌ ಪಕ್ಷದ ಈ ಗೆಲುವು ರಾಜ್ಯದ ಮತದಾರರ ಗೆಲುವಾಗಿದೆ ಎಂದರು.

ಈ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿ ದುರಾಡಳಿತದ ಬಗ್ಗೆ ಬೇಸತ್ತಿದ್ದರು. ಕಾಂಗ್ರೆಸ್‌ ಪಕ್ಷವು ಬಹುತೇಕ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷದ ಪರವಾಗಿ ನಿಂತದ್ದು ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯಿತು. ಈ ಚುನಾವಣೆಯಲ್ಲಿ ನನ್ನ ವಿರುದ್ಧ ಮಾತನಾಡಿದವರಿಗೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಇನ್ನು ಕೊರಟಗೆರೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದರು.

ಮುಖ್ಯಮಂತ್ರಿ ಹೈಕಮಾಂಡ್‌ ನಿರ್ಧಾರ

ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟುಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳು ಮತ್ತು ಅರ್ಹತೆಯುಳ್ಳವರು ಇದ್ದಾರೆ. ಆದರೆ ಮುಖ್ಯಮಂತ್ರಿ ಆಯ್ಕೆ ಒಂದು ಮಾರ್ಗಸೂಚಿಯ ಮೇರೆ ನಡೆಯಲಿದ್ದು ಸಿ.ಎಲ್‌.ಪಿ. ಸಭೆ ಮತ್ತು ವರಿಷ್ಠರ ತೀರ್ಮಾನದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

cm ಸ್ಥಾನ ಕೊಡುತ್ತೇನೆಂದರೆ ಬೇಡ ಅಂತ ಖಂಡಿತವಾಗಿಯೂ ಹೇಳಲಾರೆ

ತುಮಕೂರು (ಮೇ.12): ಹೈಕಮಾಂಡ್‌ ನನಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತೇನೆಂದರೆ ಬೇಡ ಅಂತ ಖಂಡಿತವಾಗಿಯೂ ಹೇಳಲಾರೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಅವರು ತುಮಕೂರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಸಿಎಂ ಆಗಬೇಕು ಎಂದು ಜಿಲ್ಲೆಯ ಅಭಿಮಾನಿಗಳ ಅಪೇಕ್ಷೆ ಇದೆ ಎಂದ ತಕ್ಷಣ ಅದು ಸಾಧ್ಯ ಆಗುವುದಿಲ್ಲ ಎಂದರು. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟದ್ದು. ಸಿಎಲ್‌ಪಿ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಯಾರು ಒಳ್ಳೆ ಆಡಳಿತ ಕೊಡುತ್ತಾರೋ ಅಂತಹವರನ್ನು ಹೈಕಮಾಂಡ್‌ ಸಿಎಂ ಮಾಡಬಹುದು ಎಂದರು.

ಎಲ್ಲಾ ಕಾಲಕ್ಕೂ ಎಲ್ಲಾ ಸಮೀಕ್ಷೆಗಳು ನಿಜವಾಗುವುದಿಲ್ಲ. ಕೆಲವೊಮ್ಮೆ ನಿಜವಾಗಿದೆ, ಕೆಲವೊಮ್ಮೆ ಸುಳ್ಳಾಗಿದೆ. ಆದರೂ ಎಕ್ಸಿಟ್‌ ಪೋಲಲ್ಲಿ ಕಾಂಗ್ರೆಸ್‌ ಮುಂದಿದೆ. ಕಾಂಗ್ರೆಸ್‌ ಪರ ಅಲೆ ಇರೋದು ಸಾಬೀತಾಗಿದೆ ಎಂದರು. ನಾವು 130 ಸ್ಥಾನ ಪಡೆಯುತ್ತೇವೆ. ಅಲ್ಲದೇ ಸರ್ಕಾರ ರಚನೆ ಮಾಡಲು ನಾವು ಮಾನಸಿಕವಾಗಿ ಸಿದ್ದರಾಗಿದ್ದೇವೆ ಎಂದು ತಿಳಿಸಿದರು. ರಾಜ್ಯದ ವಿಧಾನಸಭಾ ಚುನಾವಣೆ ಬಹಳ ಪ್ರತಿಷ್ಠಿತವಾಗಿ ಈ ಬಾರಿ ನಡೆದಿದೆ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ ಅಂತಾ ಹೇಳಿದ್ದೇವು. ಇಂದು ಆ ವಾತಾವರಣ ಕಂಡು ಬಂದಿದೆ. ಬಹಳ ಜನರು ಮತ ಹಾಕದವರು ಈ ಬಾರಿ ಮತದಾನ ಮಾಡಿದ್ದಾರೆ. ಹೊಸಬರು ಕೂಡ ಮತದಾನ ಮಾಡಿದ್ದಾರೆ. 

PREV
Read more Articles on
click me!

Recommended Stories

ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ