ಕಂಟೈನ್‌ಮೆಂಟ್ ಪ್ರದೇಶದವರು ಕೆಲ್ಸಕ್ಕೆ ಹೋಗೋ ಹಾಗಿಲ್ಲ: BBMP

By Kannadaprabha News  |  First Published Jul 31, 2020, 9:07 AM IST

ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವ ಉದ್ಯೋಗಿಗಳು ಕಂಟೈನ್ಮೆಂಟ್‌ ಅವಧಿ ಮುಗಿಯುವವರೆ ಕಚೇರಿಗೆ ಹೋಗುವಂತಿಲ್ಲ. ಅವಶ್ಯಕತೆ ಇರುವವರಿಗೆ ಕಂಟೈನ್ಮೆಂಟ್‌ ವಲಯದಲ್ಲಿ ಇದ್ದಾರೆ ಎಂಬ ಪ್ರಮಾಣ ಪತ್ರ ನೀಡುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಬೆಂಗಳೂರು(ಜು.31): ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವ ಉದ್ಯೋಗಿಗಳು ಕಂಟೈನ್ಮೆಂಟ್‌ ಅವಧಿ ಮುಗಿಯುವವರೆ ಕಚೇರಿಗೆ ಹೋಗುವಂತಿಲ್ಲ. ಅವಶ್ಯಕತೆ ಇರುವವರಿಗೆ ಕಂಟೈನ್ಮೆಂಟ್‌ ವಲಯದಲ್ಲಿ ಇದ್ದಾರೆ ಎಂಬ ಪ್ರಮಾಣ ಪತ್ರ ನೀಡುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪೂರ್ವ ವಲಯದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಬೂತ್‌ ಮಟ್ಟದ ಅಧಿಕಾರಿಗಳೊಂದಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಮೇಯರ್‌ ಗೌತಮ್‌ ಕುಮಾರ್‌, ಕ್ಷೇತ್ರದ ಶಾಸಕ ಹ್ಯಾರಿಸ್‌ ಸಭೆ ನಡೆಸಿದರು.

Tap to resize

Latest Videos

ಬ್ರಾಡ್‌ವೇ ಆಸ್ಪತ್ರೆಗೆ ಆ.5ಕ್ಕೆ ಸಿಎಂ ಬಿಎಸ್‌ವೈ ಚಾಲನೆ

ಈ ವೇಳೆ ಮಾತನಾಡಿದ ಆಯುಕ್ತರು, ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ ವಾಸಿಸುವವರು ಕಚೇರಿಗಳಿಗೆ ಹೋಗಲು (ತುರ್ತು ಸೇವೆ ಹೊರತುಪಡಿಸಿ) ಅನುಮತಿ ಇರುವುದಿಲ್ಲ. ಕಂಟೈನ್ಮೆಂಟ್‌ನಲ್ಲಿ ಇರುವವರಿಗೆ ಕಚೇರಿಗಳಲ್ಲಿ ಸಮಸ್ಯೆ ಎದುರಾಗದಂತೆ ಅವರ ಕಚೇರಿಗಳಿಗೆ ಇವರು ಕಂಟೈನ್ಮೆಂಟ್‌ ವಲಯದಲ್ಲಿದ್ದಾರೆ ಎಂಬ ಪತ್ರವನ್ನು ನೀಡಬೇಕು. ಜತೆಗೆ ಕಂಟೈನ್ಮೆಂಟ್‌ನಲ್ಲಿ ತುರ್ತು ಸೇವೆ ಸಲ್ಲಿಸುತ್ತಿರುವ ಪೊಲೀಸ್‌, ಆರೋಗ್ಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದಂತಹ ಅಗತ್ಯ ಸಿಬ್ಬಂದಿಯ ಬಗ್ಗೆ ಮಾಹಿತಿ ಕಲೆಹಾಕುವುದಕ್ಕೆ ಸೂಚಿಸಿದರು.

ವರವ ಕೊಡೇ ಮಹಾಲಕ್ಷ್ಮೀ... ವರ ಮಹಾಲಕ್ಷ್ಮೀ ವ್ರತದ ಮಹತ್ವ, ಆಚರಣೆ ಬಗ್ಗೆ ಒಂದಷ್ಟು ಮಾಹಿತಿ

ಕಂಟೈನ್ಮೆಂಟ್‌ ಪ್ರದೇಶದಲ್ಲಿರುವ ಬಡವರಿಗೆ ದಿನಸಿ ವಿತರಣೆ, ಆರ್ಥಿಕವಾಗಿ ಸದೃಢವಾದವರಿಗೆ ಹಣ ಪಡೆದು ದಿನಸಿ ಮನೆಗೆ ಕಳುಹಿಸುವ ವ್ಯವಸ್ಥೆ, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಪತ್ತೆ, ಹೋಂ ಐಸೋಲೇಷನ್‌, ಕ್ವಾರಂಟೈನ್‌ನಲ್ಲಿವವರ ಮೇಲೆ ನಿಗಾ ವಹಿಸುವುದು ಸೇರಿದಂತೆ ಬೂತ್‌ ಮಟ್ಟದ ಕೊರೋನಾ ನಿಯಂತ್ರಣ ಸಮಿತಿಯ ಅಧಿಕಾರಿಗಳಿಗೆ ಎನ್‌.ಮಂಜುನಾಥ ಪ್ರಸಾದ್‌ ಹಲವು ನಿರ್ದೇಶನ ನೀಡಿದ್ದಾರೆ.

ಅನುದಾನ ನಮಗೂ ಬೇಕು

ಬಿಬಿಎಂಪಿಯಿಂದ ಪ್ರತಿ ಸದಸ್ಯರಿಗೆ ಕೊರೋನಾ ಸೋಂಕು ನಿಯಂತ್ರಣ ಕಾರ್ಯಕ್ಕೆ .20 ಲಕ್ಷ ನೀಡಲಾಗಿದೆ. ಅದೇ ರೀತಿ ಶಾಸಕರಿಗೂ ಅನುದಾನ ಕೊಡಿ. ಶಾಸಕರೂ ಸಹ ಕ್ಷೇತ್ರದಲ್ಲಿ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಾಸಕ ಎನ್‌.ಎ.ಹ್ಯಾರಿಸ್‌ ಬಿಬಿಎಂಪಿ ಮೇಯರ್‌ ಮತ್ತು ಆಯುಕ್ತರಿಗೆ ಆಗ್ರಹಿಸಿದ್ದಾರೆ.

click me!