ಅಪರೂಪದ ಎರಡು ತಲೆ ಹಾವಿನ ಮಾರಾಟಕ್ಕೆ ಯತ್ನ

Kannadaprabha News   | Asianet News
Published : Feb 13, 2020, 03:06 PM IST
ಅಪರೂಪದ ಎರಡು ತಲೆ ಹಾವಿನ ಮಾರಾಟಕ್ಕೆ ಯತ್ನ

ಸಾರಾಂಶ

ಅಪರೂಪದ ಎರಡು ತಲೆ ಹಾವನ್ನು ಮಾರಲು ಯತ್ನಿಸಿದವರನ್ನು ಕೊಡಗಿನಲ್ಲಿ ಬಂಧಿಸಲಾಗಿದೆ. ಹಾವನ್ನು ಆಂಧ್ರಪ್ರದೇಶದಿಂದ ಕೇರಳಕ್ಕೆ ಸಾಗಿಸುತ್ತಿತ್ತು.

ಮಡಿಕೇರಿ(ಫೆ.13): ಅಪರೂಪದ ಎರಡು ತಲೆ ಹಾವನ್ನು ಮಾರಲು ಯತ್ನಿಸಿದವರನ್ನು ಕೊಡಗಿನಲ್ಲಿ ಬಂಧಿಸಲಾಗಿದೆ. ಹಾವನ್ನು ಆಂಧ್ರಪ್ರದೇಶದಿಂದ ಕೇರಳಕ್ಕೆ ಸಾಗಿಸುತ್ತಿತ್ತು. ಕೊಡಗು ಅರಣ್ಯ ಸಂಚಾರಿದಳ ಪೊಲೀಸರ ಕಾರ್ಯಚರಣೆಯಲ್ಲಿ ಹಾವಿನ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದವರನ್ನು ಬಂಧಿಸಿದ್ದು, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚೆನ್ನಂಗೊಲ್ಲಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಗೋಣಿಕೊಪ್ಪ ಮಾರ್ಗವಾಗಿ ಹಾವನ್ನು ಸಾಗಿಸಲು ಪ್ರಯತ್ನಿಸಲಾಗಿತ್ತು.

ಕೋಪಿಷ್ಠ ಕೊಳಕು ಮಂಡಲ ಹಾವು ಕಡಿದು ತುಂಬು ಗರ್ಭಿಣಿ ಸಾವು

ಆಂಧ್ರಪ್ರದೇಶ ಮೂಲದ ಮುಲ್ಲ ಮೆಹಬೂಬ್ ವಲೀ, ಶೇಖ್ ಮುಲ್ಲಚಾಂದ್ ಪಾಷಾ, ಎಸ್. ಫಯಾಜ್, ಬೋಯ ರಂಗಸ್ವಾಮಿ, ಶೇಕ್ ಪೆದ್ದ ಮೆಹಬೂಬ್ ಬಾಷ ಬಂಧಿತರು. ಎರಡು ತಲೆ ಹಾವು, ಮಾರುತಿ ಶಿಫ್ಟ್ ಡಿಸೈರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

PREV
click me!

Recommended Stories

ಬಿಲ್ ಪಾವತಿಸದ ಸರ್ಕಾರ; ತಾಲೂಕು ಆಫೀಸಿನ ಟೇಬಲ್, ಕುರ್ಚಿ, ಕಂಪ್ಯೂಟರ್ ಜಪ್ತಿ ಮಾಡಿದ ಕೋರ್ಟ್!
ಎದುರುಮನೆ ಹುಡುಗಿಯೊಂದಿಗೆ ಓಡಿಹೋದ ಮಗ; ತಾಯಿಗೆ ಮನಬಂದಂತೆ ಥಳಿಸಿದ ಲೋಕಲ್ ಪೊಲೀಸ್!