ಪ್ರೇಮಿಗಾಗಿ ಕೈ ಹಿಡಿದವನ ಕುತ್ತಿಗೆ ಹಿಸುಕಿದ್ಲು..!

Suvarna News   | Asianet News
Published : Feb 13, 2020, 02:42 PM ISTUpdated : Feb 13, 2020, 02:43 PM IST
ಪ್ರೇಮಿಗಾಗಿ ಕೈ ಹಿಡಿದವನ ಕುತ್ತಿಗೆ ಹಿಸುಕಿದ್ಲು..!

ಸಾರಾಂಶ

ಊಟದಲ್ಲಿ ನಿದ್ರೆ ಮಾತ್ರಿ ಹಾಕಿ ಕೊಟ್ಟು ಪತಿಯ ಕೊಲ್ಲಲು ಪ್ರಯತ್ನಿಸಿ ಇದು ಫಲಕೊಡದಿದ್ದಾಗ ಕತ್ತುಹಿಸುಕಿ ಕೈ ಹಿಡಿದ ಗಂಡನನ್ನೇ ಕೊಲ್ಲಲು ಪ್ರಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ.  

ಹಾಸನ(ಫೆ.13): ಊಟದಲ್ಲಿ ನಿದ್ರೆ ಮಾತ್ರಿ ಹಾಕಿ ಕೊಟ್ಟು ಪತಿಯ ಕೊಲ್ಲಲು ಪ್ರಯತ್ನಿಸಿ ಇದು ಫಲಕೊಡದಿದ್ದಾಗ ಕತ್ತುಹಿಸುಕಿ ಕೈ ಹಿಡಿದ ಗಂಡನನ್ನೇ ಕೊಲ್ಲಲು ಪ್ರಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಪತ್ನಿಯಿಂದಲೇ ಪತಿಯ ಕೊಲೆಗೆ ಸಂಚು ನಡೆದಿದ್ದು, ಪ್ರಿಕರನ ಜೊತೆ ಸೇರಿ ಗಂಡನನ್ನೇ ಕೊಲ್ಲಲು ಪ್ರಯತ್ನಿಸಲಾಗಿದೆ. ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ ಪತಿ ಸಾಯಿಸಲು ಪತ್ನಿ ಯತ್ನಿಸಿದ್ದು, ಪ್ರಿಯಕರನ ಜೊತೆ ಸೇರಿ ಗಾಢ ನಿದ್ರೆಯಲ್ಲಿದ್ದ ಗಂಡನ ಕುತ್ತಿಗೆ ಹಿಸುಕಿ ಕೊಲೆ ಮಾಡಲು ನೋಡಿದ್ದಾಳೆ.

ಪ್ರೇಮಿಗಳ ದಿನ ಆಚರಿಸದಂತೆ ಭಜರಂಗದಳ ಖಡಕ್ ಎಚ್ಚರಿಕೆ

ಪತ್ನಿ ವಿರುದ್ದ ಪೊಲೀಸ್ ಠಾಣೆಗೆ ಪತಿ ದೂರು ನೀಡಿದ್ದು, ಅಸ್ವಸ್ಥ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಸಂಚು ರೂಪಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತ್ನಿ ರಮ್ಯಾ ವಿರುದ್ದ ಕೊಲೆ ಯತ್ನದ ಆರೋಪದಲ್ಲಿ ಎಫ್‌.ಐ.ಆರ್ ದಾಖಲಾಗಿದೆ. ಅಸ್ವಸ್ಥ ಪತಿ ಆನಂದ್ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಫೆಬ್ರವರಿ 10 ರ ರಾತ್ರಿ ಒಂದು ಗಂಟೆ ವೇಳೆಯಲ್ಲಿ ಘಟನೆ ನಡೆದಿದ್ದು, ರಾತ್ರಿ ತಡವಾಗಿ ಬಂದ ಪತಿಗೆ ತನ್ನ ಕೈಯಾರೆ ನಿದ್ರೆ ಮಾತ್ರೆ ಬೆರೆಸಿದ ಊಟ ಬಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ. ಕುತ್ತಿಗೆ ಹಿಸುಕುವಾಗ ಎಚ್ಚರಗೊಂಡ ಪತಿ ಕೂಗಿಕೊಂಡಿದ್ದ. ಕೂಡಲೆ ಆನಂದ್ ತಾಯಿ ಎದ್ದು ಬಂದಿದ್ದು, ಗಾಬರಿಯಿಂದ ರಮ್ಯಾ ಪ್ರಿಯಕರನ ಜೊತೆ ಬೈಕ್ ಏರಿ ಎಸ್ಕೇಪ್ ಆಗಿದ್ದಾಳೆ. ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಕಡಿಮೆ ಬಿಯರ್ ಉತ್ಪಾದನೆಗೆ ಯುಬಿ ಕಂಪನಿಗೆ ವಿಧಿಸಿದ್ದ 29 ಕೋಟಿ ರೂ. ದಂಡ ರದ್ದು!
SSLC ಫಲಿತಾಂಶ ಪ್ರಗತಿ: ಮಧ್ಯರಾತ್ರಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬಂದ BEO!