ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ ಪ್ರಿಯಕರ: ನಿಶ್ಚಿತಾರ್ಥವಾಗಿದ್ದ ಯುವತಿ ಆತ್ಮಹತ್ಯೆ

Suvarna News   | Asianet News
Published : Feb 13, 2020, 02:11 PM ISTUpdated : Feb 13, 2020, 06:09 PM IST
ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ ಪ್ರಿಯಕರ: ನಿಶ್ಚಿತಾರ್ಥವಾಗಿದ್ದ ಯುವತಿ ಆತ್ಮಹತ್ಯೆ

ಸಾರಾಂಶ

ಪ್ರೇಮಿಗಳ ದಿನದ ಮುನ್ನಾ ದಿನವೇ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಪ್ರಿಯಕರನ ಕಿರುಕುಳದಿಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೈಸೂರು(ಫೆ.13): ಪ್ರೇಮಿಗಳ ದಿನದ ಮುನ್ನಾ ದಿನವೇ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಪ್ರಿಯಕರನ ಕಿರುಕುಳದಿಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರೇಮಿಗಳ ದಿನಾಚರಣೆಗೆ ಮುನ್ನವೇ ಆತ್ಮಹತ್ಯೆಗೆ ಶರಣಾದ ಯುವತಿ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ್ದಾಳೆ. ನಂಜನಗೂಡು ತಾಲೂಕು ಮೆಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೇಘನಾ(20) ಮೃತ ದುರ್ದೈವಿ.

ಪ್ರೇಮಿಗಳ ದಿನ ಆಚರಿಸದಂತೆ ಭಜರಂಗದಳ ಖಡಕ್ ಎಚ್ಚರಿಕೆ

ಪ್ರಿಯತಮ ಮಣಿಕಂಠನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲವು ದಿನಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಂತರರ್ಜಾತಿ ಹಿನ್ನಲೆ ಮೇಘನಾ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಮೇಘನಾ ಪೋಷಕರು ಇಬ್ಬರಿಗೂ ಬುದ್ದಿವಾದ ಹೇಳಿದ್ದರು.

ಮೇಘನಾ ಒಪ್ಪಿಗೆ ಪಡೆದು ಪೋಷಕರು ಮತ್ತೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿದ್ದರು. ಈ ವಿಚಾರ ತಿಳಿದು ನಿಶ್ಚಿತಾರ್ಥ ಮಾಡಿಕೊಂಡ ಹುಡುಗನಿಗೆ ಮಣಿಕಂಠ ಪ್ರೀತಿ ವಿಚಾರ ತಿಳಿಸಿದ್ದ.  ತನ್ನ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಮೇಘನಾಗೆ ಒತ್ತಾಯಿಸಿದ್ದ. ಇಬ್ಬರೂ ಒಟ್ಟಿಗೆ ಇರುವ ಫೋಟೋ ವಾಟ್ಸಾಪ್‌ಗೆ ಹಾಕಿ ಬೆದರಿಕೆ ಹಾಕಿದ್ದ ಮಣಿಕಂಠ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲಾಕ್‌ಮೇಲ್ ಮಾಡಿದ್ದ.

ಸೈನೈಡ್ ಮೋಹನ್ 19ನೇ ಪ್ರಕರಣ ಸಾಬೀತು

ಇವೆಲ್ಲಾ ಬೆಳವಣಿಗೆಯಿಂದ ನೊಂದ ಮೇಘನಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೇಘನಾ ತಂದೆ ಮಹದೇವಯ್ಯ ಮಣಿಕಂಠ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ದೊಡ್ಡಕವಲಂದೆ ಠಾಣೆ ಪೊಲೀಸರು ಮಣಿಕಂಠನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಮಣಿಕಂಠ ಸದ್ಯ ತಲೆಮರೆಸಿಕೊಂಡಿದ್ದಾನೆ.

PREV
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ