ಮಂಡ್ಯ: ಡ್ರೋನ್‌ ಕ್ಯಾಮೆರಾ ಬಳಕೆಗೆ ತರಾಟೆ

By Kannadaprabha NewsFirst Published Dec 1, 2019, 10:35 AM IST
Highlights

ಶ್ರೀರಂಗಪಟ್ಟಣದ ಸ್ಥಳೀಯ ಪುರಸಭೆಗೆ ಯಾವುದೇ ಮಾಹಿತಿ ನೀಡದೆ, ಅನುಮತಿಯನ್ನೂ ಪಡೆಯದೆ ಡ್ರೋನ್‌ ಕ್ಯಾಮೆರಾಗಳ ಮೂಲಕ ಪಟ್ಟಣದ ಬೀದಿಗಳ ವಿಡಿಯೋ ಚಿತ್ರಣ ಮಾಡುತ್ತಿದ್ದ ಮೂವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಮೈಸೂರು(ಡಿ.01): ಶ್ರೀರಂಗಪಟ್ಟಣದ ಸ್ಥಳೀಯ ಪುರಸಭೆಗೆ ಯಾವುದೇ ಮಾಹಿತಿ ನೀಡದೆ, ಅನುಮತಿಯನ್ನೂ ಪಡೆಯದೆ ಡ್ರೋನ್‌ ಕ್ಯಾಮೆರಾಗಳ ಮೂಲಕ ಪಟ್ಟಣದ ಬೀದಿಗಳ ವಿಡಿಯೋ ಚಿತ್ರಣ ಮಾಡುತ್ತಿದ್ದ ಮೂವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಶ್ರೀಕಾಂತ್‌ ಎಂಬುವವರು ಬೆಂಗಳೂರಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರೆಂದು ಹೇಳಿಕೊಂಡು ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಡ್ರೋನ್‌ ಕ್ಯಾಮರಾ ಮೂಲಕ ವಿಡಿಯೋ ಚಿತ್ರಣ ಮಾಡುತ್ತಿದ್ದ ವೇಳೆ ಅನುಮಾನಗೊಂಡ ಸ್ಥಳೀಯ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯ ಚಂದನ್‌ ಹಾಗೂ ಪುರಸಭಾ ಮಾಜಿ ಸದಸ್ಯೆ ನಳೀನಾ ಇತರರು ವಿರೋಧ ವ್ಯಕ್ತಪಡಿಸಿ ಪ್ರಶ್ನೆ ಮಾಡಿದರು. ನಂತರ ಡ್ರೋನ್‌ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡದಂತೆ ತಡೆ ಹಿಡಿದಿದ್ದಾರೆ.

ಈ ಬೈಎಲೆಕ್ಷನ್ ನಂತ್ರ ಇನ್ನೊಂದು ಎಕೆಕ್ಷನ್: ರೇವಣ್ಣ ಭವಿಷ್ಯ..!

ಸ್ಥಳೀಯರು ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಕಾಂತ್‌, ಬೆಂಗಳೂರಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರಿಂದ ಒಳಚರಂಡಿ ಸಂಪರ್ಕದ ಕಾಮಗಾರಿಗೆ ಗುತ್ತಿಗೆ ಪಡೆದಿದ್ದು, ಕಾಮಗಾರಿ ನಡೆಸಲು ಪಟ್ಟಣದ ಬೀದಿಗಳ ಒಳಚರಂಡಿಗಳಿರುವ ಮಾರ್ಗಗಳನ್ನು ಡ್ರೋನ್‌ ಕ್ಯಾಮರಾ ಮೂಲಕ ವಿಡಿಯೋ ಚಿತ್ರಣ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಪುರಸಭೆಯಿಂದ ಅನುಮತಿ ಪಡೆಯದೆ ಚಿತ್ರೀಕರಣ ನಡೆಸುತ್ತಿದ್ದುದ್ದರಿಂದ ನಾಗರಿಕರು ಕ್ಯಾಮೆರಾ ಹಾಗೂ ವಾಹನವನ್ನು ಹಿಡಿದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಗುತ್ತಿಗೆದಾರರನ್ನು ವಿಚಾರಣೆ ಮಾಡಿದಾಗ ದಾಖಲೆಗಳ ಪರಿಶೀಲಿಸಿದಾಗ ಬೆಂಗಳೂರಿನ ಒಳಚರಂಡಿ ಮಂಡಳಿಯ ಗುತ್ತಿಗೆದಾರ ಎಂಬುದು ಸಾಬೀತಾಗಿದೆ.

ಸಿದ್ದು, ಎಚ್‌ಡಿಕೆ ನನ್ನ ವೈರಿಗಳಲ್ಲ: ವಿಶ್ವನಾಥ್, ಸ್ಪರ್ಧೆ, ಕ್ಷೇತ್ರ ಬಗ್ಗೆ ಏನ್ ಹೇಳ್ತಾರೆ..?

ಸ್ಥಳೀಯ ಪಟ್ಟಣ ಪುರಸಭೆಯಿಂದ ಅನುಮತಿ ಪಡೆದು ವಿಡಿಯೋ ಚಿತ್ರಣ ಮಾಡುವಂತೆ ಪೊಲೀಸರು ಗುತ್ತಿಗೆದಾರನಿಗೆ ತಿಳಿ ಹೇಳಿ ಸಾರ್ವಜನಿಕರಿಂದ ಕ್ಯಾಮೆರಾ ಹಾಗೂ ವಾಹನವನ್ನು ವಾಪಸ್‌ ಕೊಡಿಸಿ ಸಮಾಧಾನ ಪಡಿಸಿ ಕಳುಹಿಸಿ ಕೊಟ್ಟಿದ್ದಾರೆ.

click me!