2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತ ಮಾಡುವ ಸಂಕಲ್ಪ ನಾವು ಮಾಡಬೇಕಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಕ್ಷಯ ರೋಗಿಯ ಅನುಕೂಲಕ್ಕಾಗಿ ಸರ್ಕಾರ ಮಾಸಿಕ 500 ರುಪಾಯಿ ಗೌರವಧನ ನೀಡುತ್ತಿದ್ದು ಇದು ರೋಗಿಯ ಔಷಧಿ ವೆಚ್ಚಕ್ಕೆ ಸಹಕಾರಿಯಾಗಲಿದೆ ಜಿಲ್ಲಾ ಹೆಚ್ಚುವರಿ ಕ್ಷಯರೋಗ ನಿಯಂತ್ರಣ ವೈದ್ಯಾಧಿಕಾರಿ ಡಾ.ಲಕ್ಷ್ಮೇಕಾಂತ್ ಹೇಳಿದರು.
ಶಿರಾ : 2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತ ಮಾಡುವ ಸಂಕಲ್ಪ ನಾವು ಮಾಡಬೇಕಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಕ್ಷಯ ರೋಗಿಯ ಅನುಕೂಲಕ್ಕಾಗಿ ಸರ್ಕಾರ ಮಾಸಿಕ 500 ರುಪಾಯಿ ಗೌರವಧನ ನೀಡುತ್ತಿದ್ದು ಇದು ರೋಗಿಯ ಔಷಧಿ ವೆಚ್ಚಕ್ಕೆ ಸಹಕಾರಿಯಾಗಲಿದೆ ಜಿಲ್ಲಾ ಹೆಚ್ಚುವರಿ ಕ್ಷಯರೋಗ ನಿಯಂತ್ರಣ ವೈದ್ಯಾಧಿಕಾರಿ ಡಾ.ಲಕ್ಷ್ಮೇಕಾಂತ್ ಹೇಳಿದರು.
ತಾಲೂಕಿನ ಹುಲಿಕುಂಟೆ ಹೋಬಳಿಯ ದ್ವಾರನಕುಂಟೆ ಪ್ರಾಥಮಿಕ ಕೇಂದ್ರದಲ್ಲಿ ಸೋಮವಾರ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾತ್ರಿ ಜ್ವರ, ಬೆವರುವುದು, ದಿನೇ ದಿನೇ ವ್ಯಕ್ತಿಯ ದೇಹದ ತೂಕ ಕಡಿಮೆಯಾಗುವುದು ಕ್ಷಯ ರೋಗದ ಲಕ್ಷಣವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಸೇವನೆ, ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ರೋಗಗಳು ಮನುಷ್ಯನ ಹತ್ತಿರ ಸುಳಿಯುವುದಿಲ್ಲ ಎಂದರು.
ದ್ವಾರನ ಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಮೀನಾಕ್ಷಿ ರಾಮಕೃಷ್ಣಪ್ಪ, ಜಿಲ್ಲಾ ಹೆಚ್ಚುವರಿ ಕ್ಷಯರೋಗ ಮೇಲ್ವಿಚಾರಕ ಅನಿಲ್, ವೈದ್ಯಾಧಿಕಾರಿ ಡಾ. ತಿಮ್ಮರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಗೌರಮ್ಮ, ಲಕ್ಷ್ಮಿಕಾಂತ್ ಆರೋಗ್ಯ ಇಲಾಖೆಯ ಕಿಶೋರ್ ಅಹಮದ್, ನಿರಂಜನ್, ರೋಜಾ ಸೇರಿದಂತೆ ಹಲವಾರು ಆಶಾ ಕಾರ್ಯಕರ್ತರು ಹಾಜರಿದ್ದರು.
ಮತ್ತೆ ಕೊರೋನಾ ಕಾಟ
ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್ ಸಾಂಕ್ರಾಮಿಕ ಹಾವಳಿ ಹೆಚ್ಚುತ್ತಿದ್ದು ಸೋಮವಾರ 1,805 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ. ಇದರ ಬೆನ್ನಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 10,300ಕ್ಕೆ ಏರಿಕೆಯಾಗಿದೆ. 134 ದಿನಗಳ ಬಳಿಕ ಕೋವಿಡ್ 10 ಸಾವಿರದ ಗಡಿ ದಾಟಿದೆ. ಇದೇ ವೇಳೆ ಚಂಡೀಗಢ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ತಲಾ 1 ಹಾಗೂ ಕೇರಳದಲ್ಲಿ 2 ಸೇರಿ ಒಟ್ಟು 6 ಸೋಂಕಿತರು ಸಾವನ್ನಪ್ಪಿದ್ದಾರೆ. ದೈನಂದಿನ ಪಾಸಿಟಿವಿಟಿ 3.19ರಷ್ಟುಮತ್ತು ವಾರದ ಪಾಸಿಟಿವಿಟಿ ದರವು 1.39ರಷ್ಟುದಾಖಲಾಗಿವೆ. ಸೋಂಕಿತರ ಚೇತರಿಕೆ ಪ್ರಮಾಣವು 98.79ರಷ್ಟಿದ್ದು ಈವರೆಗೆ ದೇಶದಲ್ಲಿ ಒಟ್ಟು 4.47 ಕೋಟಿ ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಹಾಗೂ 220.65 ಕೋಟಿ ಡೋಸ್ ಕೋವಿಡ್ ಲಸಿಕೆಗಳ (Vaccine) ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health ministry) ತಿಳಿಸಿದೆ.
ಕೋವಿಡ್ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್
ಕೋವಿಡ್ ಪ್ರಕರಣಗಳು ಹಾಗೂ ಜ್ವರಪೀಡಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಸನ್ನದ್ಧತೆಯನ್ನು ಪರೀಕ್ಷಿಸಲು ಏ.10 ಮತ್ತು 11ರಂದು ರಾಷ್ಟ್ರವ್ಯಾಪಿ ಅಣಕು ಕಾರ್ಯಾಚರಣೆ (Mock drill) ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಆಸ್ಪತ್ರೆಗಳಲ್ಲಿ ಔಷಧ, ಹಾಸಿಗೆ, ವೈದ್ಯಕೀಯ ಉಪಕರಣ ಹಾಗೂ ವೈದ್ಯಕೀಯ ಆಕ್ಸಿಜನ್ ಲಭ್ಯತೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್) ಜಂಟಿ ಸಲಹಾವಳಿಯನ್ನು ಹೊರಡಿಸಿವೆ.
6 ತಿಂಗಳಲ್ಲಿ ಎಚ್3ಎನ್2 ವೈರಸ್ ಹೊಸ ಹೊಸ ರೂಪದಲ್ಲಿ ಪ್ರತ್ಯಕ್ಷ: ರೂಪಾಂತರದ ಕಾರಣದಿಂದ ಹೆಚ್ಚು ಮಾರಕ ಎಂದ ತಜ್ಞರು
ಮಾ.27ರಂದು ರಾಜ್ಯಗಳ ಜತೆ ವರ್ಚುವಲ್ ಸಭೆ ಆಯೋಜನೆಯಾಗಿದ್ದು, ಅಂದು ಅಣಕು ಕಾರ್ಯಾಚರಣೆಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗುತ್ತದೆ ಎಂದು ಸಲಹಾವಳಿ ಹೇಳಿದೆ. ಕೆಲವು ರಾಜ್ಯಗಳಲ್ಲಿ ಕೋವಿಡ್ ಪರೀಕ್ಷೆ ಕುಸಿದಿದೆ. ಪ್ರತಿ 10 ಲಕ್ಷ ಜನರಿಗೆ 140 ಪರೀಕ್ಷೆಗಳು ನಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ನಿಗದಿಗೊಳಿಸಿದೆ. ಆದರೆ ಈಗ ನಡೆಯುತ್ತಿರುವ ಪರೀಕ್ಷೆಗಳ ಪ್ರಮಾಣ ಆ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ಸಲಹಾವಳಿಯಲ್ಲಿ ಸರ್ಕಾರ ಬೇಸರ ವ್ಯಕ್ತಪಡಿಸಿದೆ.
ನಾಯಿ ಮಾಂಸದಿಂದ ಹರಡಿತಾ ಕೊರೋನಾ?
ಬರೋಬ್ಬರಿ ಎರಡು ವರ್ಷಗಳ ಕಾಲ ಕೊರೋನಾ ವೈರಸ್ ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿತ್ತು. ಶರವೇಗದಲ್ಲಿ ಹರಡಿದ ವೈರಸ್ ಕೋಟ್ಯಾಂತರ ಮಂದಿಯ ಸಾವಿಗೆ ಕಾರಣವಾಯಿತು. ಅದೆಷ್ಟೋ ಮಂದಿ ಹಸಿವು. ಚಿಕಿತ್ಸೆಯಿಲ್ಲದೆ ಸತ್ತರು. ಇವತ್ತಿಗೂ ಕೋವಿಡ್ ಸೋಂಕಿನ ಪರಿಣಾಮಗಳು ಕಡಿಮೆಯಾಗಿಲ್ಲ. ಹೊಸ ಹೊಸ ರೂಪಾಂತರಗಳು ಜನರನ್ನು ಕಂಗೆಡಿಸುತ್ತಲೇ ಇವೆ. ಚೀನಾದ ವುಹಾನ್‌ನ ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂದು ಈ ಹಿಂದೆ ಹೇಳಲಾಗ್ತಿತ್ತು. ಸದ್ಯ ಅಂತರಾಷ್ಟ್ರೀಯ ತಜ್ಞರ ತಂಡ ಚೀನಾದ ವುಹಾನ್ ಪ್ರಾಂತದ ಸಮುದ್ರಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿ ಮಾಂಸದಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.