ಮಾನವ ಸರಪಳಿ ರಚಿಸಿ ದೇಗುಲ ತೆರವಿಗೆ ಅಡ್ಡಿ

By Kannadaprabha NewsFirst Published Mar 1, 2020, 8:24 AM IST
Highlights

ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿ ಕಟ್ಟಡಲಾಗಿರುವ ದೇವಾಲಯಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಪಟ್ಟಿಸಿದ್ಧಪಡಿಸಿಕೊಂಡು ಕಾರ್ಯಾಚರಣೆ ನಡೆಸಿರುವ ಪಾಲಿಕೆ ಅಧಿಕಾರಿಗಳು, ಇಲ್ಲಿನ ಗಂಗಮ್ಮ ದೇವಾಲಯ ಕೂಡ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಕೆಲ ದಿನಗಳ ಹಿಂದೆಯೇ ತೆರವಿಗೆ ಮುಂದಾಗಿದ್ದರು. ಆದರೆ ಜನರ ವಿರೋಧದಿಂದ ಅಧಿಕಾರಿಗಳು ವಾಪಾಸಾಗಿದ್ದಾರೆ.

ಬೆಂಗಳೂರು(ಮಾ.01): ನಗರದ ಶ್ರೀರಾಮಪುರದ ಭಾಷ್ಯಂ ವೃತ್ತದ ಬಳಿ ಇರುವ ಗಂಗಮ್ಮ ಗುಡಿ ದೇವಾಲಯ ತೆರವಿಗೆ ಮುಂದಾದ ಬಿಬಿಎಂಪಿ ಅಧಿಕಾರಿಗಳ ಕ್ರಮಕ್ಕೆ ಶನಿವಾರ ಮತ್ತೆ ಸ್ಥಳೀಯರು ಹಾಗೂ ದೇವಾಲಯದ ಭಕ್ತರು ತೀವ್ರ ವಿರೋಧ ವ್ಯಕ್ತಪಡಿದ ಘಟನೆ ನಡೆಯಿತು. ಇದರಿಂದ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಲಾಗದೆ ವಾಪಸ್ಸಾದರು.

ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿ ಕಟ್ಟಡಲಾಗಿರುವ ಯಾವುದೇ ರೀತಿ ಕಟ್ಟಡ, ದೇವಾಲಯಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಪಟ್ಟಿಸಿದ್ಧಪಡಿಸಿಕೊಂಡು ಕಾರ್ಯಾಚರಣೆ ನಡೆಸಿರುವ ಪಾಲಿಕೆ ಅಧಿಕಾರಿಗಳು, ಇಲ್ಲಿನ ಗಂಗಮ್ಮ ದೇವಾಲಯ ಕೂಡ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಕೆಲ ದಿನಗಳ ಹಿಂದೆಯೇ ತೆರವಿಗೆ ಮುಂದಾಗಿದ್ದರು.

ಬೆಂಗಳೂರಿಗರಿಗೆ ಆಸ್ತಿ ತೆರಿಗೆ ಹೆಚ್ಚಳದ ಬಿಸಿ..!

ಆಗ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು, ವ್ಯಾಪಾರಿಗಳು ಹಾಗೂ ಭಕ್ತರು ಪ್ರತಿಭಟನೆ ನಡೆಸಿದ್ದರು. ಬಳಿಕ 10 ದಿನಗಳ ಕಾಲಾವಕಾಶ ನೀಡಿ ಅಧಿಕಾರಿಗಳು ವಾಪಸ್ಸಾಗಿದ್ದರು. ಅದರಂತೆ ಶನಿವಾರ ಮತ್ತೆ ದೇವಾಲಯ ತೆರವಿಗೆ ಮುಂದಾದಾಗ ಮತ್ತೆ ಸ್ಥಳೀಯರು ದೇವಾಲಯದ ಸುತ್ತ ಮಾನವ ಸರಪಳಿ ಸೃಷ್ಟಿಸಿ ವಿರೋಧ ವ್ಯಕ್ತಪಡಿಸಿದರು.

ಪ್ರಾಣ ಕೊಟ್ಟರೂ ಕೊಡುತ್ತೇವೆ ಆದರೆ, ದೇವಾಲಯ ತೆರವಿಗೆ ಬಿಡುವುದಿಲ್ಲ. ಸರ್ಕಾರ ಈಗ ಇದು ಸಾರ್ವಜನಿಕ ಸ್ಥಳದಲ್ಲಿದೆ ಎಂದು ತೆರವಿಗೆ ಮುಂದಾಗುವ ಬದಲು ದೇವಾಲಯ ಕಟ್ಟುವಾಗ ಏನು ಮಾಡುತ್ತಿತ್ತು. ಆಗ ಗೊತ್ತಿರಲಿಲ್ಲವಾ? ಈಗ ಸ್ಥಳೀಯರು ಹಣ ವೆಚ್ಚ ಮಾಡಿ ದೇವಾಲಯ ನಿರ್ಮಿಸಿದ್ದೇವೆ. ಸರ್ಕಾರ ಬೇಕಿದ್ದರೆ ಮುಜರಾಯಿ ಇಲಾಖೆಗೆ ಈ ದೇವಾಲಯವನ್ನು ಪಡೆದುಕೊಂಡು ಮುನ್ನಡೆಸಲಿ ಆದರೆ, ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

click me!