ಕೊರೋನಾ ನಿಗ್ರಹಕ್ಕೆ ರಾತ್ರಿ ಮಠದ ಕುದುರೆ ಬಿಟ್ಟ ಜನ!

Kannadaprabha News   | Asianet News
Published : May 23, 2021, 08:01 AM ISTUpdated : May 23, 2021, 08:50 AM IST
ಕೊರೋನಾ ನಿಗ್ರಹಕ್ಕೆ ರಾತ್ರಿ  ಮಠದ ಕುದುರೆ ಬಿಟ್ಟ ಜನ!

ಸಾರಾಂಶ

ಕೊರೋನಾ ಮಹಾಮಾರಿ ಹೊಡೆದೋಡಿಸಲು ಗ್ರಾಮದಲ್ಲಿ ಮಠದ ಕುದುರೆ ಬಿಟ್ಟ ಜನ  ದೇವರ ಮೊರೆಹೋಗಿರುವ ವಿಶಿಷ್ಟ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಈ ಘಟನೆ  

ಗೋಕಾಕ (ಮೇ.23): ಕೊರೋನಾ ಮಹಾಮಾರಿ ಹೊಡೆದೋಡಿಸಲು ಜನರು ಗ್ರಾಮದಲ್ಲಿ ಮಠದ ಕುದುರೆ ಬಿಡುವ ಮೂಲಕ ದೇವರ ಮೊರೆಹೋಗಿರುವ ವಿಶಿಷ್ಟಘಟನೆ ಬುಧವಾರ ಜರುಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತಿಹಾಸ ಪ್ರಸಿದ್ಧ ಸುಕ್ಷೇತ್ರವಾದ (ಕೊಣ್ಣೂರು) ಮರಡಿಮಠದಲ್ಲಿ ಶ್ರೀ ಪವಾಡೇಶ್ವರ ಮಹಾಸ್ವಾಮೀಜಿ ಅವರು ಮಾರ್ಗದರ್ಶನದಂತೆ ಗ್ರಾಮದ ಜನತೆ ಕಾಡಸಿದ್ಧೇಶ್ವರ ಸ್ವಾಮಿ ಅವರ ಕುದುರೆಯನ್ನು ಬುಧವಾರ ಮಧ್ಯರಾತ್ರಿ 12ರಿಂದ ಗುರುವಾರ ಬೆಳಗ್ಗೆ 4ರವರೆಗೆ ಗ್ರಾಮದಲ್ಲಿ ಸಂಚರಿಸಲು ಬಿಟ್ಟಿದ್ದರು. ಈ ದೈವ ಕುದುರೆಯಿಂದ ಗ್ರಾಮದ ಜನತೆ ಕೊರೋನಾ ಮಹಾಮಾರಿಯಿಂದ ರಕ್ಷಣೆಗೆ ಮೊರೆಹೋಗಿದ್ದಾರೆ.

ಎರಡು ವಾರ ಒಂದೇ ಮಾಸ್ಕ್ ಬಳಕೆ, ಬ್ಲ್ಯಾಕ್‌ ಫಂಗಸ್‌ಗೆ ಆಹ್ವಾನ! .

ಈಗ್ಗೆ 51 ವರ್ಷಗಳ ಹಿಂದೆಯೂ ಮಲೇರಿಯಾ, ಪ್ಲೇಗ್‌ ಹಾಗೂ ಕಾಲರಾದಂತಹ ಸಾಂಕ್ರಾಮಿಕ ರೋಗಳು ಹರಡಿದ ಸಮಯದಲ್ಲಿ ಮರಡಿಮಠದ ಕಾಡಸಿದ್ಧೇಶ್ವರ ಸ್ವಾಮಿ ಅವರು ಕಟ್ಟಿದ್ದ ಕುದರೆಯನ್ನು ಮಧ್ಯರಾತ್ರಿ ಗ್ರಾಮದಾದ್ಯಂತ ಸುತ್ತಾಡಲು ಬಿಟ್ಟಿದ್ದರಂತೆ.

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು