ನುಡಿ ಜಾತ್ರೆ: ಪುಸ್ತಕ ಮಾರಾಟ ಸ್ವಲ್ಪ ಸಿಹಿ, ಸ್ವಲ್ಪ ಕಹಿ

By Kannadaprabha News  |  First Published Feb 6, 2020, 9:23 AM IST

ಧೂಳು, ಬಿಸಿಲಿಲ್ಲದೆ ವ್ಯಾಪಾರಿಗಳು ಖುಷ್‌| ಮಾರಾಟ ಪರವಾಗಿಲ್ಲ, ಜನ ಕಡಿಮೆ|ಕಳೆದ ಸಮ್ಮೇಳನಕ್ಕೆ ಹೋಲಿಸಿದರೆ ಪುಸ್ತಕ ಮಾರಾಟ ವ್ಯವಸ್ಥೆ ತುಂಬಾ ಅಚ್ಚುಕಟ್ಟು|


ಕಲಬುರಗಿ(ಫೆ.06): ಅಕ್ಷರ ಜಾತ್ರೆಯ ಮೊದಲ ದನ ಉದ್ಘಾಟನಾ ಸಮಾರಂಭಕ್ಕೆ ಹರಿದು ಬಂದ ಜನಸಾಗರ ಪುಸ್ತಕ ಮಾರಾಟಗಾರರ ಪಾಲಿಗೆ ಖುಷಿ ಕೊಟ್ಟ ಸಂಗತಿಯಾದರೆ, ಮಧ್ಯಾಹ್ನದ ಮೇಲೆ ಜನ ಅಷ್ಟಾಗಿ ಪುಸ್ತಕ ಮಳಿಗೆಗಳ ಕಡೆಗೆ ಬರದೇ ಇದ್ದಿದ್ದೇ ಬೇಸರಕ್ಕೆ ಕಾರಣವಾಯಿತು.

ಕಲಬುರಗಿ ಸಾಹಿತ್ಯ ಸಮ್ಮೇಳನದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Latest Videos

undefined

ಈ ಬಾರಿ ಸಮ್ಮೇಳದಲ್ಲಿ ಮೂರು ಪುಸ್ತಕ ಮಳಿಗೆಗಳ ವಿಭಾಗಗಳು ಇದ್ದವು. ಅದರಲ್ಲಿ ಬಹುತೇಕ ದೊಡ್ಡ ಪುಸ್ತಕ ಮಾರಾಟಗಾರರ ಮಳಿಗೆಗೆಳು ಒಂದನೇ ವಿಭಾಗದಲ್ಲಿ ಇದ್ದವು. ಆ ವಿಭಾಗಕ್ಕೆ ಜನ ಸ್ವಲ್ಪ ಜಾಸ್ತಿ ಬಂದರು. ಉಳಿದೆರಡು ವಿಭಾಗಗಳ ಕಡೆಗೆ ಜನರ ಗಮನ ಕಡಿಮೆಯಾಯಿತು ಅನ್ನುವುದು ಅನೇಕರಿಗೆ ಕೊಂಚ ಬೇಸರಕ್ಕೆ ಕಾರಣವಾಯಿತು. ಕೆಲವು ಅಂಗಡಿಗಳು ಒಳ್ಳೆಯ ಮಾರಾಟ ದಾಖಲಿಸಿದರೆ ಅನೇಕರು ಪರವಾಗಿಲ್ಲ ಎಂಬಲ್ಲಿಗೆ ಮಾತು ಮುಗಿಸಿದರು.

ಅಚ್ಚುಕಟ್ಟಾದ ಪುಸ್ತಕ ಮಳಿಗೆಗಳು:

ಕಳೆದ ಸಮ್ಮೇಳನಕ್ಕೆ ಹೋಲಿಸಿದರೆ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ. ಜನವೂ ಜಾಸ್ತಿಯೇ ಬಂದಿದ್ದಾರೆ. ಆದರೆ ಪುಸ್ತಕದ ಮಳಿಗೆಗಳಿಗೆ ಜಾಸ್ತಿ ಜನ ಬರಬೇಕು ಅನ್ನುವ ನಿರೀಕ್ಷೆ ಜಾರಿಯಲ್ಲಿದೆ. ಎರಡನೇ ದಿನ ಜನ ಬರಬಹುದು ಎಂಬ ನಂಬಿಕೆ ಪುಸ್ತಕ ಮಳಿಗೆಯ ಬಂಧುಗಳಲ್ಲಿದೆ.

ಕಲಬುರಗಿ ಸಾಹಿತ್ಯ ಸಮ್ಮೇಳನ: ನಿರೀಕ್ಷೆಗೂ ಮೀರಿ ಜನ, ಊಟಕ್ಕೆ ನೂಕುನುಗ್ಗಲು

ಈ ಸಲ ಬಹಳ ಅಚ್ಚುಕಟ್ಟಾಗಿ ಪುಸ್ತಕ ಮಳಿಗೆಗಳನ್ನು ಹಾಕಿಕೊಟ್ಟಿದ್ದಾರೆ. ಸ್ವಲ್ಪವೂ ಧೂಳಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಜನರು ಬಂದೇ ಬರುತ್ತಾರೆ. ಅವರು ಪುಸ್ತಕ ಮಳಿಗೆಗೂ ಬರುತ್ತಾರೆ ಎಂದು ಸಾವಣ್ಣ ಪ್ರಕಾಶನದ ಜಮೀಲ… ಹೇಳಿದರು. ಶ್ರೀನಿಧಿ ಪಬ್ಲಿಕೇಶನ್ನಿನ ನವೀನ್‌ ಪುರುಷೋತ್ತಮ… ಕೂಡ ಪುಸ್ತಕ ಮಳಿಗೆಗಳ ಅಚ್ಚುಕಟ್ಟುತನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಮಲೆಯಾಳಿಗಳು, ತಮಿಳರಂತೆ ಭಾಷಾಪ್ರೇಮ ಅನುಸರಿಸೋಣ: ಬಳಿಗಾರ

click me!