ಕಲಬುರಗಿ ಅಕ್ಷರ ಜಾತ್ರೆ| ಊಟಕ್ಕಾಗಿ ಜನರ ಪರದಾಟ| ನಿರೀಕ್ಷೆಗೂ ಮೀರಿ ಸೇರಿದ ಜನ| ಬ್ಯಾರಿಕೇಡ್ ಮುರಿದು ಒಳನುಗ್ಗಿದ ಜನತೆ|
ಕಲಬುರಗಿ(ಫೆ.06): ನುಡಿಹಬ್ಬದ ಮೊದಲ ದಿನ ಆಯೋಜಕರ ನಿರೀಕ್ಷೆ ಮೀರಿ ಜನ ಸೇರಿದ್ದರಿಂದ ಕೆಲಹೊತ್ತು ಊಟಕ್ಕಾಗಿ ಜನ ಪರದಾಡುವಂತಾಯಿತು.
ಕಲಬುರಗಿ ಸಾಹಿತ್ಯ ಸಮ್ಮೇಳನದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸುಮಾರು 1 ಲಕ್ಷಕ್ಕಿಂತ ಅಧಿಕ ಮಂದಿ ಬಂದರೂ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುವುದೆಂದು ಆಹಾರ ಸಮಿತಿ ಮೊದಲೇ ತಿಳಿಸಿತ್ತು. ಅದಕ್ಕೂ ಮೀರಿ ಜನ ಬಂದಿದ್ದರಿಂದ ಮಧ್ಯಾಹ್ನ 3 ಗಂಟೆವರೆಗೆ ಊಟದ ಕೌಂಟರ್‌ಗಳಲ್ಲಿ ದಟ್ಟಣೆಯಿತ್ತು. 1ರಿಂದ 200 ಕೌಂಟರ್‌ಗಳು, ವಿಐಪಿ, ಮಿಡಿಯಾ ಹೀಗೆ ವಿವಿಧೆ ಕೌಂಟರ್‌ಗಳು ತೆರೆದಿದ್ದರೂ ಮಧ್ಯಾಹ್ನ 3ರವರೆಗೆ ಊಟಕ್ಕಾಗಿ ಜನಸಂದಣಿ ತುಂಬಿತ್ತು.
ಮಲೆಯಾಳಿಗಳು, ತಮಿಳರಂತೆ ಭಾಷಾಪ್ರೇಮ ಅನುಸರಿಸೋಣ: ಬಳಿಗಾರ
ಕೆಲವರು ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಿದ್ದರಿಂದ ನಿಯಂತ್ರಿಸುವುದು ಪೊಲೀಸರಿಗೂ ಕಷ್ಟವಾಯಿತು. ಮೊದಲ ದಿನ ಮೋತಿಚೂರ್ ಲಾಡು, ಜೋಳ, ಸಜ್ಜೆ ರೊಟ್ಟಿ, ಬದನೆಕಾಯಿ, ಕಾಳುಪಲ್ಲೆ, ಅನ್ನ ಸಾಂಬಾರ್ ವ್ಯವಸ್ಥೆ ಮಾಡಲಾಗಿತ್ತು. ಅನ್ನ ಸೇರಿದಂತೆ ಉಳಿದೆಲ್ಲಾ ಅಡುಗೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಅಡಿಕೆ ಪ್ಲೇಟ್ ಬಳಸಿದ್ದರಿಂದ ಸಾವರ್ಜನಿಕರಿಗೂ ಯಾವುದೇ ತೊಂದರೆಯಾಗಲಿಲ್ಲ.