ಕರ್ನಾಟಕ ಒನ್ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆ: ಜನರ ಪರದಾಟ

By Kannadaprabha News  |  First Published Dec 14, 2023, 2:00 AM IST

ಪದೇ ಪದೇ ಸರ್ವರ್‌ ಸಮಸ್ಯೆ ಎದುರಾಗುವ ಕಾರಣ ಗ್ರಾಮ ಮತ್ತು ಕರ್ನಾಟಕ ಒನ್‌ರಲ್ಲಿ ದಾಖಲೆ ನೋಂದಾಯಿಸಲು ಬಂದ ಗ್ರಾಮೀಣ ಜನತೆ ಹೈರಾಣಾಗಿದ್ದಾರೆ. ಎಸ್‌ಸಿ, ಎಸ್‌ಟಿ ಕಾರ್ಪೋರೇಷನ್‌ ನಿಂದ ಸೌಲಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಇದೇ ಡಿ.15 ಕೊನೆಯ ದಿನವಾಗಿದ್ದು, ಸರ್ವರ್‌ ಸಮಸ್ಯೆಯಿಂದ ಸಾವಿರಾರು ಸಂಖ್ಯೆಯ ಗ್ರಾಮೀಣ ಜನತೆ ನಿಗಮಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. 


ಪಾವಗಡ(ಡಿ.14): ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಅರ್ಜಿ ಕರೆದಿದ್ದು, ಗ್ರಾಮೀಣ ಭಾಗದ ಗ್ರಾಮ ಒನ್ ಹಾಗೂ ಪಟ್ಟಣದ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆ ತಲೆದೂರಿದೆ. ಸುಮಾರು 10 ದಿನಗಳಿಂದ ಸರ್ವರ್‌ ಸ್ಥಗಿತವಾದ ಕಾರಣ ನಿತ್ಯ ಸಾವಿರಾರು ಗ್ರಾಮೀಣ ಜನರು ಪರದಾಡುವಂತಾಗಿದೆ.

ಪ್ರಸಕ್ತ ಸಾಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಯ ಸೌಲಭ್ಯ ಕಲ್ಪಿಸಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಕರೆದಿದ್ದು, ಸೌಲಸೌಲಭ್ಯದ ದಾಖಲೆಗಳನ್ನು ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಈ ಸಾಲಸೌಲಭ್ಯದ ಅಗತ್ಯ ದಾಖಲೆಗಳ ಸಲ್ಲಿಕೆ ಗ್ರಾಮ ಮಟ್ಟದಲ್ಲಿ ಸಂಬಂಧಪಟ್ಟ ಗ್ರಾಪಂನ ಗ್ರಾಮ ಒನ್‌ ಹಾಗೂ ನಗರ ವ್ಯಾಪ್ತಿಯ ಫಲಾಭವಿಗಳು ಕರ್ನಾಟಕ ಒನ್‌ನ ಕಂಪ್ಯೂಟರ್‌ ಸೆಂಟರ್‌ ಮೂಲಕ ದಾಖಲೆ ಸಲ್ಲಿಸುವಂತ ಸರ್ಕಾರ ತಿಳಿಸಿದೆ. ಇದೇ ಡಿ.15ರ ಸಂಜೆ ಅಂತಿಮ ಗಡವು ವಿಧಿಸಿದ್ದು ನಿತ್ಯ ಸರ್ವರ್‌ ಸಮಸ್ಯೆಯಿಂದ ಅಗತ್ಯ ದಾಖಲೆ ನಮೂದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಲಸೌಲಭ್ಯಕ್ಕಾಗಿ ಕಾಯುತ್ತಿರುವ ಗ್ರಾಮೀಣ ಫಲಾನುಭವಿಗಳಲ್ಲಿ ಆತಂಕ ಮನೆಮಾಡಿದೆ.

Tap to resize

Latest Videos

undefined

ಉದ್ಘಾಟನೆ ಕಾಣದ ನೂತನ ಪಾಸ್ ಪೋರ್ಟ್ ಸೇವಾ ಕೇಂದ್ರ

ರಾಜ್ಯ ಸರ್ಕಾರ ಆದೇಶ ಜಾರಿ ಪಡಿಸಿದ್ದು ಅಂಬೇಡ್ಕರ್‌, ವಾಲ್ಮೀಕಿ, ಅದಿಜಾಂಬವ, ಬಂಜಾರ ಹಾಗೂ ಇತರೆ ಜಿಲ್ಲಾ ನಿಗಮಗಳಿಂದ ಸಹಾಯಧನದಲ್ಲಿ ಸಾಲಸೌಲಭ್ಯ ಕಲ್ಲಿಸಲು ನಗರ ಹಾಗೂ ಗ್ರಾಮೀಣ ಜನತೆಯಿಂದ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಕರೆದಿದ್ದಾರೆ. ಇದರ ಜತೆ ಕೇಂದ್ರದ ವಿಶ್ವಕರ್ಮ ಯೋಜನೆ ಅಡಿ ಅರ್ಜಿ ಸಹ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ನಿಗಮ ಸಾಲಸೌಲಭ್ಯ ಹಾಗೂ ಕೇಂದ್ರದ ವಿಶ್ವಕರ್ಮ ಯೋಜನೆಯ ಅರ್ಜಿ ಸಲ್ಲಿಸಲು ಗ್ರಾಮ ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ನಿತ್ಯ ನೂಕುನುಗ್ಗಲು ಏರ್ಪಾಟ್ಟಿದೆ.

ಮೈಸೂರು : ತಲಕಾಡಿನ ಕುಡಿಯುವ ನೀರು ಸರಬರಾಜು ವ್ಯವಸ್ಥೆಯ ಪರಿಶೀಲನೆ

ಪದೇ ಪದೇ ಸರ್ವರ್‌ ಸಮಸ್ಯೆ ಎದುರಾಗುವ ಕಾರಣ ಗ್ರಾಮ ಮತ್ತು ಕರ್ನಾಟಕ ಒನ್‌ರಲ್ಲಿ ದಾಖಲೆ ನೋಂದಾಯಿಸಲು ಬಂದ ಗ್ರಾಮೀಣ ಜನತೆ ಹೈರಾಣಾಗಿದ್ದಾರೆ. ಎಸ್‌ಸಿ, ಎಸ್‌ಟಿ ಕಾರ್ಪೋರೇಷನ್‌ ನಿಂದ ಸೌಲಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಇದೇ ಡಿ.15 ಕೊನೆಯ ದಿನವಾಗಿದ್ದು, ಸರ್ವರ್‌ ಸಮಸ್ಯೆಯಿಂದ ಸಾವಿರಾರು ಸಂಖ್ಯೆಯ ಗ್ರಾಮೀಣ ಜನತೆ ನಿಗಮಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಯಾವುದೇ ಷರತ್‌ ವಿಧಿಸದೇ ಯಾವುದೇ ಕಂಪ್ಯೂಟರ್‌ ಸೆಂಟರ್‌ನಿಂದ ಅಗತ್ಯ ದಾಖಲೆ ಸಲ್ಲಿಸಿದರೆ ಸಾಕು ಸಾಲಸೌಲಭ್ಯದ ನೋಂದಣಿ ದಾಖಲೆಯಾಗುತ್ತಿತ್ತು.

ಬಳಿಕ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ ಆರ್ಹರಿಗೆ ನಿಗಮಗಳ ಸಹಾಯ ಧನದ ಸೌಲ ನೀಡಲಾಗುತ್ತಿತ್ತು. ಆದರೆ ಆಗ ನಿಯಮ ಬದಲಾಯಿಸಿ ಗ್ರಾಮ ಒನ್‌ ಮತ್ತು ಕರ್ನಾಟಕ ಒನ್‌ ಸೆಂಟರ್‌ನಲ್ಲಿಯೇ ಸಾಲಸೌಲಭ್ಯದ ದಾಖಲೆ ಸಲ್ಲಿಸಲು ಸರ್ಕಾರ ಆದೇಶಿಸಿದ ಪರಿಣಾಮ ಸರ್ವರ್‌ ಸಮಸ್ಯೆ ಕಾಡುತ್ತಿದೆ. ಇದುವರೆವಿಗೂ ಗ್ರಾಮೀಣ ಪ್ರದೇಶದ ಬಹುತೇಕ ಜನತೆ ನಿಗಮಗಳ ಸಾಲ ಸೌಲಭ್ಯಕ್ಕೆ ದಾಖಲೆ ನೋಂದಯಿಸಲು ಸಾಧ್ಯವಾಗಿಲ್ಲ. ಸರ್ಕಾರ ನಿಗದಿಪಡಿಸಿದ್ದ ಡಿ.15ರ ಅಂತಿಮ ಗಡವು ವಾಪಸ್ಸು ಪಡೆಯುವ ಮೂಲಕ ನಿಗಮಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತಾರಿಸುವಂತೆ ಆನೇಕ ಮಂದಿ ಗ್ರಾಮೀಣ ಬಡಜನತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

click me!