ಕೊರೋನಾ ಓಡಿಸಲು ದೈವಕ್ಕೆ ಶರಣಾದ ಚಿತ್ರದುರ್ಗ ಜನರು

Kannadaprabha News   | Asianet News
Published : Jun 06, 2021, 07:21 AM IST
ಕೊರೋನಾ ಓಡಿಸಲು ದೈವಕ್ಕೆ ಶರಣಾದ ಚಿತ್ರದುರ್ಗ ಜನರು

ಸಾರಾಂಶ

* ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಗ್ರಾಮದಲ್ಲಿ ಕೊರೋನಮ್ಮನ ಹಬ್ಬ * ಮನೆಯಲ್ಲಿ ಪೂಜಾಕಾರ್ಯ ಮುಗಿದ ನಂತರ ದೈವಕ್ಕೆ ಪ್ರಾರ್ಥನೆ  * ಪೂಜೆ ಬಳಿಕ ಸಂಕಟ ಗಡಿ ಪಾರಾಯಿತೆನ್ನುವುದು ಜನರ ನಂಬಿಕೆ 

ಚಿತ್ರದುರ್ಗ(ಜೂ.06): ಜಗತ್ತಿಗೇ ಆವರಿಸಿರುವ ಕೋವಿಡ್‌ ಭಯ ಹಿಮ್ಮೆಟ್ಟಿಸಲು ಎಲ್ಲೆಡೆ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಕೆಲಸ ಭರದಿಂದ ನಡೆಯುತ್ತಿದೆ. 

ಅದರ ಬೆನ್ನಲ್ಲೇ, ಚಿತ್ರದುರ್ಗದ ಸಿರಿಗೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕೊರೋನಮ್ಮನ ಹಬ್ಬ ಆಚರಿಸಿ ದೈವಕ್ಕೆ ಶರಣಾಗಿರುವ ವಿಲಕ್ಷಣಘಟನೆ ನಡೆದಿದೆ.

ಚಿತ್ರದುರ್ಗ: ತರಳಬಾಳು ಮಠದಿಂದ ಕೋವಿಡ್ ಕೇರ್ ಸೆಂಟರ್‌ ಉದ್ಘಾಟನೆ

ಮಣ್ಣಿನಿಂದ ತಯಾರಿಸಿದ ಸಣ್ಣಕುಡಿಕೆಗೆ ಅಲಂಕರಿಸಿ, ಮನೆಯಲ್ಲಿ ಪೂಜಾಕಾರ್ಯ ಮುಗಿದ ನಂತರ ದೈವಕ್ಕೆ ಪ್ರಾರ್ಥನೆ ಸಲ್ಲಿಸಿ, ಮನೆಯಿಂದ ಬೀಳ್ಕೊಡುವುದು ಸಂಪ್ರದಾಯ. ಹೀಗೆ ಮನೆಯಿಂದ ಹೊರಟ ದೈವವನ್ನು ಊರ ಹೊರಗೆ ಗ್ರಾಮದ ಗಡಿಯಲ್ಲಿ ಮೂರು ದಾರಿಗಳು ಸೇರುವ ಜಾಗಕ್ಕೆ ಸೇರಿಸಿ ಬರಲಾಗುತ್ತದೆ. ಅಲ್ಲಿಗೆ ಬಂದ ಸಂಕಟ ಗಡಿ ಪಾರಾಯಿತೆನ್ನುವುದು ಜನರ ನಂಬಿಕೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!