* ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದ ಘಟನೆ
* ಮನೆಯ ಹಿಂದಿನ ಬಾಗಿಲಿನ ಮೂಲಕ ಮನೆಯೊಳಗೆ ನುಗ್ಗಿದ ಚಿರತೆ
* ಮಗುವನ್ನೇ ದಿಟ್ಟಿಸಿ ನೋಡುತ್ತಿದ್ದ ಚಿರತೆ
ಉತ್ತರಕನ್ನಡ(ಅ.10): ಮನೆಯೊಳಗೆ ನುಗ್ಗಿದ ಚಿರತೆಯೊಂದು ಪುಟ್ಟ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಘಟನೆ ಉತ್ತರ ಕನ್ನಡ(Uttara Kannada) ಜಿಲ್ಲೆಯ ಕುಮಟಾ(Kumta) ತಾಲೂಕಿನ ಬರ್ಗಿ ಗ್ರಾಮದಲ್ಲಿ ನಿನ್ನೆ(ಶನಿವಾರ) ನಡೆದಿದೆ.
ನಿನ್ನೆ ರಾತ್ರಿ ಸುಮಾರು 9.30ರ ವೇಳೆಗೆ ನಾರಾಯಣ ನಾಯ್ಕ ಮನೆಯ ಸದಸ್ಯರು ಊಟಕ್ಕೆಂದು ಕುಳಿತಿದ್ದರು. ನಿರ್ಮಾಣ ಹಂತದಲ್ಲಿದ್ದ ಮನೆಯೊಳಗೆ ಮಕ್ಕಳು ಆಟವಾಡುತ್ತಿದ್ದರು, ಹಿರಿಯರು ಊಟ ಮಾಡುತ್ತಿದ್ದರು. ಈ ವೇಳೆ ಮನೆಯ ಹಿಂದಿನ ಬಾಗಿಲಿನ ಮೂಲಕ ಮನೆಯೊಳಗೆ ಚಿರತೆ(Leopard) ನುಗ್ಗಿದೆ. ಈ ವೇಳೆ ಚಿರತೆಯನ್ನು ಕಂಡು ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದರು.
Uttara Kannada| 15 ದಿನದಲ್ಲಿ ನಾಲ್ಕು ಹಸು ಚಿರತೆಗೆ ಬಲಿ, ಆತಂಕದಲ್ಲಿ ಜನತೆ
ಚಿರತೆ ಮಗುವನ್ನೇ ದಿಟ್ಟಿಸಿ ನೋಡುತ್ತಿತ್ತು. ಹೀಗಾಗಿ ಚಿರತೆಯನ್ನ ಕಂಡು ಮಗುವನ್ನು ಹೊತ್ತು ಕುಟುಂಬಸ್ಥರು ಹೊರಗಡೆ ಓಡಿ ಬಂದಿದ್ದಾರೆ. ಮನೆಯ ಹಿರಿಯರನ್ನು ಕಂಡ ಕೂಡಲೇ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ.
ಚಿರತೆ ಬಂದಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ(Forest Department) ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ತಡವಾಗಿ ಸ್ಥಳಕ್ಕೆ ಆಗಮಿಸಿದ್ದರು. ಚಿರತೆಯನ್ನ ಕಂಡ ಬರ್ಗಿ ಗ್ರಾಮದಲ್ಲಿ ಆತಂಕ ಮನೆಮಾಡಿದೆ. ಕಳೆದ ಕೆಲವು ದಿನಗಳಿಂದ ಚಿರತೆ ನಿರಂತರವಾಗಿ ಗ್ರಾಮಗಳತ್ತ(Villages) ಬರುತ್ತಿದೆ. ಇದರಿಂದ ಜನರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.