ಅನ್ಯಕೋಮಿನ ಯುವತಿಯರ ಜೊತೆ ವ್ಯಕ್ತಿ ಪ್ರಯಾಣ : ನೈತಿಕ ಪೊಲೀಸ್‌ಗಿರಿ ಮಾಡಿದವರ ಅರೆಸ್ಟ್

Kannadaprabha News   | Asianet News
Published : Oct 10, 2021, 12:34 PM ISTUpdated : Oct 10, 2021, 01:00 PM IST
ಅನ್ಯಕೋಮಿನ ಯುವತಿಯರ ಜೊತೆ ವ್ಯಕ್ತಿ ಪ್ರಯಾಣ : ನೈತಿಕ ಪೊಲೀಸ್‌ಗಿರಿ ಮಾಡಿದವರ ಅರೆಸ್ಟ್

ಸಾರಾಂಶ

ಮಂಗಳೂರಿನಲ್ಲಿ ಮತ್ತೆ ವಾಹನ ಅಡ್ಡಗಟ್ಟಿ ನೈತಿಕ ಪೊಲೀಸರ ಅಟ್ಟಹಾಸ ಮಂಗಳೂರು ಹೊರವಲಯದ ಮೂಡಬಿದ್ರೆ ಬಳಿ ಹಿಂದೂ ಸಂಘಟನೆ ಮುಖಂಡರಿಂದ ನೈತಿಕ ಪೊಲೀಸ್‌ ಗಿರಿ 

ಮಂಗಳೂರು (ಅ.10):   ಮಂಗಳೂರಿನಲ್ಲಿ (Mangaluru) ಮತ್ತೆ ವಾಹನ (Vehicle) ಅಡ್ಡಗಟ್ಟಿ ನೈತಿಕ ಪೊಲೀಸರ ಅಟ್ಟಹಾಸ ಮೆರೆಯಲಾಗಿದೆ.  

ಮಂಗಳೂರು ಹೊರವಲಯದ ಮೂಡಬಿದ್ರೆ (Moodbidri) ಬಳಿ ಹಿಂದೂ ಸಂಘಟನೆ (Hindu Organisation) ಮುಖಂಡರಿಂದ ನೈತಿಕ ಪೊಲೀಸ್‌ ಗಿರಿ (moral policing) ನಡೆದಿದೆ.  ನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ಹಿಂದೂ ಕಾರ್ಯಕರ್ತರನ್ನು ತಕ್ಷಣ ಪ್ರಕರಣ ದಾಖಲಿಸಿ ಮೂಡಬಿದ್ರೆ ಪೊಲೀಸರು (Police) ಇಂದು ವಶಕ್ಕೆ ಪಡೆದಿದ್ದಾರೆ. 

ಆಲ್ಟೋ ಕಾರಿನಲ್ಲಿ (Alto Car) ಅನ್ಯಕೋಮಿನ ಇಬ್ಬರು ಯುವತಿಯರ ಜೊತೆ ವ್ಯಕ್ತಿಯೋರ್ವ ಸಂಚರಿಸುತ್ತಿದ್ದ ಹಿನ್ನೆಲೆ ಕಾರು ತಡೆದ ಹಿಂದೂ ಕಾರ್ಯಕರ್ತರು,  ಯುವತಿಯರನ್ನ ಪ್ರಶ್ನಿಸಿ ಅಗೌರವ ತರುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಬೆಂಗಳೂರು ಆಯ್ತು ಹೈದರಾಬಾದ್.. ಮುಸ್ಲಿಂ ಯುವತಿಗೆ ಡ್ರಾಪ್ ಕೊಡ್ತಿದ್ದವನ ಮೇಲೆ ದಾಳಿ

ಸಮಿತ್ ರಾಜ್(36) ಮತ್ತು ಸಂದೀಪ್ ಪೂಜಾರಿ (34) ಎಂಬ ಇಬ್ಬರು ಸದ್ಯ ಬಂಧಿತರಾಗಿದ್ದು, ಆಲ್ಟೋ ಕಾರಿನಲ್ಲಿ ಪತ್ನಿ (wife) ಮತ್ತು ಇಬ್ಬರು ಅನ್ಯಕೋಮಿನ ಯುವತಿಯರ ಜೊತೆ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪ್ರಶ್ನೆ ಮಾಡಿ ಅಗೌರವದ ರೀತಿಯಲ್ಲಿ ವರ್ತಿಸಿದ್ದರಿಂದ ಬಂಧನಕ್ಕೆ (Arrest) ಒಳಪಡಿಸಲಾಗಿದೆ.  

ಉಡುಪಿ (Udupi) ಜಿಲ್ಲೆಯ ಕಾರ್ಕಳ ಮೂಲದ ವ್ಯಕ್ತಿ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ಹಿಂದೂ ಸಂಘಟನೆ ಮುಖಂಡರು  ನೈತಿಕ ಪೊಲೀಸ್‌ ಗಿರಿ ಮೆರೆದಿದ್ದಾರೆ ಎನ್ನಲಾಗಿದೆ. 

ಸದ್ಯ ಇಬ್ಬರ ಬಂಧನವಾಗಿದ್ದು ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

ಕೆಲ  ಗಂಟೆಯಲ್ಲೇ ರಿಲೀಸ್

 

ಮಂಗಳೂರಿನ (Mangaluru) ಸುರತ್ಕಲ್ ನಲ್ಲಿ ನೈತಿಕ ಪೊಲೀಸ್ ಗಿರಿ(Moral policing) ಪ್ರಕರಣಕ್ಕೆ ಸಂಬಂದಿಸಿ ಒಂದಷ್ಟು ಪ್ರಶ್ನೆಗಳು ಎದ್ದಿವೆ ಪೊಲೀಸ್ ಅಧಿಕಾರಿ ಸಮ್ಮುಖದಲ್ಲೇ ಗೂಂಡಾಗಿರಿ ನಡೆದ್ರೂ ಮೃಧು ಧೋರಣೆ ತಾಳಿದ್ರಾ ಪೊಲೀಸರು ಎಂಬ ಪ್ರಶ್ನೆ  ಎದ್ದಿದೆ. ಮಂಗಳೂರಿನ ಪೊಲೀಸರು ಸಾಫ್ಟ್ ಕಾರ್ನರ್ ತೋರಿದ್ರಾ?

ಬಂಧಿತ ಐವರು ಆರೋಪಿಗಳು ಠಾಣಾ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಬಂಧನವಾದ ಕೆಲವೇ ಗಂಟೆಗಳಲ್ಲಿ ಆರೋಪಗಳನ್ನು ಬಂಧಮುಕ್ತಗೊಳಿಸಲಾಗಿತ್ತು. ಆರೋಪಿಗಳಾದ ಪ್ರೀತಂ ಶೆಟ್ಟಿ, ಅರ್ಶಿತ್, ಶ್ರೀನಿವಾಸ, ರಾಕೇಶ್, ಅಭಿಷೇಕ್ ಬಿಡುಗಡೆಯಾಗಿದ್ದಾರೆ. ಐಪಿಸಿ 341, 323, 504ರಡಿ ಪ್ರಕರಣ ದಾಖಲಿಸಿ ಠಾಣಾ ಜಾಮೀನಿನಡಿ ಬಿಡುಗಡೆ ಮಾಡಲಾಗಿತ್ತು.

ಮಂಗಳೂರಿನಲ್ಲಿ ಇರೋದು ತಾಲೀಬಾನಿ ಸರ್ಕಾರವಾ?

ನೈತಿಕ ಪೊಲೀಸ್ ಗಿರಿ ವಿಡಿಯೋ ಸಾಕ್ಷ್ಯ ಇದ್ದರೂ ದುರ್ಬಲ ಸೆಕ್ಷನ್ ನಡಿ ಕೇಸು ದಾಖಲು? ಮಾಡಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ. ಐವರು ಆರೋಪಿಗಳು ಹಿಂದೂ ಪರ ಸಂಘಟನೆ ಕಾರ್ಯಕರ್ತರಾಗಿದ್ದಾರೆ. ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಕೇರಳದ ಕೊಲ್ಲಂ ನಿವಾಸಿ ಸವಿಯೋ.ಟಿ.ಆಲ್ಫೋನ್ಸಾ ದೂರಿನಡಿ ಪ್ರಕರಣ ದಾಖಲಾಗಿತ್ತು ಪೊಲೀಸ್ ಅಧಿಕಾರಿ ಅಂಗಲಾಚಿದರೂ ವಿದ್ಯಾರ್ಥಿಗಳಿದ್ದ ವಾಹನದ ಮೇಲೆ ದಾಳಿ ನಡೆದಿತ್ತು.

ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ ಗೇಟ್ ಬಳಿ ನೈತಿಕ ಪೊಲೀಸಗಿರಿ ನಡೆದ ಪ್ರಕರಣ ಉಡುಪಿಯ ಮಲ್ಪೆ ಬೀಚ್ ಗೆ ತೆರಳಿ ವಾಪಾಸ್ ಆಗ್ತಿದ್ದ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳು ಮುಗಿಬಿದ್ದಿದ್ದರು. ಅನ್ಯಕೋಮಿನ ವಿದ್ಯಾರ್ಥಿಗಳು ಅನ್ನೋ ಮಾಹಿತಿ ಹಿನ್ನೆಲೆ ಹಿಂದೂ ಕಾರ್ಯಕರ್ತರು ದಾಳಿ ನಡೆಸಿದ್ದರು ಎನ್ನಲಾಗಿದೆ. ಸಿವಿಲ್ ಡ್ರೆಸ್ ನಲ್ಲಿದ್ದ ಪೊಲೀಸ್ ಅಂಗಲಾಚಿದರೂ ಕೇಳದೇ ದಾಳಿ ಮಾಡಿದ್ದರು. 

ಇದೀಗ ಮತ್ತೆ ಇಂತಹದ್ದೆ ಪ್ರಕರಣ ಬೆಳಕಿಗೆ ಬಂದಿದೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು