ಹುಬ್ಬಳ್ಳಿ: ಕೊರೋನಾ ಇರದಿದ್ರೂ ಕೋವಿಡ್ ವಾರ್ಡ್‌ಗೆ ಶಿಫ್ಟ್‌, ಹೃದಯಾಘಾತದಿಂದ ವೃದ್ಧ‌ ಸಾವು

By Suvarna News  |  First Published Oct 9, 2020, 9:21 AM IST

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು| ಕೊರೋನಾ ವಾರ್ಡ್‌ನಲ್ಲಿಯೇ ಮೃತಪಟ್ಟ ವೃದ್ಧ‌| ಸಾವಿನ ನಂತರ ಮೃತ ವೃದ್ಧನಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್‌| ಕಿಮ್ಸ್ ನಿರ್ಲಕ್ಷ್ಯದ ವಿರುದ್ಧ ಮೃತ ವೃದ್ಧನ ಕುಟುಂಬಸ್ಥರ ಆಕ್ರೋಶ|


ಹುಬ್ಬಳ್ಳಿ(ಅ.09): ಸದಾ ಯಾವುದಾದರೊಂದು ಯಡವಟ್ಟು ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿರುವ ಕಿಮ್ಸ್‌ ಆಸ್ಪತ್ರೆ ಇದೀಗ ವೈದ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ. ಹೌದು, ಕೊರೋನಾ ಸೋಂಕು ಇರದಿದ್ದರೂ ವೃದ್ಧನೊಬ್ಬನನ್ನು ಕೋವಿಡ್ ವಾರ್ಡ್‌ಗೆ ದಾಖಲಿಸಿ ಇಲ್ಲಿನ ವೈದ್ಯರು ಯಡವಟ್ಟು ಮಾಡಿಕೊಂಡಿಕೊಂಡಿದ್ದಾರೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿರಿಯ ಜೀವ ಬಲಿಯಾಗಿದೆ. 

ಕೊರೋನಾ ವಾರ್ಡ್‌ನಲ್ಲಿಯೇ ಹೃದಯಾಘಾತದಿಂದ ವೃದ್ಧ‌ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸುಳ್ಳ ಗ್ರಾಮದ ಬಸಪ್ಪ ಹುಬ್ಬಳ್ಳಿ (72) ಎಂಬುವರೇ ಮೃತಪಟ್ಟ ವೃದ್ಧರಾಗಿದ್ದಾರೆ. ಕಾಲು ನೋವಿನಿಂದ ಬಳಲುತ್ತಿದ್ದ ಬಸಪ್ಪ ಹುಬ್ಬಳ್ಳಿ ಅ. 2ರಂದು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ. 6ರಂದು ಬಸಪ್ಪ ಹುಬ್ಬಳ್ಳಿ ಸಾವನ್ನಪ್ಪಿದ್ದ. 

Tap to resize

Latest Videos

ಹುಬ್ಬಳ್ಳಿ: 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ವೈದ್ಯರಿಂದ ಮೌನ ಪ್ರತಿಭಟನೆ

ತನಗೆ ಕೊರೋನಾ ಬಂದಿದೆ ಎಂಬ ಸುದ್ದಿ ಕೇಳಿ ಬಸಪ್ಪ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅ. 6ರಂದು ಬಸಪ್ಪ ಹುಬ್ಬಳ್ಳಿ ಮೃತಪಟ್ಟಿದ್ದರು. ಕೋವಿಡ್‌ನಿಂದ ವೃದ್ಧ ಮೃತಪಟ್ಟಿದ್ದಾಗಿ ಕಿಮ್ಸ್ ವೈದ್ಯರು ಡೆತ್ ಸಮರಿ ಬರೆದಿದ್ದರು. ಕೊರೋನಾ ನಿಯಮಾವಳಿಯಂತೆ ಕುಟುಂಬಸ್ಥರು ಬಸಪ್ಪ ಅವರ ಅಂತ್ಯಕ್ರಿಯೆಯನ್ನ ಮಾಡಲಾಗಿತ್ತು.

ಸಾವಿನ ನಂತರ ಮೃತ ವೃದ್ಧನಿಗೆ ಕೋವಿಡ್ ನೆಗೆಟಿವ್ ಅಂತ ವರದಿ ಬಂದಿದೆ. ಬಸಪ್ಪ ಹುಬ್ಬಳ್ಳಿ ಮೃತಪಟ್ಟ ಬಳಿಕ ಸ್ವ್ಯಾಬ್‌ ಸಂಗ್ರಹಿಸಿ ಡಿಮ್ಹಾನ್ಸ್‌ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಕೋವಿಡ್ ನೆಗೆಟಿವ್ ಎಂದು ರಿಪೋರ್ಟ್‌ ಬಂದಿದೆ. ಕಿಮ್ಸ್ ನಿರ್ಲಕ್ಷ್ಯದ ವಿರುದ್ಧ ಬಸಪ್ಪ ಹುಬ್ಬಳ್ಳಿ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!