ದೇಗುಲಗಳ ನಿರ್ಮಾಣದಿಂದ ನೆಮ್ಮದಿ ಸಾಧ್ಯ: ಶೀನಪ್ಪ

By Kannadaprabha News  |  First Published Oct 5, 2023, 7:55 AM IST

ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿ ಶ್ರದ್ಧಾ ಭಕ್ತಿ-ಭಾವನೆಯಿಂದ ಧಾರ್ಮಿಕ ಪೂಜಾಕಾರ್ಯಗಳನ್ನು ನಡೆಸಿದಲ್ಲಿ ಗ್ರಾಮಗಳ ಏಳಿಗೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಶೀನಪ್ಪ ತಿಳಿಸಿದರು.


  ತಿಪಟೂರು :  ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿ ಶ್ರದ್ಧಾ ಭಕ್ತಿ-ಭಾವನೆಯಿಂದ ಧಾರ್ಮಿಕ ಪೂಜಾಕಾರ್ಯಗಳನ್ನು ನಡೆಸಿದಲ್ಲಿ ಗ್ರಾಮಗಳ ಏಳಿಗೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಶೀನಪ್ಪ ತಿಳಿಸಿದರು.

ತಾಲೂಕಿನ ಈಚನೂರು ಗ್ರಾಮದ ಶ್ರೀ ರುದ್ರೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೂಜ್ಯರು ಮಂಜೂರು ಮಾಡಿದ 5 ಲಕ್ಷ ರು. ಡಿಡಿಯನ್ನು ದೇವಸ್ಥಾನ ಕಮಿಟಿ ಸದಸ್ಯರಿಗೆ ವಿತರಣೆ ಮಾಡಿ ಮಾತನಾಡಿದ ಅವರು, ದೇವಸ್ಥಾನಗಳ ನಿರ್ಮಾಣದಿಂದ ಜನರಲ್ಲಿ ಧಾರ್ಮಿಕ ನಂಬಿಕೆಯ ಜೊತೆಗೆ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿಯ ಜೊತೆಗೆ ಗ್ರಾಮಸ್ಥರಲ್ಲಿ ಒಗ್ಗಟ್ಟು, ಐಕ್ಯತೆ ಮೂಡಲಿದೆ. ಇದಕ್ಕಾಗಿ ಪೂಜ್ಯರು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಸಾಕಷ್ಟು ಅನುದಾನಗಳನ್ನು ನೀಡಲಾಗುತ್ತಿದ್ದು ತಾಲೂಕಿನಾದ್ಯಂತ ವಿವಿಧ ದೇವಸ್ಥಾನಗಳಿಗೆ ಅನುದಾನ ನೀಡಲಾಗಿದ್ದು ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

Tap to resize

Latest Videos

ಯೋಜನೆಯ ಜಿಲ್ಲಾ ನಿರ್ದೇಶಕರಾದ ದಯಾಶೀಲಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಬಡ ಮಧ್ಯಮ ವರ್ಗದ ಜನರಿಗೆ, ಕೃಷಿ ಚಟುವಟಿಕೆ, ವೃತ್ತಿಪರ ಶಿಕ್ಷಣ, ಹೈನುಗಾರಿಕೆ, ಸ್ವಯಂ ಉದ್ಯೋಗ ಸೇರಿದಂತೆ ಅನೇಕ ರೀತಿಯ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದೆಎಂದರು.

ನುಗ್ಗೇಹಳ್ಳಿ ಮಠದ ಶ್ರೀ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾಲೂಕು ಯೋಜನಾಧಿಕಾರಿ ಸುರೇಶ್, ಕಮಿಟಿ ಅಧ್ಯಕ್ಷ ನಂದೀಶ್, ವಲಯ ಮೇಲ್ವಿಚಾರಕ ಮುನಿಕೃಷ್ಣ, ಸೇವಾಪ್ರತಿನಿಧಿ ವಿಜಯಲಕ್ಷ್ಮಿ ಮತ್ತಿತರರಿದ್ದರು.

ಹೊಯ್ಸಳ ದೇವಾಲಯಗಳಿಗೆ ಮೆಚ್ಚುಗೆ

ನವದೆಹಲಿ (ಸೆಪ್ಟೆಂಬರ್ 24, 2023): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನ 105 ನೇ ಸಂಚಿಕೆಯನ್ನು ಉದ್ದೇಶಿಸಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪ್ರಧಾನಿ ಮೋದಿ ಇಸ್ರೋ ಚಂದ್ರಯಾನ - 3 ಯಶಸ್ಸು ಹಾಗೂ ಜಿ - 20 ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ಯುನೆಸ್ಕೋ ಮಾನ್ಯತೆ ಅಥವಾ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಮಾನ್ಯತೆ ದೊರೆತಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇಂದು ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರ ಅದ್ದರಿಂದ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಮಿಷನ್ ಲ್ಯಾಂಡಿಂಗ್ ಸಮಯದಲ್ಲಿ 80 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದ ವಿಡಿಯೋವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. "ಚಂದ್ರಯಾನ 3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿರುವಾಗ, ಕೋಟಿಗಟ್ಟಲೆ ಜನರು ಈ ಘಟನೆಯ ಪ್ರತಿಯೊಂದು ಕ್ಷಣವನ್ನು ವಿವಿಧ ಮಾಧ್ಯಮಗಳ ಮೂಲಕ ಏಕಕಾಲದಲ್ಲಿ ವೀಕ್ಷಿಸುತ್ತಿದ್ದರು. #ISRO ಯ ಯೂಟ್ಯೂಬ್ ಲೈವ್ ಚಾನೆಲ್‌ನಲ್ಲಿ 80 ಲಕ್ಷಕ್ಕೂ ಹೆಚ್ಚು ಜನರು ಈ ಘಟನೆಯನ್ನು ವೀಕ್ಷಿಸಿದ್ದಾರೆ ಎಂದು ಮೋದಿ ಹೇಳಿದರು. ಆಗಸ್ಟ್ 23 ರಂದು ಪ್ರಗ್ಯಾನ್ ರೋವರ್ ಜೊತೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಮಾಡಿದ್ದು, ಆ ದಿನವನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಲಾಗಿದೆ. ಇನ್ನು, ಜಿ20 ಪ್ರತಿಯೊಬ್ಬ ಭಾರತೀಯನ ಸಂತೋಷವನ್ನು ದ್ವಿಗುಣಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನು ಓದಿ: Mann ki baat: ಚಂದ್ರಯಾನ ಮಿಷನ್ ನವ ಭಾರತದ ಸ್ಪೂರ್ತಿ, ನಾರಿ ಶಕ್ತಿಯ ಜೀವಂತ ಉದಾಹರಣೆ: ಪ್ರಧಾನಿ ಮೋದಿ

ಅಲ್ಲದೆ, ಮುಂಬರುವ ‘ವರ್ಡ್ ಟೂರಿಸಂ ಡೇ’ ಕುರಿತು ಮೋದಿ ಪ್ರಸ್ತಾಪಿಸಿದ್ದಾರೆ. ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ'. ಕೆಲವರು ಪ್ರವಾಸೋದ್ಯಮವನ್ನು ಪ್ರವಾಸ ಮತ್ತು ಪ್ರಯಾಣದ ಸಾಧನವಾಗಿ ನೋಡುತ್ತಾರೆ, ಆದರೆ ಪ್ರವಾಸೋದ್ಯಮದ ಅತ್ಯಂತ ದೊಡ್ಡ ಅಂಶವು ಉದ್ಯೋಗಕ್ಕೆ ಸಂಬಂಧಿಸಿದೆ ಎಂದು ಈ ವೇಳೆ ಮೋದಿ ಹೇಳಿದ್ದಾರೆ. ಈ ಮಧ್ಯೆ,  ಭಾರತೀಯ ಸಂಸ್ಕೃತಿಯ ಉತ್ಸಾಹಿ ಜರ್ಮನ್ ಯುವತಿ ಕ್ಯಾಸ್ಸಂಡ್ರಾ ಮೇ ಭಾರತೀಯ ಹಾಡು ಹಾಡುವುದನ್ನು ಪ್ರಶಂಸಿಸಿದ್ದು, ಆಕೆ ಹಾಡಿರುವ 2 ಭಾರತೀಯ ಹಾಡನ್ನು ಮನ್‌ ಕೀ ಬಾತ್‌ನಲ್ಲಿ ಪ್ಲೇ ಮಾಡಲಾಯ್ತು. 

click me!