ತುಮಕೂರಿನ ಮಲ್ಲಸಂದ್ರ ಡೈರಿಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರನ್ನ ನಾನು ನೋಡಿದ್ದೇನೆ ಆದರೆ ಈಶ್ವರಪ್ಪನವರ ರೀತಿ ಕೆಲಸ ಮಾಡುವುದು ಬಹಳಷ್ಟು ವಿರಳ. ಈಶ್ವರಪ್ಪನವರು ನನಗೆ ತುಂಬಾ ಹತ್ತಿರದ ಪರಿಚಯ ಯಾವ ರೈತರು ಯಾವುದೇ ಹಳ್ಳಿಗಳಲ್ಲಿ ಏನೇ ಕೇಳಿದರು ಇಲ್ಲ ಎನ್ನದಂತೆ ತನ್ನ ಕೈಲಾದ ಮಟ್ಟಿಗೆ ಸಹಕಾರ ನೀಡುವುದು ಈಶ್ವರಪ್ಪನವರ ದೊಡ್ಡಗುಣ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ : ತುಮಕೂರಿನ ಮಲ್ಲಸಂದ್ರ ಡೈರಿಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರನ್ನ ನಾನು ನೋಡಿದ್ದೇನೆ ಆದರೆ ಈಶ್ವರಪ್ಪನವರ ರೀತಿ ಕೆಲಸ ಮಾಡುವುದು ಬಹಳಷ್ಟು ವಿರಳ. ಈಶ್ವರಪ್ಪನವರು ನನಗೆ ತುಂಬಾ ಹತ್ತಿರದ ಪರಿಚಯ ಯಾವ ರೈತರು ಯಾವುದೇ ಹಳ್ಳಿಗಳಲ್ಲಿ ಏನೇ ಕೇಳಿದರು ಇಲ್ಲ ಎನ್ನದಂತೆ ತನ್ನ ಕೈಲಾದ ಮಟ್ಟಿಗೆ ಸಹಕಾರ ನೀಡುವುದು ಈಶ್ವರಪ್ಪನವರ ದೊಡ್ಡಗುಣ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹನುಮನಹಳ್ಳಿ ಗ್ರಾಮದಲ್ಲಿ ತುಮಕೂರು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಡೆದ ರಾಸುಗಳ ಗುಂಪು ವಿಮಾ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಹಳ್ಳಿಗಳಿಗೆ ಇಂದು ಡೈರಿಗಳು ಬಂದಿವೆ ಎಂದರೆ ಅದಕ್ಕೆ ಈಶ್ವರಪ್ಪ ಕಾರಣ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಹಾಲು ಹಾಕುವ ರೈತ ಮೃತಪಟ್ಟರೆ ಆತನ ಕುಟುಂಬಕ್ಕೆ ನೆರವು, ರೈತನಿಗೆ ಆಸರೆಯಾಗಿರುವ ರಾಸುಗಳು ಮೃತಪಟ್ಟರೆ ಸೂಕ್ತ ಪರಿಹಾರ ಹೀಗೆ ಅನೇಕ ಕೊಡುಗೆಗಳು ರೈತರ ಕುಟುಂಬಕ್ಕೆ ಈಶ್ವರಪ್ಪನವರ ಕಡೆಯಿಂದ ದೊರಕಿದೆ ಎಂದು ಹೇಳಿದರು.
undefined
ಅದ್ದರಿಂದಲೇ ಎಂದಿಗೂ ಈಶ್ವರಪ್ಪನವರನ್ನು ಕಂಡರೆ ತಾಲೂಕಿನ ರೈತರಿಗೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ ಮುಂಬರುವ ಹಾಲು ಒಕ್ಕೂಟದ ಚುನಾವಣೆಯಲ್ಲಿ ಈಶ್ವರಪ್ಪನವರು ಮತ್ತೊಮ್ಮೆ ನಿರ್ದೇಶಕರಾಗಿ ಆಯ್ಕೆಯಗಿ ಉನ್ನತ ಸ್ಥಾನಮಾನಗಳು ಅವರಿಗೆ ಸಿಗಲಿ ಎಂದು ಆಶಿಸುತ್ತೇನೆ ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಈಶ್ವರಪ್ಪ ಮಾತನಾಡಿ, ನಾನು ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕನಾಗಿದ್ದೇನೆ. ನನ್ನನ್ನು ನಿರ್ದೇಶಕನಾಗಿ ಆಯ್ಕೆ ಮಾಡಿದಂದಿನಿಂದ ಇಲ್ಲಿಯವರೆಗೂ ನನ್ನ ತಾಲೂಕಿನ ರೈತರಿಗೆ ನಮ್ಮ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಯಾವ ಯಾವ ಅನುಕೂಲಗಳು ದೊರೆಯಬೇಕು ಬಂದಂತ ಅನುದಾನಗಳನ್ನ ಸಕಾಲಕ್ಕೆ ನೀಡಿ ರೈತರ ಕುಟುಂಬಕ್ಕೆ ನೆರವಾಗಿದ್ದೇನೆ ಎಂದರು.
ನನ್ನ ತಾಲೂಕಿನಲ್ಲಿ ಇಲ್ಲಿವರೆಗೆ 50ಕ್ಕೂ ಹೆಚ್ಚು ಹಾಲಿನ ಡೈರಿಗಳನ್ನ ತೆರೆದಿದ್ದೇನೆ ಅನಾರೋಗ್ಯದಿಂದ ಸಾವನಪ್ಪಿದ ರಾಸುಗಳ ರೈತರಿಗೆ ವಿಮೆಯ ಮುಖಾಂತರ ಹಣ ಬರುವಂತೆ ಮಾಡಿ ಅವರು ಮತ್ತೆ ರಸುಗಳನ್ನ ಕೊಂಡು ಅವರ ಜೀವನಕ್ಕೆ ಆಧಾರವಾಗುವಂತೆ ಸಹಕಾರ ನೀಡಿದ್ದಾನೆ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುವಂತೆ ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ನಮ್ಮ ಉತ್ಪಾದಕರ ಸಹಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನ ದೊರಕಿಸಿಕೊಡುತ್ತಿದ್ದೇವೆ ಎಂದರು.
ಇದೀಗ ರಾಸುಗಳ ಗುಂಪು ವಿಮಾ ಯೋಜನೆ ಅಡಿಯಲ್ಲಿ ಅತಿ ಹೆಚ್ಚು ರಾಸುಗಳಿಗೆ ವಿಮೆಯನ್ನು ಮಾಡಿಸುತ್ತಿದ್ದೇವೆ. ಇದರಿಂದ ಆ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ ನನ್ನ ತಾಲೂಕಿನ ರೈತರಿಗೆ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುವುದೇ ನನ್ನ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ ಹನುಮಾನ್, ತಾಲೂಕು ಹಾಲು ಒಕ್ಕೂಟದ ಮುಖ್ಯಸ್ಥ ರಂಜಿತ್, ವಿಸ್ತಾರ ಅಧಿಕಾರಿ ಸಹನಾ ಸ್ವಾಮಿ, ಪಶು ವೈದ್ಯಾಧಿಕಾರಿ ಡಾ.ತೇಜಸ್ವಿ, ಡಾ. ಪುಣ್ಯಶ್ರೀ, ಹಾಗೂ ರೈತರು ಪಾಲ್ಗೊಂಡಿದ್ದರು.